• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್. ಜಿ. ಶಂಕರ್ ದಿಢೀರ್ ವರ್ಗಾವಣೆ

By ಮೈಸೂರು ಪ್ರತಿನಿಧಿ
|

ಮೈಸೂರು, ಆಗಸ್ಟ್ 28: ಈ ಬಾರಿಯ ಮೈಸೂರು ದಸರಾ ಮಹೋತ್ಸವಕ್ಕೆ ಕೇವಲ ಒಂದೂವರೆ ತಿಂಗಳು ಬಾಕಿ ಇರುವಾಗಲೇ ಜಿಲ್ಲಾಧಿಕಾರಿ ಅಭಿರಾಮ್. ಜಿ. ಶಂಕರ್ ಅವರನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅಚ್ಚರಿ ಮೂಡಿಸಿದೆ.

   Bannerghatta Park ಆನೆಗೆ ಪ್ರಸಿದ್ಧ ಹೆಸರು | Oneindia Kannada

   ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ಅಭಿರಾಮ್.ಜಿ.ಶಂಕರ್ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದೆ. ಅದೇ ರೀತಿಯಾಗಿ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ಬಿ.ಶರತ್ ಅವರನ್ನು ನೇಮಕ ಮಾಡಿದ್ದು, ಇವರು ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದರು.

   ಅಭಿರಾಮ್.ಜಿ. ಶಂಕರ್ ಅವರು ಸದ್ಯದಲ್ಲೇ ಕೇಂದ್ರ ಸರ್ಕಾರದ ಸೇವೆಗೆ ಹೋಗುವವರಿದ್ದಾರೆ. ಅವರು ಕೇಂದ್ರ ಸರ್ಕಾರದ ಸೇವೆಗೆ ಖಾತರಿಯಾದ ಹಿನ್ನೆಲೆಯಲ್ಲಿ ಈ ವರ್ಗಾವಣೆಯಾಗಿದ್ದು, ತಾತ್ಕಾಲಿಕವಾಗಿ ಆಡಳಿತ ತರಬೇತಿ ಸಂಸ್ಥೆಗೆ ನಿಯೋಜಿಸಲಾಗಿದೆ.

   ಅಭಿರಾಮ್ ಜಿ. ಶಂಕರ್ ಅವರು ಕೇಂದ್ರ ಸರ್ಕಾರದ ಸೇವೆ ಹೋಗುವ ಪ್ರಸ್ತಾವನೆ ಎರಡು-ಮೂರು ತಿಂಗಳ ಹಿಂದೆಯೇ ಆರಂಭವಾಗಿತ್ತು ಎಂದು ಹೇಳಲಾಗಿದೆ.

   English summary
   Abhiram G Shankar has been appointed joint director of the Mysuru Administrative Training Institute and has been given an official order from the state government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X