Breaking; ಕಲ್ಯಾಣ ಮಂಟಪ ವಿವಾದ, ಸಾ. ರಾ. ಮಹೇಶ್ಗೆ ಕ್ಲೀನ್ ಚಿಟ್
ಮೈಸೂರು, ಜೂನ್ 14; ಕೆ. ಆರ್. ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಒಡೆತನದ ಸಾರಾ ಕನ್ವೆಂಷನ್ ಹಾಲ್ ಕುರಿತ ಆರೋಪ ಪ್ರತ್ಯಾರೋಪಕ್ಕೆ ಕಡೆಗೂ ತೆರೆ ಬಿದ್ದಿದೆ. ರೋಹಿಣಿ ಸಿಂಧೂರಿ ವರ್ಗಾವಣೆ ಬಳಿಕ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.
ಸಾರಾ ಕನ್ವೆಂಷನ್ ಹಾಲ್ ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ ಎಂಬ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ್ದ ಶಾಸಕರು ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ನಾಲ್ವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ವರದಿ ನೀಡಲು ನಿರ್ದೇಶಿಸಿದ್ದರು. ಸಮಿತಿ ಸಮಗ್ರವಾಗಿ ಪರಿಶೀಲಿಸಿ ಅಧ್ಯಯನ ಮಾಡಿದ ಬಳಿಕ ಸಾರಾ ಕನ್ವೆಂಷನ್ ಹಾಲ್ಅನ್ನು ಯಾವುದೇ ರೀತಿಯ ರಾಜಕಾಲುವೆ ಮೇಲೆ ನಿರ್ಮಿಸಲಾಗಿಲ್ಲ ಎಂದು ವರದಿ ನೀಡುವ ಮೂಲಕ ಕ್ಲೀನ್ ಚಿಟ್ ನೀಡಿದೆ.

ಸೋಮವಾರ ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸಾ. ರಾ. ಮಹೇಶ್ ದಾಖಲೆ ಪ್ರದರ್ಶನ ಮಾಡಿ, ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಇಂದು ನೀಡಿರುವ ಸಾರಾ ಚೌಲ್ಟ್ರಿ ವರದಿ ಓದಿದ ಅವರು, ಸಮೀಕ್ಷೆ ಮ್ಯಾಪ್ ತೋರಿಸಿ ಸ್ಪಷ್ಟನೆ ನೀಡಿದರಲ್ಲದೆ ಹಳ್ಳದ ಮೇಲೆ ಚೌಲ್ಟ್ರಿ ನಿರ್ಮಿತವಾಗಿಲ್ಲ. ಹಳ್ಳದ ಜಾಗವನ್ನು ಒತ್ತುವರಿ ಮಾಡಿಲ್ಲ. ಕೆಲವು ಕಡೆ 72.73.74 ಅಳತೆಯಲ್ಲಿ ಕಂಡು ಬರುತ್ತದೆ ಎಂದು ವರದಿಯಲ್ಲಿ ಬಂದಿದೆ ಎಂದರು.
"6 ಸಾವಿರ ಅಡಿ ರಿಂಗ್ ರೋಡ್ಗೆ ನನ್ನದೇ ಜಾಗ ಕೊಟ್ಟಿದ್ದೇನೆ. ಮೈಸೂರಿನ ಋಣಕ್ಕಾಗಿ ಎರಡು ಕಡೆ ಜಾಗ ಬಿಟ್ಟಿದ್ದೇನೆ. ರಸ್ತೆಗೆ ಎರಡು ಕಡೆ ನನ್ನ ಜಾಗವನ್ನೇ ಬಿಟ್ಟಿದ್ದೇನೆ. ಇದಕ್ಕೆ ಯಾವುದೇ ಪರಿಹಾರವನ್ನು ಪಡೆದಿಲ್ಲ" ಎಂದು ಸಾ. ರಾ. ಮಹೇಶ್ ಹೇಳಿದರು.
"ನಾನು 30 ವರ್ಷಗಳ ಹಿಂದೆ ಎಕರೆಗೆ 90 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದೆ. ಎರಡು ಎಕರೆ ಅಕ್ರಮ ಅಂತಾ ಹೇಳಿದರು. ನಾನು ಖರೀದಿ ಮಾಡಿದ್ದು 4 ಎಕರೆ. ಈ ಬಗ್ಗೆ ಅವರಿಗೇ ಸರಿಯಾದ ಮಾಹಿತಿ ಇಲ್ಲ. ಲಿಂಗಾಂಬುದಿಪಾಳ್ಯ ಬಫರ್ಝೋನ್ ವ್ಯಾಪ್ತಿ ಸಂಬಂಧ ಪತ್ರ ಬರೆದಿದ್ದಾರೆ. 2018ರ ಸರ್ಕಾರದ ತಿದ್ದುಪಡಿ ಕಾಯ್ದೆ ಪ್ರಕಾರ 30 ಮೀಟರ್ ಇದೆ. ಆದರೆ, ರೋಹಿಣಿ ಸಿಂಧೂರಿ 2016ರ ಕಾಯ್ದೆ ಪ್ರಕಾರ ಆದೇಶಗಳನ್ನು ಹೊರಡಿಸಿದ್ದಾರೆ" ಎಂದು ಟೀಕಿಸಿದರು.
"ನಿಮ್ಮ ಕರ್ತವ್ಯ ಲೋಪದ ಬಗ್ಗೆ ಹೇಳಿದ್ದಕ್ಕೆ ಸೇಡು ತೀರಿಸಿಕೊಳ್ಳುತ್ತಿದ್ದೀರಾ?. ನಾನು ರಾಜಕಾಲುವೆ ಒತ್ತುವರಿ ಮಾಡಿದ್ದರೆ ಹಿಂದೆ ಮುಂದೆ ಹಳ್ಳಕೊಳ್ಳ ಇರುತ್ತೆ ಎನ್ನುವ ಕನಿಷ್ಟ ಜ್ಞಾನವೂ ಇಲ್ಲವೇ?. ದಿಶಾಂಕ್ ಸರ್ವರ್ ಮೂಲಕ ಮ್ಯಾಪ್ ತೆಗೆದುಕೊಂಡು ಬಣ್ಣ ಹಚ್ಚಿ ಇದೇ ಒತ್ತುವರಿ ಆಗಿರೋದು ಅಂತ ಹೇಳುತ್ತಾರೆ" ಎಂದು ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದರು.
"ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿರುವುದು. ಆದರೆ ಅದನ್ನು ಮುಚ್ಚಿಡುವ ಸಲುವಾಗಿ ಭೂಮಾಫಿಯಾ ಆರೋಪ ಹೊರಿಸುತ್ತಿದ್ದಾರೆ" ಎಂದು ಆರೋಪಿಸಿದರು.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications