ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಗ್ಧ ಚಾರ್ಲಿಗೆ ಫುಲ್ ಡಿಮಾಂಡ್: ತೆಲುಗು, ಮಲಯಾಳಂನಿಂದಲೂ ಆಫರ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜು.2: ತನ್ನ ಮುಗ್ಧ ಅಭಿನಯದಿಂದ ರಾಜ್ಯದ ಮನೆಮಾತಾಗಿರುವ '777 ಚಾರ್ಲಿ' ಸಿನಿಮಾದ ಶ್ವಾನದ ಊರು ಸಾಂಸ್ಕೃತಿಕ ನಗರಿ ಮೈಸೂರು. ಅಷ್ಟೇ ಅಲ್ಲ ಅದರ ತರಬೇತಿದಾರ ಕೂಡ ಮೈಸೂರಿನವರೇ. ಸದ್ಯ ಇಡೀ ಕನ್ನಡಿಗರ ಆಕರ್ಷಣೆ ಕೇಂದ್ರಬಿಂದುವಾಗಿರುವ ಚಾರ್ಲಿಗೆ ನೆರೆರಾಜ್ಯಗಳಿಂದಲೂ ಸಿನಿಮಾದಲ್ಲಿ ಅಭಿನಯಿಸುವಂತೆ ಹೆಚ್ಚಿನ ಡಿಮ್ಯಾಂಡ್ ಸೃಷ್ಟಿಯಾಗಿದೆ!

'ಚಾರ್ಲಿ' ಚಿತ್ರ ಸದ್ಯ ಕರ್ನಾಟಕದಲ್ಲಿ ಹೊಸ ಅಲೆ ಸೃಷ್ಟಿಸಿದೆ. ರಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ಶ್ವಾನದ ಪ್ರೀತಿಯ ಸುತ್ತವೇ ನಡೆಯುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಚಾರ್ಲಿ ಮನಸೂರೆಗೊಂಡಿದೆ. ಇಂತಹ ಚಾರ್ಲಿಗೆ ತರಬೇತಿ ನೀಡಿದವರು ಮೈಸೂರು ತಾಲೂಕಿನ ಡಿ.ಸಾಲುಂಡಿಯ ಪ್ರಮೋದ್. ಇವರು ಡಿಕೆ9 ವರ್ಕಿಂಗ್ ಡಾಂಗ್ ಟ್ರೈನಿಂಗ್ ಸ್ಕೂಲ್ ನಡೆಸುತ್ತಿದ್ದಾರೆ. ಇದರಲ್ಲಿ 22 ಶ್ವಾನಗಳಿವೆ. ಚಿತ್ರದಲ್ಲಿ ಬರುವ ಚಿಕ್ಕ ಹಾಗೂ ದೊಡ್ಡ ಎರಡು ವಯಸ್ಸಿನ ಶ್ವಾನವನ್ನು ತರಬೇತಿ ನೀಡಿ ಉತ್ತಮ ಅಭಿನಯ ಬರುವಂತೆ ಮಾಡಿದವರು ಪ್ರಮೋದ್.

ಮೊದಲ ಆಷಾಢ ಶುಕ್ರವಾರ: ಚಾಮುಂಡಿ ತಾಯಿಯ ದರ್ಶನಕ್ಕೆ ಭಕ್ತಸಾಗರಮೊದಲ ಆಷಾಢ ಶುಕ್ರವಾರ: ಚಾಮುಂಡಿ ತಾಯಿಯ ದರ್ಶನಕ್ಕೆ ಭಕ್ತಸಾಗರ

ಚಾರ್ಲಿ ಇಡೀ ರಾಜ್ಯದ ಮನೆಮಾತಾಯಿತು

ಚಾರ್ಲಿ ಇಡೀ ರಾಜ್ಯದ ಮನೆಮಾತಾಯಿತು

ನಾಯಿಯ ಸುತ್ತವೇ ಈ ಕತೆ ನಡೆಯುವ ಕಾರಣ ಅಭಿನಯದಿಂದಲ್ಲೇ ಎಲ್ಲರನ್ನೂ ಆಕರ್ಷಿಸುವ ಶ್ವಾನ ನಿರ್ದೇಶನ ಕಿರಣ್ ರಾಜ್ ಅವರಿಗೆ ಬೇಕಿತ್ತು. ಇದಕ್ಕಾಗಿ ಅವರು ಸಾಕಷ್ಟು ಅಡಿಶನ್ ಕೂಡ ನಡೆಸಿದ್ದರು. ಆದರೆ, ಇವರ ಕಥೆಗೆ ಪೂರಕವಾಗಿ ಅಭಿನಯಸುವ ಶ್ವಾನಗಳಂತೂ ಸಿಗಲೇ ಇಲ್ಲ. ಕೊನೆಗೆ ಕವಲುದಾರಿ ಸಿನಿಮಾದ ನಿರ್ದೇಶಕ ಹೇಮಂತ್ ಅವರ ಸಲಹೆ ಮೇರೆಗೆ ಪ್ರಮೋದ್ ಅವರನ್ನು ಕಿರಣ್ ರಾಜ್ ಸಂಪರ್ಕಿಸಿದರು. ಮುಂದೆ ನಡೆದಿದ್ದೆಲ್ಲಾ ಇತಿಹಾಸ. ಚಾರ್ಲಿ ಇಡೀ ರಾಜ್ಯದ ಮನೆಮಾತಾಯಿತು.

ಮೈಸೂರಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಮಾತನಾಡಿದ ಉಮೇಶ್ ಕತ್ತಿ!ಮೈಸೂರಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಮಾತನಾಡಿದ ಉಮೇಶ್ ಕತ್ತಿ!

ಪ್ರಮೋದ್ ಗೆ ಜರ್ಮನಿ ತಜ್ಞರಿಂದ ಪ್ರಮಾಣ ಪತ್ರ

ಪ್ರಮೋದ್ ಗೆ ಜರ್ಮನಿ ತಜ್ಞರಿಂದ ಪ್ರಮಾಣ ಪತ್ರ

ಹಾಗೆ ನೋಡಿದರೆ ಪ್ರಮೋದ್ ಬಯಸಿದ್ದೇ ಬೇರೆ ಆದರೆ ಅವರು ಆಯ್ಕೆ ಮಾಡಿಕೊಂಡ ವೃತ್ತಿಯೇ ಬೇರೆ. ಮೊದಲಿನಿಂದಲೂ ಪ್ರಮೋದ್ ಅವರಿಗೆ ಸಿವಿಲ್ ಪರೀಕ್ಷೆ ಬರೆದು ಒಳ್ಳೆಯ ಅಧಿಕಾರಿಯಾಗಬೇಕೆಂಬ ಹಂಬಲ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಪರಿಣಾಮ ಶ್ವಾನ ಪ್ರಿಯರಾಗಿದ್ದ ಪ್ರಮೋದ್ ಇದನ್ನೇ ವೃತ್ತಿಯಾಗಿ ಸ್ವೀಕರಿಸಿದರು. ಸದ್ಯ ಜರ್ಮನಿ ತಜ್ಞರಿಂದ ಪ್ರಮಾಣ ಪತ್ರ ಪಡೆದಿರುವ ಪ್ರಮೋದ್ ಶ್ವಾನಗಳ ವರ್ತನೆ, ಮನೋವಿಜ್ಞಾನದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾರೆ.

ಚಾರ್ಲಿಗೆ ಸೂಕ್ತ ತರಬೇತಿ ನೀಡಿಯೇ ಕ್ಯಾಮೆರಾ ಮುಂದೆ

ಚಾರ್ಲಿಗೆ ಸೂಕ್ತ ತರಬೇತಿ ನೀಡಿಯೇ ಕ್ಯಾಮೆರಾ ಮುಂದೆ

‘‘ಚಾರ್ಲಿಗೆ ಸೂಕ್ತ ತರಬೇತಿ ನೀಡಿಯೇ ಕ್ಯಾಮೆರಾ ಮುಂದೆ ನಿಲ್ಲಿಸುತ್ತಿದ್ದೆ. ಕಾಶ್ಮೀರದಲ್ಲಿ ಕ್ಲೈಮಾಕ್ಸ್ ದೃಶ್ಯಕ್ಕೂ ಮುನ್ನ 10 ದಿನಗಳ ಕಾಲ ಮಂಜುಗಡೆಗಳ ನಡುವೆ ತರಬೇತಿ ನೀಡಲಾಗಿತ್ತು. ಯಾವುದೇ ಪ್ರಾಣಿ ಇರಲಿ ಮೊದಲು ಅವುಗಳಿಗೆ ಪ್ರೀತಿ ಕೊಡಬೇಕು. ನಂತರ ಅವುಗಳ ವಿಶ್ವಾಸ ಗಳಿಸಬೇಕು. ಆಗಮಾತ್ರ ಅವು ನಾವು ಹೇಳಿದಂತೆ ಕೇಳುತ್ತವೆ. ಚಾರ್ಲಿ ಎಷ್ಟೇ ಜನದಟ್ಟಣೆ ಇದ್ದರೂ ಸ್ವಲ್ಪವೂ ಹೆದರದೇ ಶೂಟಿಂಗ್ ನಲ್ಲಿ ಭಾಗವಹಿಸುತ್ತಿತ್ತು. ಒಳಾಂಗಣ ಹಾಗೂ ಹೊರಾಂಗಣ ಶೂಟಿಂಗ್ ಗೂ ಮುನ್ನ ಸಾಕಷ್ಟು ತರಬೇತಿ ನಡೆಯುತ್ತಿತ್ತು,'' ಎನ್ನ್ತುತಾರೆ ಪ್ರಮೋದ್.

ನೆರೆರಾಜ್ಯದ ಸಿನಿಮಾ ಇಂಡಸ್ಟ್ರಿಯಿಂದಲೂ ಡಿಮ್ಯಾಂಡ್

ನೆರೆರಾಜ್ಯದ ಸಿನಿಮಾ ಇಂಡಸ್ಟ್ರಿಯಿಂದಲೂ ಡಿಮ್ಯಾಂಡ್

ಸದ್ಯ ಚಾರ್ಲಿ ಸಿನಿಮಾದ ಶ್ವಾನಕ್ಕೆ ಕನ್ನಡ ಮಾತ್ರವಲ್ಲದೆ ನೆರೆರಾಜ್ಯದ ಸಿನಿಮಾ ಇಂಡಸ್ಟ್ರಿಯಿಂದಲೂ ಡಿಮ್ಯಾಂಡ್ ಶುರುವಾಗಿದೆ. ಡಾಲಿ ಧನಂಜಯ್ ಅಭಿನಯಿಸುತ್ತಿರುವ ಹೊಯ್ಸಳ ಸಿನಿಮಾಗೂ ಪ್ರಮೋದ್ 5 ಅಪರೂಪದ ಬೆಲ್ಜಿಯನ್ ಮ್ಯಾಲಿನಾಯಿಸ್ ನೀಡಿದ್ದಾರೆ. ತೆಲುಗು, ಮಲಯಾಳಂನಿಂದ ಸಿನಿಮಾದಲ್ಲಿ ನಟಿಸಲು ಪ್ರಮೋದ್ ಅವರ ಕೇಂದ್ರದ ಶ್ವಾನಗಳಿಗೆ ಅವಕಾಶ ಬಂದಿದೆ. ಚಾರ್ಲಿ ದೆಸೆಯಿಂದ ಆಕೆ ಸ್ನೇಹಿತರಿಗೂ ಈಗ ಬೇರೆ ಬೇರೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಲಭಿಸುತ್ತಿದೆ. ಚಿತ್ರದಲ್ಲಿ ಚಾರ್ಲಿ ಸಿನಿಮಾ ನೋಡಿದವರಲ್ಲಿ ಹಲವರು ಬೀದಿ ನಾಯಿಗಳನ್ನು ತಂದು ಸಾಕಲು ಶುರು ಮಾಡಿದ್ದಾರೆ. ಕೆಲವರು ಶ್ವಾನಗಳನ್ನು ದತ್ತು ಸ್ವೀಕರಿಸಿದ್ದಾರೆ.

Recommended Video

ಮೆಕ್ಸಿಕೋದಲ್ಲಿ ಇದೇ ಕಾರಣಕ್ಕೆ ಮೇಯರ್ ಮೊಸಳೆನ ಮದುವೆ ಆಗಿರೋದು !! | OneIndia Kannada

English summary
charlie the name was famous in state due to his innocent performance. the cultural city of mysuru is the hometown of the dog from the movie '777 Charlie', Not only that, its trainer is also from mysuru. charlie, who is currently the center of attraction of the entire Kannadigas, has created a high demand for acting in movies from neighboring states!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X