Get Updates
Get notified of breaking news, exclusive insights, and must-see stories!

ಮೈಸೂರಿಗರಿಗೆ ಉಚಿತ ಶೌಚಾಲಯ ನಿರ್ಮಿಸಿಕೊಟ್ಟ ಚಂಢೀಗಡದ ಯುವತಿ

ಮೈಸೂರು,ಜೂನ್ 16: ಸಮಾಜಸೇವೆ ಅಂದರೆ ಸಾಕು ನಮ್ಮ ಯುವಕರು ನಮಗೆ ಟೈಂ ಎಲ್ಲಿದೇ ಎಂದು ಮಾರು ದೂರ ಓಡುವವರೇ ಹೆಚ್ಚು. ಆದರೆ ಇಲ್ಲೊಬ್ಬ ಯುವತಿ ಇವರೆಲ್ಲರನ್ನು ಮೀರಿಸುವ ಸಾಧನೆ ಮಾಡಿ, ಹಳ್ಳಿ ಜನರ ಮನ ಗೆದ್ದಿದ್ದಾಳೆ. ಮೈಸೂರಿನ ಕುಗ್ರಾಮದಲ್ಲಿ ಚಂಡೀಗಢದ ಯುವತಿಯೋರ್ವಳು 70ಶೌಚಾಲಯಗಳನ್ನು ನಿರ್ಮಿಸಿ ಗ್ರಾಮದ ಜನತೆಗೆ ಸಹಾಯ ಮಾಡಿದ್ದಾಳೆ.

ನರಸೀಪುರ ತಾಲೂಕು ಬನ್ನೂರು ಹೋಬಳಿಯ ಬಿ.ಸಿ ಹಳ್ಳಿಯಲ್ಲಿ ಚಂಡೀಗಢ ಮೂಲದ ಯುವತಿ ಉಸ್ಮಾ ಗೋಸ್ವಾಮಿ ಶೌಚಾಲಯಗಳನ್ನು ನಿರ್ಮಿಸಿದ್ದು, ಈಕೆ ದೆಹಲಿ ವಿಶ್ವವಿದ್ಯಾನಿಲಯದ ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಯುಪಿಎಸ್ಸಿ ಮಾಡಬೇಕೆನ್ನುವ ಗುರಿ ಹೊಂದಿರುವ ಉಸ್ಮಾ ಅವರಿಗೆ ಗ್ರಾಮಗಳಲ್ಲಿ ವಾಸ ಮಾಡುವ ಜನರಿಗೆ ಸಹಾಯ ಮಾಡುವ ಉದ್ದೇಶವಿದೆಯಂತೆ.

Chandigarh girl has built toilets in Mysuru with free of cost

ಎಸ್ ಬಿ ಐ ಯೂತ್ ಫಾರ್ ಇಂಡಿಯಾ ಫೆಲೋಶಿಪ್ ಈಕೆಯನ್ನು ಆಡಳಿತ ವಲಯದಲ್ಲಿ ಕಾರ್ಯ ಮಾಡಲು ಪ್ರೇರೇಪಿಸಿದೆಯಂತೆ. 2016 ರ ಆಗಸ್ಟ್ 19ರಿಂದ ಮೈಸೂರಿನ ಹಲವು ಹಳ್ಳಿಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಉಸ್ಮಾ ಸರ್ಕಾರದ ಸೌಲಭ್ಯಗಳನ್ನು ತಿಳಿದುಕೊಂಡು ಜನರಿಗೆ ತಲುಪಿಸುತ್ತಿದ್ದಾರೆ.

ಪ್ಯಾರಲೀಗಲ್ ಕ್ಲಿನಿಕ್ ತೆರೆದು ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ. ಪ್ರತಿಯೊಬ್ಬರು ಶೌಚಾಲಯವನ್ನು ನಿರ್ಮಿಸಬೇಕೆಂದು ಕರೆ ನೀಡುತ್ತಿರುವ ಈ ಯುವತಿಗೆ ಆ ಭಾಗದ ಜನರು ತುಂಬಾ ವಿಶ್ವಾಸವನ್ನು ತೋರಿಸುತ್ತಿದ್ದಾರೆ.

ಒಟ್ಟಾರೆ ಇಂತಹ ಯುವತಿಯನ್ನು ನೋಡಿಯಾದರೂ ನಮ್ಮ ಯುವಪೀಳಿಗೆ ಕಲಿಯುವ ಅನಿವಾರ್ಯತೆಇದೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+