ಕಾರು ಅಪಘಾತ ಪ್ರಕರಣ: ಕೇಸ್ ನಿಂದ ಬಚಾವ್ ಆಗಲು ಮುಂದಾದ್ರಾ ದರ್ಶನ್ ?
ಮೈಸೂರು, ಸೆಪ್ಟೆಂಬರ್.25 : ಸೋಮವಾರ ನಡೆದ ನಟ ದರ್ಶನ್ ಕಾರು ಅಪಘಾತ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಎಲ್ಲಾ ನಟರನ್ನು ಪೊಲೀಸರು ರಕ್ಷಣೆ ಮಾಡಿದ್ದಾರಾ ? ಹೀಗೊಂದು ಪ್ರಶ್ನೆ ಕೇಳಿ ಬರುತ್ತಿದೆ.
ಪ್ರಕರಣದಲ್ಲಿ ದರ್ಶನ್ , ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಯಾರು ಸಹ ಕೋರ್ಟ್ ಗೆ ಅಲೆಯುವಂತಿಲ್ಲ. ಯಾವುದೇ ಫೈನ್ ಕಟ್ಟುವ ಅಗತ್ಯವಿಲ್ಲ. ಇಡೀ ಪ್ರಕರಣದಲ್ಲಿ ಆರೋಪಿ ಒಬ್ಬನೇ ಆಗಿದ್ದು, ಪ್ರಕರಣಕ್ಕೆ ಸಹ ನಟ ಹಾಗೂ ದರ್ಶನ್ ಕಾರು ಚಾಲಕ ರಾಯ್ ಆಂಟೋನಿ ಮಾತ್ರ ಹೊಣೆಗಾರ ಎನ್ನಲಾಗಿದೆ.
ಸದ್ಯ ವಿವಿಪುರಂ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ನಿಂದ ಸ್ಪಷ್ಟ ಮಾಹಿತಿ ಲಭ್ಯವಾಗಿದ್ದು, ಐಪಿಸಿ ಸೆಕ್ಷನ್ 279, 337, 338ರ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದರ್ಶನ್ ಗನ್ ಮ್ಯಾನ್ ಲಕ್ಷ್ಮಣ್ ಎಂಬುವವರು ಈ ದೂರು ನೀಡಿದ್ದು, ಅವಘಡಕ್ಕೆ ರಾಯ್ ಆಂಟೋನಿಯನ್ನೇ ಹೊಣೆ ಮಾಡಲಾಗಿದೆ.

ಅಪಘಾತದ ವೇಳೆ ದರ್ಶನ್ ಕಾರು ಚಲಾಯಿಸುತ್ತಿದ್ದ ರಾಯ್ ಅಂಟೋನಿ ಯಾರು.?
ಅಲ್ಲದೇ ರಾಯ್ ಆಂಟೋನಿ ಕಾರು ಚಾಲನೆ ಮಾಡುತ್ತಿದ್ದ ಬಗ್ಗೆ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ವಿವಿಪುರಂ ಠಾಣೆ ಪೊಲೀಸರು ಕಾರು ತಪಾಸಣೆ ನಡೆಸಿದ್ದಾರೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ದಂಡದ ಜೊತೆಗೆ ಜೈಲುವಾಸದ ಶಿಕ್ಷೆಯ ಸಾಧ್ಯತೆ ಇದೆ ಎನ್ನಲಾಗಿದೆ.

ಮೇಲಿನ ಐಪಿಸಿ ಸೆಕ್ಷನ್ ಎಲ್ಲವೂ ಅತಿವೇಗದ ಚಾಲನೆ, ಅಜಾಗರೂಕತೆಯಿಂದ ಸಣ್ಣ ಪ್ರಮಾಣದ ಗಾಯ ಉಂಟು ಮಾಡುವುದು. ದೊಡ್ಡ ಪ್ರಮಾಣದ ಗಾಯವುಂಟು ಮಾಡುವುದರ ಮೇಲೆ ಹಾಕಲಾಗುತ್ತದೆ. ಮೂರು ಸೆಕ್ಷನ್ ಗಳಿಗೂ ಚಾಲಕನೇ ಹೊಣೆಯಾಗಿದ್ದು, ಚಾಲಕ ಮಾತ್ರ ಕೋರ್ಟ್ ಮೆಟ್ಟಿಲು ಹತ್ತಬೇಕು.












Click it and Unblock the Notifications