• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ

|

ಮೈಸೂರು, ಅಕ್ಟೋಬರ್ 13: ದಸರಾ ಹಬ್ಬದ ಆಚರಣೆಗೆ ಸೂಕ್ತ ಸಿದ್ಧತೆ ನಡೆಸುತ್ತಿರುವ ಕಾರಣದಿಂದ ಮೈಸೂರಿನ ಪ್ರಸಿದ್ಧ ಧಾರ್ಮಿಕ ಸ್ಥಳ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದೆ.

ಐದು ದಿನಗಳ ಕಾಲ ಸಾರ್ವಜನಿಕರು ಬೆಟ್ಟಕ್ಕೆ ಪ್ರವೇಶಿಸುವುದನ್ನು ಮತ್ತು ದೇವರ ದರ್ಶನ ಪಡೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶದಲ್ಲಿ ತಿಳಿಸಿದ್ದಾರೆ. ಈ ಆದೇಶವು ಬುಧವಾರ ಮಧ್ಯರಾತ್ರಿಯಿಂದಲೇ (ಅ. 14) ಜಾರಿಯಾಗಲಿದೆ.

ಕುತೂಹಲ ಕೆರಳಿಸುತ್ತದೆ ಮೈಸೂರಿನ ಈ "ಮದ್ದಿನ ಮನೆ"

ಅಕ್ಟೋಬರ್ 14ರ ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ್ 18ರ ಮಧ್ಯರಾತ್ರಿ 12 ಗಂಟೆಯವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ. ಹಾಗೆಯೇ ಅಕ್ಟೋಬರ್ 23ರ ಬೆಳಿಗ್ಗೆ 5 ಗಂಟೆಯಿಂದ ನವೆಂಬರ್ 1ರ ಮಧ್ಯರಾತ್ರಿ 12 ಗಂಟೆಯವರೆಗೂ ದೇವರ ದರ್ಶನ ಮತ್ತು ಮೆಟ್ಟಿಲುಗಳ ಮೂಲಕ ಸಾರ್ವಜನಿಕರು ಬರುವುದನ್ನು ನಿಷೇಧಿಸಲಾಗಿದೆ ಎಂದು ಆದೇಶ ತಿಳಿಸಿದೆ.

ಗ್ರಾಮೀಣ ಜನರು ದಯವಿಟ್ಟು ದಸರಾ ನೋಡಲು ಬರಬೇಡಿ; ಮೈಸೂರು ಜಿ.ಪಂ. ಸಿಇಒ ಮನವಿ

ಅ. 17ರಂದು ದಸರಾ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಆಗಮಿಸುವ ಆಹ್ವಾನಿತರು ಮತ್ತು ಅ. 15 ರಿಂದ 17ರವರೆಗೆ ಪೂರ್ವಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

English summary
Mysuru district administration has issued several days ban on entry of public to Chamundi Betta as Dasara preperation works will be taken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X