50:50 ಅನುಪಾತದಲ್ಲಿ ಮುಡಾ ಸೈಟ್ ಪಡೆದವರಿಗೆ ಬಿಗ್ ಶಾಕ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಮೈಸೂರು ಮುಡಾದಲ್ಲಿ 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಗ್ ಶಾಕ್ ನೀಡಿದ್ದಾರೆ. 50:50 ಅನುಪಾತದ ಎಲ್ಲಾ ಅಕ್ರಮ ಸೈಟ್ ಹಿಂದಕ್ಕೆ ಪಡೆಯಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಇಡಿ ದಾಳಿಯ ಟೆನ್ಷನ್ ನಡುವೆ ಸಿಎಂ ಸಿದ್ದರಾಮಯ್ಯ ಮತ್ತೊಂದು ಶಾಕ್ ಕೊಟ್ಟಿದ್ದಾರೆ.

ಸೈಟ್ ಹಿಂದಕ್ಕೆ ಪಡೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ನಗರಾಭಿವೃದ್ಧಿ ಕಾರ್ಯದರ್ಶಿ ಅವರಿಗೆ ಸಿದ್ದರಾಮಯ್ಯ ಲಿಖಿತ ಸೂಚನೆ ನೀಡಿದ್ದಾರೆ. ಇತ್ತೀಚಿಗೆ ಬಿಜೆಪಿ ಶಾಸಕ ಶ್ರೀವತ್ಸ ಬರೆದ ಪತ್ರ ಆಧರಿಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಲ್ಲಿವರೆಗೂ 50:50 ಅನುಪಾತದಡಿ ಒಟ್ಟು 1500ಕ್ಕೂ ಹೆಚ್ಚು ಸೈಟುಗಳು ವಿತರಣೆ ಆಗಿವೆ. 2020ರಿಂದ 2024 ಅವಧಿಯಲ್ಲಿ 50:50 ಅನುಪಾತದಲ್ಲಿ ಹಂಚಿಕೆ ಆಗಿರುವ ನಿವೇಶನಗಳ ಹಿಂಪಡೆಯಲು ಸೂಚಿಸಿದ್ದಾರೆ.

CM Siddaramaiah Orders Reclaim of Illegal 50 50 MUDA Sites in Mysuru

ಶಾಸಕ ಶ್ರೀವತ್ಸ ಹೇಳಿದ್ದೇನು?

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀವತ್ಸ, ಮುಖ್ಯಮಂತ್ರಿಗಳು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ನಗರಾಭಿವೃದ್ಧಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಎಲ್ಲಾ 50-50 ಸೈಟ್ ಗಳನ್ನು ರದ್ದು ಮಾಡುವಂತೆ ಮನವಿ ಮಾಡಿದ್ದೆ. ಎಲ್ಲವನ್ನು ರದ್ದು ಮಾಡಿ, ತದನಂತರ ಅರ್ಹರಿಗೆ ಕೊಡಲಿ ಎಂಬುದು ನನ್ನ ಉದ್ದೇಶ. ಸೈಟ್ ಪಡೆದವರಲ್ಲಿ ಬಹುತೇಕರು ಅನರ್ಹರಿದ್ದಾರೆ. 50-50 ಅನುಪಾತದಲ್ಲಿ ಸೈಟ್ ಪಡೆದವರು ಈಗ ಅದನ್ನು ಅರ್ಧ ರೇಟ್ ಗೆ ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಸಬ್ ರಿಜಿಸ್ಟ್ರಾರ್ ಗೆ ಸೂಚನೆ ನೀಡಬೇಕು. ಬಿರ್ಲ್ಡಸ್‌ಗಳು 50-50 ಸೈಟ್ ತೆಗೆದುಕೊಂಡಿದ್ದಾರೆ ಅಂದರೆ ಅದು ಮೋಸ. ಈ ಮೋಸವನ್ನು ಮಟ್ಟ ಹಾಕಬೇಕು. ಮೊದಲು 50-50 ಅನುಪಾತವೇ ತಪ್ಪು ಅಂತ ಇದೆ. ಅದರ ಬಗ್ಗೆಯು ತೀರ್ಮಾನ ಮಾಡಬೇಕಿದೆ. ಸೈಟ್ ಪಡೆದವರು ಈ ಹಿಂದೆ ಮುಖ್ಯಮಂತ್ರಿ ಮುಂದಿಟ್ಟುಕೊಂಡ ಆಟ ಹಾಡುತ್ತಿದ್ದರು. ಈಗ ಸಿಎಂ ವಾಪಸ್ಸು ಕೊಟ್ಟಿದ್ದಾರೆ ಎಂದರು.

ಸಿಎಂ ಮೇಲು ತನಿಖೆ ನಡೆಯುತ್ತಿದೆ. ಸಿಎಂ ರೀತಿಯೆ ಉಳಿದವರ ತನಿಖೆಯಾಗಬೇಕಲ್ಲವೆ? ಎಲ್ಲಾ ಅಕ್ರಮ ಹೊರ ಬರಬೇಕು. ಈ ನಡುವೆ ಮುಡಾ ಸಭೆ ಕರೆದಿದ್ದಾರೆ. ಆದರೆ ಅಜೆಂಡಾ ಕೊಟ್ಟಿಲ್ಲ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೂ ಮನವಿ ಮಾಡಿದ್ದೇವೆ. ಸೋಮವಾರ ಅಜೆಂಡಾ ಕೊಡುತ್ತೇವೆ ಎಂದಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+