• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಶಿಲ್ಪಾನಾಗ್ ಆರೋಪಕ್ಕೆ ರೋಹಿಣಿ ಸಿಂಧೂರಿ ಮೊದಲ ಬಾರಿ ಪ್ರತಿಕ್ರಿಯೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 4: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮಾಡಿರುವ ಕಿರುಕುಳ ಆರೋಪದ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

Recommended Video

   ಶಿಲ್ಪಾ ನಾಗ್ ವಿಚಾರವಾಗಿ ಸ್ಪಷ್ಟನೆ ನೀಡಿದ ರೋಹಿಣಿ ಸಿಂಧೂರಿ | Oneindia Kannada

   ಮಾಧ್ಯಮಗಳ ಜತೆ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, ಕೊವಿಡ್ ಸಂದರ್ಭ ಹಿನ್ನೆಲೆ ಎಲ್ಲರ ಸಹಕಾರ ಬೇಕಾಗುತ್ತದೆ. ಅಂಕಿ ಅಂಶಗಳನ್ನು ಅಧಿಕೃತವಾಗಿ ನಾವು ಕೊಡುತ್ತಿದ್ದೇವೆ. ಕೊರೊನಾ ಸೋಂಕು ವಿಚಾರದಲ್ಲಿ ಅಂಕಿ-ಅಂಶ ತಪ್ಪಾಗಬಾರದು. ವಾರ್ಡ್, ಪಂಚಾಯಿತಿಗಳಲ್ಲಿ ಈವತ್ತು 40 ನಾಳೆ 400 ಬರಬಾರದು.

   ಅಂಕಿ-ಅಂಶ ಸರಿ ಇರಬೇಕು ಎಂಬ ಕಾರಣಕ್ಕೆ ನಮ್ಮ ಒತ್ತಡ ಅಷ್ಟೇ. ನಾನು ಅಥಾರಿಟಿ ಅಲ್ಲ ಅನ್ನುವುದನ್ನು ಸಿಎಸ್ (ಸರ್ಕಾರದ ಮುಖ್ಯ ಕಾರ್ಯದರ್ಶಿ) ಕ್ಲಾರಿಫೈ ಮಾಡುತ್ತಾರೆ. ಆಫೀಸರ್ಸ್ ಸಮಸ್ಯೆ ಏನೇ ಇದ್ದರೂ ಫೋರಂ ಇರುತ್ತದೆ ಅಲ್ಲಿ ಹೇಳಬಹುದು. ಹೈಯರ್ ಆರ್ಮಿ ಇರುತ್ತದೆ ಅಲ್ಲಿ ಹೇಳಬಹುದಿತ್ತು ಎಂದು ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ.

   ಜುಲೈ ಒಳಗೆ ಮೈಸೂರು ಜಿಲ್ಲೆಯ‌ನ್ನು ಕೋವಿಡ್ ಮುಕ್ತ ಮಾಡಬೇಕು. ಹೀಗಾಗಿ ಅಧಿಕೃತ ಮಾಹಿತಿ ತಪ್ಪಾಗಬಾರದು ಎಂಬುದು ನನ್ನ ಉದ್ದೇಶ. ಈ ಮಧ್ಯೆ ಸಿಎಸ್ ಮೈಸೂರಿಗೆ ಬರುತ್ತಿದ್ದಾರೆ, ಎಲ್ಲವನ್ನು ಅವರ ಗಮನಕ್ಕೆ ತರುತ್ತೇನೆ. ಈಗಾಗಲೇ ನಾನು ಹೇಳಬೇಕಾದುದನೆಲ್ಲಾ ಪ್ರೆಸ್‌ನೋಟ್‌ನಲ್ಲಿ ಹೇಳಿದ್ದೇನೆ. ಸಮನ್ವಯತೆ ಸಮಸ್ಯೆಯಾಗಿತ್ತು ಎಂಬ ಭಾವನೆ ನನಗಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದರು.

   English summary
   Mysuru DC Rohini Sindhuri has for the first time commented on the harassment allegations made by Mysuru city Corporation Commissioner Shilpa Nag.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X