• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಮಿತಿ ಮೀರುತ್ತಿರುವ ಕೊರೊನಾ ಸೋಂಕು; ಸೋಂಕಿಗೆ ನಾಲ್ಕನೇ ಬಲಿ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 2: ಎಚ್.ಡಿ.ಕೋಟೆಯಲ್ಲಿನ ಆರಕ್ಷಕ ವೃತ್ತ ನಿರೀಕ್ಷಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಪೊಲೀಸ್ ಠಾಣೆಯನ್ನು ಸೀಲ್​​​ಡೌನ್​​​ ಮಾಡಲಾಗಿದೆ.

      China conflict results raise in Covid Medicine price | Oneindia Kannada

      ಜಿಲ್ಲೆಯ ಎಚ್.ಡಿ.ಕೋಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ 59 ವರ್ಷದ ಇನ್ಸ್‌ಪೆಕ್ಟರ್​​ ಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್​ ಠಾಣೆಯನ್ನು ಸಂಪೂರ್ಣ ಸೀಲ್​​ಡೌನ್ ಮಾಡಲಾಗಿದೆ. ಪೊಲೀಸ್​ ಠಾಣೆಯ ಇತರೆ ಸಿಬ್ಬಂದಿಯನ್ನು ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದ್ದು, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಧಿಕಾರಿ ಡಾ.ರವಿಕುಮಾರ್ ತಿಳಿಸಿದ್ದಾರೆ.

       ಜಿಲ್ಲೆಯಲ್ಲಿ 16 ಮಂದಿಗೆ ಕೊರೊನಾ ಸೋಂಕು ದೃಢ

      ಜಿಲ್ಲೆಯಲ್ಲಿ 16 ಮಂದಿಗೆ ಕೊರೊನಾ ಸೋಂಕು ದೃಢ

      23 ವರ್ಷದ ವೈದ್ಯರಲ್ಲೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸಂಜೆ ವೇಳೆಗೆ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.

      "ಮೈಸೂರಿನಲ್ಲಿ ಹೆಚ್ಚುತ್ತಿವೆ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು''

       ಮದುವೆಯಾಗಬೇಕಿದ್ದ ಯುವಕ ಯುವತಿಗೂ ಸೋಂಕು

      ಮದುವೆಯಾಗಬೇಕಿದ್ದ ಯುವಕ ಯುವತಿಗೂ ಸೋಂಕು

      ಜೊತೆಗೆ ಬೆಂಗಳೂರಿಗೆ ತೆರಳಿದ್ದ 27 ವರ್ಷ ಯುವಕ ಹಾಗೂ ಆತನನ್ನು ಮದುವೆಯಾಗುವ ಯುವತಿಗೂ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ಎರಡು ದಿನಗಳ ಹಿಂದೆ ಯುವತಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಜಿಲ್ಲಾಡಳಿತಕ್ಕೆ ಇವರ ಟ್ರಾವೆಲ್ ಹಿಸ್ಟರಿ ಕಂಡುಕೊಳ್ಳುವುದು ತಲೆ ನೋವಾಗಿದೆ. ಮೈಸೂರು ನಗರದಲ್ಲಿ ಕಂಟೈನ್ ಮೆಂಟ್ ಝೋನ್ ಗಳ ಸಂಖ್ಯೆಯೂ ಹೆಚ್ಚಲಿದೆ.

       ಸಂಚಾರ ವಿಭಾಗದ ಕಚೇರಿಯೂ ಸೀಲ್ ಡೌನ್

      ಸಂಚಾರ ವಿಭಾಗದ ಕಚೇರಿಯೂ ಸೀಲ್ ಡೌನ್

      ಮೈಸೂರಿನ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಅವರ ಕಚೇರಿಯನ್ನೂ ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ಮಹಿಳಾ ಹೆಡ್ ಕಾನ್ಸ್‌ ಟೆಬಲ್ ಒಬ್ಬರಲ್ಲಿ ಕೊರೊನಾ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಮಹಿಳಾ ಹೆಡ್ ಕಾನ್ಸ್ ಟೆಬಲ್ ಟಪಾಲನ್ನು ತೆಗೆದುಕೊಳ್ಳುವ, ಕೊಡುವ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಪಾಸಿಟಿವ್ ದೃಢಪಟ್ಟ ಹಿನ್ನೆಯಲ್ಲಿ ಇತರ ಕಚೇರಿಯಲ್ಲಿನ ಪೊಲೀಸ್ ಸಿಬ್ಬಂದಿಯನ್ನು ಕ್ವಾರೆಂಟೈನ್ ಮಾಡಲಾಗಿದ್ದು, ವರದಿಗೆ ಕಳುಹಿಸಿಕೊಡಲಾಗಿದೆ.

      ನಂಜನಗೂಡು ಜನರನ್ನ ಬೆಚ್ಚಿ ಬೀಳಿಸಿದ ಬಿಹಾರಿಗಳುನಂಜನಗೂಡು ಜನರನ್ನ ಬೆಚ್ಚಿ ಬೀಳಿಸಿದ ಬಿಹಾರಿಗಳು

       ಕೊರೊನಾ ವೈರಸ್ ಗೆ ಮೈಸೂರಿನಲ್ಲಿ ನಾಲ್ಕನೇ ಬಲಿ?

      ಕೊರೊನಾ ವೈರಸ್ ಗೆ ಮೈಸೂರಿನಲ್ಲಿ ನಾಲ್ಕನೇ ಬಲಿ?

      ತಿ.ನರಸೀಪುರ ತಾಲ್ಲೂಕಿನ ವೃದ್ಧೆಯೊಬ್ಬರು ಇಂದು ಸಾವನ್ನಪ್ಪಿದ್ದು, ಅವರಿಗೆ ಕೊರೊನಾ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಕೇತುಪುರ ಗ್ರಾಮದ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಡರಾತ್ರಿ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

      English summary
      Coronavirus cases increasing in mysuru district. Today 16 people tested coronavirus positive
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X