ಚಿತ್ರಗಳು : ಮೈಸೂರಿನಲ್ಲಿ 'ಹೊಸ ಬೆಳಕು' ಯೋಜನೆಗೆ ಚಾಲನೆ

ಮೈಸೂರು, ಡಿಸೆಂಬರ್ 12 : ಇಂಧನ ಇಲಾಖೆಯ ಮಹತ್ವದ 'ಹೊಸ ಬೆಳಕು' ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ ನೀಡಿದ್ದಾರೆ. ಯೋಜನೆಯಡಿ ಸುಮಾರು 6 ಕೋಟಿ ಎಲ್‍ಇಡಿ ಬಲ್ಬ್‌ಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡರೆ ರಾಜ್ಯದಲ್ಲಿ ವಾರ್ಷಿಕ 1,287 ಮೆಗಾ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ.

ಶುಕ್ರವಾರ ಮೈಸೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. 'ರಾಜ್ಯಕ್ಕೆ 10,000 ಮೆಗಾವಾಟ್ ವಿದ್ಯುತ್ ಅವಶ್ಯಕತೆಯಿದೆ. ಆದರೆ, 7000 ಮೆಗಾವಾಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ' ಎಂದರು. [ಹೊಸಬೆಳಕು ಯೋಜನೆ ಬಗ್ಗೆ ತಿಳಿಯಿರಿ]

'ವಿದ್ಯುತ್ ಕೊರತೆ ನೀಗಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿದ್ಯುತ್ ಉಳಿಸಲು ಎಲ್‌ಇಡಿ ಬಲ್ಬ್‌ ನೀಡುವ ಹೊಸಬೆಳಕು ಯೋಜನೆಯನ್ನು ಆರಂಭಿಸಿದೆ. 9 ವಾಟ್‌ ಸಾಮರ್ಥ್ಯದ ಎಲ್‍ಇಡಿ ಬಲ್ಬ್‌ನ ಬೆಳಕು, 40 ವಾಟ್ ಸಾಮರ್ಥ್ಯದ ಬುರುಡೆ ಬಲ್ಬ್ ಅಥವಾ 18 ವಾಟ್ ಸಾಮರ್ಥ್ಯದ ಸಿಎಫ್‍ಎಲ್ ಬಲ್ಬ್‌ ಬೆಳಕಿಗೆ ಸಮವಾಗಿರುತ್ತದೆ' ಎಂದು ಹೇಳಿದರು. [ಎಲ್ ಇಡಿ, ಸಿಎಫ್ಎಲ್, ಸಾಮಾನ್ಯ ಬಲ್ಬ್ ನಡುವಿನ ವ್ಯತ್ಯಾಸ]

ಯೋಜನೆಯ ಮೊದಲ ಹಂತದಲ್ಲಿ ಸುಮಾರು 6 ಕೋಟಿ ಬಲ್ಬ್‌ಗಳನ್ನು ವಿತರಣೆ ಮಾಡಲಾಗುತ್ತದೆ. ಒಂದು ಎಲ್‌ಇಡಿ ಬಲ್ಪ್‌ನ ಬೆಲೆ 100 ರೂ., ಸಂಪೂರ್ಣವಾಗಿ ಹಣ ಪಾವತಿ ಮಾಡುವ ಮೂಲಕ ಜನರ ಖರೀದಿ ಮಾಡಬಹುದು ಅಥವ ರೂ. 10 ನೀಡಿ ಬಲ್ಪ್‌ ಖರೀದಿ ಮಾಡಿ, ಉಳಿದ ಮೊತ್ತವನ್ನು ವಿದ್ಯುತ್ ಬಿಲ್ ಜೊತೆಗೆ ಪಾವತಿ ಮಾಡಬಹುದಾಗಿದೆ. ಹೊಸಬೆಳಕು ಯೋಜನೆಯ ವಿವರ ಚಿತ್ರಗಳಲ್ಲಿ....

'ಹೊಸ ಬೆಳಕು' ಯೋಜನೆಗೆ ಚಾಲನೆ ನೀಡಿದ ಸಿದ್ದರಾಮಯ್ಯ

'ಹೊಸ ಬೆಳಕು' ಯೋಜನೆಗೆ ಚಾಲನೆ ನೀಡಿದ ಸಿದ್ದರಾಮಯ್ಯ

ವಿದ್ಯುತ್ ಉಳಿತಾಯಕ್ಕಾಗಿ ಇಂಧನ ಇಲಾಖೆ ಗೃಹ ಬಳಕೆ ಗ್ರಾಹಕರಿಗೆ ಎಲ್ಇಡಿ ಬಲ್ಬ್ ವಿತರಣೆ ಮಾಡುವ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಗೆ ಹೊಸಬೆಳಕು ಎಂದು ನಾಮಕರಣ ಮಾಡಲಾಗಿದ್ದು, ಡಿಸೆಂಬರ್ 11ರ ಶುಕ್ರವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಿದ್ದಾರೆ.

ಎಲ್‍ಇಡಿ ಬಲ್ಪ್‌ನಿಂದ ವಿದ್ಯುತ್ ಉಳಿತಾಯ

ಎಲ್‍ಇಡಿ ಬಲ್ಪ್‌ನಿಂದ ವಿದ್ಯುತ್ ಉಳಿತಾಯ

'ಎಲ್‍ಇಡಿ ಬಲ್ಪ್ ಬಳಕೆಯಿಂದಾಗಿ ಶೇ.30 ರಷ್ಟು ವಿದ್ಯುತ್‍ ಉಳಿತಾಯವಾಗಲಿದೆ. ಒಂದು ಬಲ್ಬ್ ಬಳಕೆಯಿಂದ ವರ್ಷಕ್ಕೆ ರೂ. 120 ರಿಂದ ರೂ. 140 ಹಣವನ್ನು ಗ್ರಾಹಕರು ಉಳಿಸಬಹುದು. ಒಂದು ಮನೆಯಲ್ಲಿ 5 ಎಲ್‍ಇಡಿ ಬಲ್ಪ್ ಗಳಿಂದ ವರ್ಷಕ್ಕೆ ರೂ. 500 ರಿಂದ ರೂ. 600 ಉಳಿತಾಯ ಮಾಡಬಹುದು. ಕೇವಲ ಗೃಹ ಬಳಕೆಯಿಂದ ವರ್ಷಕ್ಕೆ 450 ರಿಂದ 500 ಕೋಟಿ ರೂ. ಹಣ ಉಳಿತಾಯವಾಗಲಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿದ್ಯುತ್ ಸಮಸ್ಯೆ ಬಗೆಹರಿಸುತ್ತೇನೆ ಅಂದ್ರು ಸಿಎಂ

ವಿದ್ಯುತ್ ಸಮಸ್ಯೆ ಬಗೆಹರಿಸುತ್ತೇನೆ ಅಂದ್ರು ಸಿಎಂ

'ವಿದ್ಯುತ್ ಪೂರೈಕೆಯಲ್ಲಿ ರಾಜ್ಯ ಇನ್ನೂ ಸ್ವಾವಲಂಬಿ ಆಗಿಲ್ಲ. ಆದರೂ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುತ್ತೇನೆ' ಎಂಬ ವಾಗ್ದಾನವನ್ನು ಸಿಎಂ ಸಿದ್ದರಾಮಯ್ಯ ಮಾಡಿದರು. 'ಏಷ್ಯಾದಲ್ಲೇ ಮೊದಲ ಬಾರಿಗೆ ಜಲ ವಿದ್ಯುತ್ ಉತ್ಪಾದನೆಯನ್ನು ನಮ್ಮ ರಾಜ್ಯ ಮಾಡಿದ್ದರೂ ಇದೀಗ ವಿದ್ಯುತ್ ಅಭಾವವಿದೆ. ಮುಂಗಾರು, ಹಿಂಗಾರು ಮಳೆ ಸಾಕಷ್ಟು ಪ್ರಮಾಣದಲ್ಲಿ ಬಾರದಿರುವುದು ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ' ಎಂದು ಸಿದ್ದರಾಮಯ್ಯ ಹೇಳಿದರು.

1,287 ಮೆಗಾ ಯೂನಿಟ್ ವಿದ್ಯುತ್ ಉಳಿತಾಯ

1,287 ಮೆಗಾ ಯೂನಿಟ್ ವಿದ್ಯುತ್ ಉಳಿತಾಯ

ಹೊಸಬೆಳಕು ಯೋಜನೆ ಬಗ್ಗೆ ಮಾಹಿತಿ ನೀಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು, 'ಹೊಸ ಬಳಕು ಯೋಜನೆಯಡಿ ಅಂದಾಜು 6 ಕೋಟಿ ಎಲ್‍ಇಡಿ ಬಲ್ಪ್‌ಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ. ಯೋಜನೆಯ ಸಂಪೂರ್ಣ ಅನುಷ್ಠಾನದಿಂದ ರಾಜ್ಯದ ವಿದ್ಯುತ್ ಬಳಕೆಯಲ್ಲಿ ವಾರ್ಷಿಕ ಅಂದಾಜು 1,287 ಮೆಗಾ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ' ಎಂದರು.

ಎಲ್‌ಇಡಿ ಬಲ್ಪ್‌ಗಳಿಗೆ 3 ವರ್ಷದ ಗ್ಯಾರಂಟಿ

ಎಲ್‌ಇಡಿ ಬಲ್ಪ್‌ಗಳಿಗೆ 3 ವರ್ಷದ ಗ್ಯಾರಂಟಿ

ಯೋಜನೆಯಡಿ ವಿತರಣೆ ಮಾಡುವ ಎಲ್‍ಇಡಿ ಬಲ್ಪ್‌ಗೆ 3 ವರ್ಷ ಗ್ಯಾರಂಟಿಯಿದ್ದು, ಅವಧಿಯೊಳಗೆ ಕೆಡುವ ಬಲ್ಪ್‌ಗಳನ್ನು ಸಂಸ್ಥೆಯವರು ಉಚಿತವಾಗಿ ಬದಲಾಯಿಸುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಹೊಸ ಬೆಳಕು ಯೋಜನೆಯನ್ನು ಬರುವ ದಿನಗಳಲ್ಲಿ ವಾಣಿಜ್ಯ ಬಳಕೆಗೆ ಮತ್ತು ಬೀದಿ ದೀಪಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಪ್ರತಿ ಬಲ್ಪ್ ಬೆಲೆ 100 ರೂ.

ಪ್ರತಿ ಬಲ್ಪ್ ಬೆಲೆ 100 ರೂ.

ಪ್ರತಿ ಎಲ್‌ಇಡಿ ಬಲ್ಪ್ ಅಂದಾಜು ಬೆಲೆ ತೆರಿಗೆ ಸೇರಿ 100 ರೂ. ಆಗಲಿದೆ. ಈ ಯೋಜನೆಯನ್ನು ಇಇಎಸ್‍ಎಲ್ (Energy Efficiency Services Limited ) ಜಾರಿಗೊಳಿಸುತ್ತಿದೆ. 2 ಕಿ.ವ್ಯಾಟ್ ವರೆಗಿನ ಗೃಹೋಪಯೋಗಿ ಸ್ಥಾವರಗಳಿಗೆ 5 ಸಂಖ್ಯೆ ಮತ್ತು 2 ಕಿ.ವ್ಯಾಟ್ ಗಿಂತ ಮೇಲ್ಪಟ್ಟ ಗೃಹೋಪಯೋಗಿ ಸ್ಥಾವರಗಳಿಗೆ 10 ಎಲ್‍ಇಡಿ ಬಲ್ಬ್ ವಿತರಣೆ ಮಾಡಲಾಗುತ್ತದೆ.

ಪುನೀತ್, ರಮ್ಯಾ ರಾಯಭಾರಿಗಳು

ಪುನೀತ್, ರಮ್ಯಾ ರಾಯಭಾರಿಗಳು

'ಹೊಸಬೆಳಕು' ಯೋಜನೆಗೆ ನಟ ಪುನೀತ್ ರಾಜ್‌ಕುಮಾರ್ ಮತ್ತು ನಟಿ, ಮಾಜಿ ಸಂಸದೆ ರಮ್ಯಾ ಅವರು ರಾಯಭಾರಿಗಳಾಗಿದ್ದಾರೆ. ಎಲ್‌ಇಡಿ ಬಲ್ಬ್‌ ಬಳಕೆ ಬಗ್ಗೆ ಇವರು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+