ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ನಡೆಯಿತು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮದುವೆ!

|
Google Oneindia Kannada News

ಮೈಸೂರು, ಏಪ್ರಿಲ್ 25:ಮನೆ ಸಮಾರಂಭ, ಕಾರ್ಯಕ್ರಮಗಳು ಅಂದ ಮೇಲೆ ಅಲ್ಲಿ ಪ್ಲಾಸ್ಟಿಕ್ ಬಳಸದೇ ಇರುವುದಕ್ಕೆ ಆಗುತ್ತಾ? ಆದರೆ ಇಲ್ಲೊಂದು ಕಡೆ ಆಗಿದೆ. ಹೌದು, ಎಲ್ಲರಲ್ಲಿಯೂ ಅಚ್ಚರಿ ಮೂಡಿಸುವಂತೆ ಪ್ಲಾಸ್ಟಿಕ್ ಮುಕ್ತ ಹಸಿರು ಮದುವೆ ಮೈಸೂರಿನಲ್ಲಿ ನಡೆದಿದೆ. ಈ ಮದುವೆ ರಾಜ್ಯದ ಮೊದಲ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮದುವೆ ಎಂಬ ಬಿರುದು ಸಹ ಪಡೆದುಕೊಂಡಿದೆ.

ಪರಿಸರದ ಉಳಿಕೆಗಾಗಿ ಮನಸ್ಸಿನಲ್ಲಿ ಕಸ ಕಿತ್ತು ಬಿಸಾಕಿ!ಪರಿಸರದ ಉಳಿಕೆಗಾಗಿ ಮನಸ್ಸಿನಲ್ಲಿ ಕಸ ಕಿತ್ತು ಬಿಸಾಕಿ!

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಇಂಜಿನಿಯರ್ ಮಹೇಶ್ ಅವರ ಪುತ್ರ ನಿಶ್ಚಲ್ ಮಹೇಶ್ ಹಾಗೂ ಪೂಜಾ ಬಿ ಶೇಷಾದ್ರಿ ಎಂಬ ನವ ಜೋಡಿ ನಿನ್ನೆ ಪರಿಸರ ಸ್ನೇಹಿ ವಿವಾಹ ಮಾಡಿಕೊಂಡರು. ಇಲ್ಲಿ ಮದುವೆ ಮಂಟಪ ಸಂಪೂರ್ಣವಾಗಿ ಹಸಿರುಮಯವಾಗಿತ್ತು.

 ವಿಶ್ವ ಪರಿಸರ ದಿನ: ಪರಿಸರ ಸಂರಕ್ಷಣೆಗೆ ಧ್ವನಿ ಎತ್ತಿದ ನೇತಾರರು ವಿಶ್ವ ಪರಿಸರ ದಿನ: ಪರಿಸರ ಸಂರಕ್ಷಣೆಗೆ ಧ್ವನಿ ಎತ್ತಿದ ನೇತಾರರು

Clean city Mysuru witnessed a plastic free wedding

ಧಾರೆ ಮಂಟಪದಿಂದ ಹಿಡಿದು ಊಟದ ಕೋಣೆ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿ ಮಾಡಲಾಗಿತ್ತು. ಬಾಳೆ ಎಲೆಗಳಿಗೆ ಬದಲಾಗಿ ಸ್ಟೀಲ್ ತಟ್ಟೆ ಹಾಗೂ ಲೋಟಗಳನ್ನು ಬಳಸಲಾಗಿತ್ತು. ಸುಮಾರು 2 ಸಾವಿರ ಸ್ಟೀಲ್ ತಟ್ಟೆಗಳು ಹಾಗೂ ಲೋಟಗಳ ಬಳಕೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬರುವ ತ್ಯಾಜ್ಯಗಳನ್ನ ಕಡಿಮೆ ಮಾಡಲಾಗಿದೆ.

Clean city Mysuru witnessed a plastic free wedding

ಗ್ರೀನ್ ವೆಡ್ಡಿಂಗ್ ಪಾಲಿಕೆ ಅಧಿಕಾರಿ ಮಗನ ಮದುವೆಯಿಂದಲೇ ಜಾರಿಗೆ ಬಂದಿದ್ದು, ಮೈಸೂರು ಮಹಾನಗರ ಪಾಲಿಕೆಯ ಪ್ರಯತ್ನಕ್ಕೆ ಮೊದಲ ಜಯ ಸಿಕ್ಕಂತಾಗಿದೆ. ಹಸಿರು ಶಿಷ್ಠಾಚಾರ ಅನುಷ್ಠಾನ ಮಾಡುವ ಮೂಲಕ ಪರಿಸರ ಸ್ನೇಹಿಯಾಗಿ ವಿವಾಹವನ್ನು ನಡೆಸಿರುವ ಹಿನ್ನೆಲೆಯಲ್ಲಿ ವಧು ವರರಿಗೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ಪಾಲಿಕೆ ಆಯುಕ್ತೆ ಶಿಲ್ಪ ನಾಗ್ ಪ್ರಮಾಣ ಪತ್ರ ನೀಡಿ ಅಭಿನಂಧಿಸಿದರು.

English summary
Clean city Mysuru witnessed a plastic free, green wedding. Nischal and Pooja couples wedding named as a first plastic free green wedding in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X