ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮಹಾನಗರ ಪಾಲಿಕೆಯಲ್ಲಿ ಲಂಚಾವತಾರದ್ದೇ ಸದ್ದು!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 23 : ನಗರದ ಮಹಾ ನಗರಪಾಲಿಕೆಯಲ್ಲಿ ಲಂಚಾವತಾರದ ಸದ್ದು ಜೋರಾಗಿದೆ. ಪಾಲಿಕೆಯ ವ್ಯಾಪ್ತಿಯ ರೋಜ್ ಗಾರ್ ಯೋಜನೆಯಲ್ಲಿ ಸಾಲ ಕೊಡಿಸಲು ಪಾಲಿಕೆಯ ಕ್ಲರ್ಕ್ ಎಂದು ಹೇಳಿಕೊಳ್ಳುವ ನೌಕರನೊಬ್ಬ ಲಂಚ ಸ್ವೀಕರಿಸುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

ಪಾಲಿಕೆಯಲ್ಲಿ ಕ್ಲರ್ಕ್ ಎಂದು ಹೇಳಿಕೊಳ್ಳುವ ನೌಕರ ಶಿವಕುಮಾರ್ ಎಂಬಾತ ಲಂಚ ಸ್ವೀಕರಿಸಿದ್ದಾನೆ. ಸಾಲ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾನೆ. ಮೂಲ ಹುದ್ದೆಯಲ್ಲಿ ಮಾಲಿ ಎಂದು ಉಲ್ಲೇಖವಾಗಿದ್ದರು ತಾನೂ ಕ್ಲರ್ಕ್ ಎಂದು ಹೇಳಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾನೆ.

allegedly taking money to do a favour

ತೇಜಸ್‍ ಕುಮಾರ್ ಎಂಬವರಿಂದ 10 ಸಾವಿರ ಲಂಚ ಕೇಳಿ 3 ಸಾವಿರ ರೂ. ಹಣ ಸ್ವೀಕರಿಸಿದ್ದಾನೆ. 15 ದಿನದಲ್ಲಿ ಸಾಲ ಕೊಡಿಸುವ ಭರವಸೆ ನೀಡಿ ಹಣ ಪಡೆದಿದ್ದಾನೆ. ಪ್ರಶಾಂತ್ ಎಂಬ ಮಧ್ಯವರ್ತಿಯನ್ನ ಬಳಸಿಕೊಂಡು ಶಿವಕುಮಾರ್ ಲಂಚಾವತಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಸಾಲ ಕೇಳಿ ಬರುವವರಿಗೆ ಪುಸಲಾಯಿಸಿ ಲಂಚ ಪಡೆಯುವ ಈತನ ಅಸಲಿ ಬಣ್ಣವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಣ ಕಳೆದುಕೊಂಡು ಸಾಲವು ದೊರೆಯದ ಸಾರ್ವಜನಿಕರು ಈತನ ವಿರುದ್ಧ ಧ್ವನಿ ಎತ್ತಿದ್ದಾರೆ.

English summary
An employee of Mysuru City Corporation (MCC) was caught on camera, allegedly taking money to do a favour. Shivakumar, the accused, it seems, demanded bribe to process loan application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X