ಮೈಸೂರಿಗೆ ಹೊರರಾಜ್ಯದಿಂದ ಬಂದವರಿಗೆ ಫೆಸಿಲಿಟಿ ಕ್ವಾರಂಟೈನ್ ಕಡ್ಡಾಯ
ಮೈಸೂರು, ಮೇ 11: ರೆಡ್ ಝೋನ್ ನಿಂದ ಗ್ರೀನ್ ಝೋನ್ ಆಗುವತ್ತ ದಾಪುಗಾಲಿಡುತ್ತಿರುವ ಮೈಸೂರು ಜಿಲ್ಲೆಗೆ ಬರುವ ಹೊರ ರಾಜ್ಯದವರಿಗೆ 14 ದಿನ ಫೆಸಿಲಿಟಿ ಕ್ವಾರಂಟೈನ್ ಕಡ್ಡಾಯ ಇರಲಿದೆ. ಹೋಂ ಕ್ವಾರಂಟೈನ್ ಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಹೊರ ರಾಜ್ಯದಿಂದ ಬರುವವರು 14 ದಿನದ ಫೆಸಿಲಿಟಿ ಕ್ವಾರಂಟೈನ್ ಗೆ ಒಳಪಡಲು ಹಾಸ್ಟೆಲ್ (ಉಚಿತ ಸೌಲಭ್ಯ) ಅಥವಾ ಹೋಟೆಲ್ (ಪಾವತಿ ಆಧಾರದ ಮೇಲೆ) ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಹೋಂ ಕ್ವಾರಂಟೈನ್ ಗೆ ಅನುಮತಿ ಇರುವುದಿಲ್ಲ.
ಅಂತರರಾಜ್ಯ ಪಾಸು; ಸಂಚಾರಕ್ಕೂ ಮುನ್ನ ಸೂಚನೆಗಳು
14 ದಿನದ ಕ್ವಾರಂಟೈನ್ ಮುಗಿಸಿದ ನಂತರ ಪ್ರತಿಯೊಬ್ಬರಿಗೂ ಕೋವಿಡ್-19 ಪರೀಕ್ಷೆ ಮಾಡಲಾಗುವುದು. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.