ಸಿಎಂ ಯಡಿಯೂರಪ್ಪ ಅಳಿಯನಿಂದ ಐಪಿಎಸ್ ಅಧಿಕಾರಿಗಳಿಗೇ ಆವಾಜ್
ಮಂಡ್ಯ, ಆಗಸ್ಟ್ 29 : ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಎಂ ಯಡಿಯೂರಪ್ಪ ಅವರ ತಂಗಿ ಮಗ ರಾಜೇಶ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆವಾಜ್ ಹಾಕಿದ ಘಟನೆ ನಡೆದಿದೆ.
ಸಾರ್ವಜನಿಕ ಸ್ಥಳದಲ್ಲೇ ದರ್ಪ ತೋರಿಸಿ ಏಕ ವಚನದಲ್ಲಿ ಆವಾಜ್ ಹಾಕಿರುವ ಸಿಎಂ ಯಡಿಯೂರಪ್ಪ ಅಳಿಯ ರಾಜೇಶ್ ವರ್ತನೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಯಡಿಯೂರಪ್ಪನವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ವೇಳೆ ಅವರ ಅಳಿಯ ರಾಜೇಶ್ ತಮ್ಮ ಕಾರ್ಯಕರ್ತರ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾರೆ. ಆದರೆ, ಸಿಎಂ ಪ್ರೊಟೋಕಾಲ್ ಹಾಗೂ ಅವರ ರಕ್ಷಣೆ ದೃಷ್ಟಿಯಿಂದ ಚಾಮುಂಡಿ ಬೆಟ್ಟದ ದೇವಾಲಯದ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ರಾಜೇಶ್‌ಗೆ ತಿಳಿಸಿದ್ದಾರೆ.

ಈ ವೇಳೆ ಕುಪಿತಗೊಂಡ ರಾಜೇಶ್ ಎಸಿಪಿ ಹಾಗೂ ಡಿಸಿಪಿ ಅಧಿಕಾರಿಗಳ ವಿರುದ್ಧವೇ "ಏಯ್, ತೆಗೆಯೋ ಕೈಯಿ..ನನ್ನನ್ನೇ ಒಳಗೆ ಬಿಡಲ್ಲ ಅಂತೀಯ. ನೋಡ್ತಾ ಇರಿ ನೀವೆಲ್ಲ ಎಲ್ಲೆಲ್ಲಿಗೆ ಹೋಗ್ತೀರ?," ಎಂದು ಏಕ ವಚನದಲ್ಲಿ ಕೂಗಾಡಿ ದರ್ಪ ಮೆರೆದಿದ್ದಾರೆ. ಆದರೆ, ಪೊಲೀಸರು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ನಿಂತಿರುವ ವಿಡಿಯೋ ಇದೀಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications