• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾದಲ್ಲಿ ಗಮನ ಸೆಳೆಯಲಿರುವ 47 ಸ್ತಬ್ಧ ಚಿತ್ರಗಳು

|
Google Oneindia Kannada News

ಮೈಸೂರು, ಅಕ್ಟೋಬರ್‌, 05: ಮೈಸೂರಿಲ್ಲಿ ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಒಟ್ಟು 47 ಸ್ತಬ್ಧ ಚಿತ್ರಗಳು ಭಾಗಿ ಆಗುತ್ತಿವೆ. ಎರಡು ವರ್ಷ ಮಹಾಮಾರಿ ಕೊರೊನಾ ಹಿನ್ನೆಲೆ ಕಳೆಗುಂದಿದ್ದ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ, ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ವಿವಿಧ ರಾಜ್ಯ, ವಿದೇಶಗಳಿಂದ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡಿದ್ದಾರೆ. ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಆರಂಭ ಆಗಲಿದ್ದು, ಈಗಾಗಲೇ 47 ಸ್ತಬ್ಧ ಚಿತ್ರಗಳು ಅರಮನೆ ಆವರಣದಲ್ಲಿ ನಿಂತಿದ್ದು, ವೀಕ್ಷಕರ ಗಮನ ಸೆಳೆದಿವೆ.

ಈ ಬಾರಿ 47 ಸ್ತಬ್ಧ ಚಿತ್ರಗಳು ಭಾಗಿ ಆಗಲಿದ್ದು, ಅದರಲ್ಲೂ ಚಾಮರಾಜನಗರ ಜಿಲ್ಲೆಯಿಂದ ಮಾಡಿರುವ ಅಪ್ಪು ಸ್ತಬ್ಧಚಿತ್ರ ಈಗಾಗಲೇ ವೀಕ್ಷಕರ ಗಮನ ಸೆಳೆದಿದೆ. ಹೀಗೆ ಪ್ರಮುಖ ನಗರಳಿಂದ ಭಾಗಿಯಾಗಲಿರುವ ಸ್ತಬ್ಧಚಿತ್ರಗಳನ್ನು ಹೀಗೆ ನೋಡಬಹುದಾಗಿದೆ.

ಐತಿಹಾಸಿಕ ಜಂಬೂ ಸವಾರಿ ಹೇಗೆ ನಡೆಯಲಿದೆ ಗೊತ್ತಾ?ಐತಿಹಾಸಿಕ ಜಂಬೂ ಸವಾರಿ ಹೇಗೆ ನಡೆಯಲಿದೆ ಗೊತ್ತಾ?

ಬೆಂಗಳೂರು ಗ್ರಾಮಾಂತರ - ಮನ್ಯಾಪುರ ದೇವಸ್ಥಾನ, ಕಪಿಲೇಶ್ಷರ ದೇವಸ್ಥಾನ, ಜೈನಬಸದಿ, ಸಿಂಪಾಡಿಪುರ ವೀಣೆ, ಬೆಂಗಳೂರು ನಗರ - ಕಡಲೆಕಾಯಿ ಪರಿಷೆ, ಬಸವನ ಗುಡಿ, ಬೀದರ್‌ನಿಂದ ನೂತನ ಅನುಭವ ಮಂಟಪ ಸ್ತಬ್ಧಚಿತ್ರ ಪ್ರದರ್ಶನ ಆಗಲಿದೆ. ಇನ್ನು ಚಾಮರಾಜನಗರ - ವನ್ಯಧಾಮ, ಶ್ರೀಮಹದೇಶ್ವೇರ ವಿಗ್ರಹ, ಪುನೀತ್ ರಾಜಕುಮಾರ್ ಪ್ರತಿಮೆ, ಚಿಕ್ಕಬಳ್ಳಾಪುರ - ಗ್ರೀನ್ ನಂದಿ & ಕ್ಲೀನ್ ನಂದಿ, ಭೋಗೇಶ್ವರ ದೇವಸ್ಥಾನ, ಚಿಕ್ಕಮಗಳೂರು - ದ್ವಾದಶ ಜಿಲ್ಲೆಗಳಿಗೆ ಜೀವನಾಡಿ ಚಿಕ್ಕಮಗಳೂರು ಜಿಲ್ಲೆಯು ಸಪ್ತ ನದಿಗಳ ತವರು, ಚಿತದುರ್ಗದಿಂದ ವಾಣಿವಿಲಾಸ ಜಲಾಶಯ, ಒನಕೆ ಓಬ್ಬವ, ಕುದುರೆ ಮೇಲೆ ಆಸೀನರಾಗಿರುವ ಮದಕರಿ ನಾಯಕ ಪ್ರತಿಮೆ, ದೀಪಸ್ತಂಭ ಗಮನ ಸೆಳೆಯಲಿವೆ.

ಮೈಸೂರಿನಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನ

ಮೈಸೂರಿನಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನ

ದಕ್ತಿಣ ಕನ್ನಡ - ಕಂಬಳ, ಹುಲಿವೇಷ, ಭೂತ ಕೋಲ, ದಾವಣಗೆರೆ - ಸಂತೆ ಬೆನ್ನೂರು ಪುಷ್ಕರಣಿ, ಧಾರವಾಡ - ಸಂಗೀತ ದಿಗ್ಗಜರು, ಗದಗ - ಶ್ರೀ ಕ್ಷೇತ್ರ ಶ್ರೀಮಂತಗಡ, ಹೊಳಲಮ್ಮ ದೇವಿ ಮತ್ತು ಶಿವಾಜಿ, ಹಾಸನ - ಬೇಲೂರು ಚೆನ್ನಕೇಶವ ದೇವಸ್ಥಾನ, ಶ್ರವಣಬೆಳಗೊಳ ಗೊಮ್ಮಟೇಶ್ವರ, ಹಾವೇರಿ - ಗುರು ಗೋವಿಂದ ಭಟ್ರು, ಸಂತೆ ಶಿಶುನಾಳ ಷರೀಫರು, ಮುಕ್ತೇಶ್ವರ ದೇವಾಲಯ, ಕಲಬುರಗಿ - ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ, ವನ್ಯಜೀವಿ ಧಾಮ, ಕೊಡಗು - ಬ್ರಹ್ಮಗಿರಿ ಬೆಟ್ಟ, ಭಗಂಡೇಶ್ವರ ದೇವಸ್ಥಾನ, ತಲಕಾವೇರಿ ತೀರ್ಥೋದ್ಭವ, ಇರ್ಪು ಜಲಾಶಯ, ಕೋಲಾರ - ಬಿಕೆಎಸ್ ಅಯ್ಯಂಗಾರ್ ಯೋಗನಾಥ್ ಹಾಗೂ ಅಂತರಗಂಗೆ ಬೆಟ್ಟ, ಕೊಪ್ಪಳ - ಆನೆಗುಂದಿ ಬೆಟ್ಟ, ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟದ ಸ್ತಬ್ಧಚಿತ್ರ ಭಾಗಿ ಆಗಲಿದೆ.

ಚಾಮರಾಜನಗರದಿಂದ ಅಪ್ಪು ಸ್ತಬ್ಧಚಿತ್ರ

ಚಾಮರಾಜನಗರದಿಂದ ಅಪ್ಪು ಸ್ತಬ್ಧಚಿತ್ರ

ಮಂಡ್ಯ - ಮಂಡ್ಯ ಜಿಲ್ಲೆಯ ದೇಗುಲಗಳು, ಮೈಸೂರು - ಮೈಸೂರು ಜಿಲ್ಲೆ ವಿಶೇಷತೆಗಳು, ರಾಯಚೂರು - ಸಿರಿಧಾನ್ಯ ಬೆಳೆಗಳ ಅಭಿಯಾನ, ರಾಮನಗರ - ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ, ಶಿವಮೊಗ್ಗ- ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ, ತುಮಕೂರು - ನಿಟ್ಟೂರಿನ ಹೆಚ್ಎಎಲ್ ತಯಾರಿಕ ಘಟಕ, ಪಾವಗಡದ ವಿಶ್ವದ ಮೊದಲ ಬೃಹತ್ ಸೋಲಾರ್ ಪಾರ್ಕ್, ಉಡುಪಿ - ಜಿಐ ಟ್ಯಾಗ್ ಹೊಂದಿರುವ ಉಡುಪಿ ಕೈಮಗ್ಗ, ಸೀರೆ ನೇಯ್ಗೆ, ಸಾಂಪ್ರದಾಯಿಕ ಕಲಾ ಪ್ರದರ್ಶನದ ಸ್ತಬ್ಧಚಿತ್ರ ಪ್ರದರ್ಶನ ಆಗಲಿದೆ.

ವಿಜಯನಗರದಿಂದ ಉಗ್ರ ನರಸಿಂಹ ಸ್ತಬ್ಧಚಿತ್ರ

ವಿಜಯನಗರದಿಂದ ಉಗ್ರ ನರಸಿಂಹ ಸ್ತಬ್ಧಚಿತ್ರ

ಉತ್ತರ ಕನ್ನಡ - ಕಾರವಾರ ನೌಕನೆಲೆ, ವಿಜಯಪುರ - ಸಿದ್ದರಾಮೇಶ್ವರ ದೇವಸ್ಥಾನ, ವಿಜಯನಗರ - ಉಗ್ರ ನರಸಿಂಹ, ದರೋಜಿ ಕರಡಿಧಾಮ, ಕಲ್ಲಿನ ರಥ, ಯಾದಗಿರಿ - ಸುರಪುರ ಕೋಟೆ ಸ್ತಬ್ಧಚಿತ್ರಗಳ ಉಪಸಮಿತಿ, ಅರಮನೆ ವಾದ್ಯಗೋಷ್ಠಿ, ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯ, ಆಜಾದಿ ಕಾ ಅಮೃತ ಮಹೋತ್ಸವ ಸ್ತಬ್ಧಚಿತ್ರಗಳು ಪ್ರದರ್ಶನ ಆಗಲಿವೆ.

ಯಾವ್ಯಾವ ಇಲಾಖೆಯಿಂದ ಸ್ತಬ್ಧಚಿತ್ರ ಪ್ರದರ್ಶನ

ಯಾವ್ಯಾವ ಇಲಾಖೆಯಿಂದ ಸ್ತಬ್ಧಚಿತ್ರ ಪ್ರದರ್ಶನ

ಸಮಾಜ ಕಲ್ಯಾಣ ಇಲಾಖೆಯಿಂದ ಸಾಮಾಜಿಕ ನ್ಯಾಯ ಸ್ತಬ್ಧಚಿತ್ರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ - ಐಟಿಐ, ಜಿಟಿಟಿಸಿ, ಕೌಶಲ ತರಬೇತಿ, ಹಾಲು ಉತ್ಪಾದಕರ ಮಹಾಮಂಡಲ - ನಂದಿನಿ ಕ್ಷೀರಧಾರೆ, ಉತ್ಪನ್ನಗಳು ಪ್ರದರ್ಶನಗೊಳ್ಳಲಿವೆ. ಮೈಸೂರು ವಿಶ್ವವಿದ್ಯಾಲಯ - 106 ವರ್ಷಗಳ ಇತಿಹಾಸ, ಕಾವೇರಿ ನೀರಾವರಿ ನಿಗಮ - ರೈತರು ಮತ್ತು ಸಾರ್ವಜನಿಕರಿಗೆ ಆಗುವ ಅನುಕೂಲಕಗಳು, ಸೆಸ್ಕ್ - ಡಿಡಿಯು ಯೋಜನೆ, ಬೆಳಕು ಯೋಜನೆ, ಪರಿವರ್ತಕ ಅಭಿಯಾನ, ವಾರ್ತಾ ಮತ್ತು ಪ್ರಚಾರ ಇಲಾಖೆ - ಇಲಾಖೆ ಕಾರ್ಯಕ್ರಮಗಳು, ಡಾ. ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮ - ಲಿಡ್ಕರ್ ಉತ್ಪನ್ನಗಳು,

ಅಖಿಲ ಭಾರತ ವಾಕ್ ಮತ್ತು ಶ್ರಾವಣ ಸಂಸ್ಥೆ - ಎಲ್ಲರಿಗೂ ದಯೆ ಮತ್ತು ಪ್ರೀತಿಗಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - ಆರ್ಥಿಕ ಹೊರಯಿಂದ ರಕ್ಷಣೆ, ನಮ್ಮ ಕ್ಲಿನಿಕ್, ಸಹಕಾರ ಇಲಾಖೆ - ಸಹಕಾರ ಕ್ಷೇತ್ರದ ಯೋಜನೆಗಳು, ಮಂಡ್ಯ ಜಿಲ್ಲೆ ಮಹಾ ಕುಂಭ ಮೇಳ - ಪುಣ್ಯ ಸ್ನಾನ ಮತ್ತು ಶ್ರೀ ಮಹದೇಶ್ವರ ಜ್ಯೋತಿ ಸ್ವೀಕಾರ, ಪ್ರವಾಸೋದ್ಯಮ ಇಲಾಖೆ - ಚನ್ನಕೇಶವ ದೇವಾಲಯ, ಬೇಲೂರು, ಹಂಪಿ ಆನೆ ಲಾಯದ ಸ್ತಬ್ಧಚಿತ್ರಗಳು ಪ್ರದರ್ಶನ ಆಗಲಿವೆ.

ಜಂಬೂ ಸವಾರಿಗೆ ಮೈಸೂರು ನಗರಿ ಸಜ್ಜು: ಮಧ್ಯಾಹ್ನ ನಂದಿಪೂಜೆ, ಸಂಜೆ‌ ಮೆರವಣಿಗೆ, ಹೆಜ್ಜೆ ಹಾಕಲಿವೆ 9 ಆನೆಗಳು ಜಂಬೂ ಸವಾರಿಗೆ ಮೈಸೂರು ನಗರಿ ಸಜ್ಜು: ಮಧ್ಯಾಹ್ನ ನಂದಿಪೂಜೆ, ಸಂಜೆ‌ ಮೆರವಣಿಗೆ, ಹೆಜ್ಜೆ ಹಾಕಲಿವೆ 9 ಆನೆಗಳು

English summary
Dasara 2022: 47 tableau will be show in Mysuru today, will attract attention of audience, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X