Electricity Price Hike: ವಿದ್ಯುತ್ ದರ ಏರಿಕೆ ಮಾಡಲು ಸೆಸ್ಕ್ ನೀಡಿದ ಕಾರಣಗಳೇನು?

ಮೈಸೂರು, ಫೆಬ್ರವರಿ 20: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ಕಂದಾಯದ ಕೊರತೆ ಭರಿಸಲು ವಿದ್ಯುತ್ ದರ ಪರಿಷ್ಕರಣೆ ಅಗತ್ಯವಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ ಕರ್ನಾಟಕ ವಿದ್ಯುತ್ ವಿದ್ಯುಚ್ಛಕ್ತಿ ನಿಯ೦ತ್ರಣ ಆಯೋಗ(ಕೆಇಆರ್‌ಸಿ)ಕ್ಕೆ ಮನವಿ ಮಾಡಿದ್ದು, ಅದಕ್ಕೆ ಹತ್ತು ಹಲವು ಕಾರಣಗಳನ್ನು ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಇಆರ್ಎಸ್ ಅಧ್ಯಕ್ಷ ಪಿ.ರವಿಕುಮಾರ್ ಅಧ್ಯಕ್ಷತೆಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಸಾರ್ವಜನಿಕ ವಿಚಾರಣೆಯಲ್ಲಿ ದರ ಏರಿಕೆ ಅವಶ್ಯಕತೆ ಕುರಿತು ಪ್ರಸ್ತಾವನೆಯನ್ನು ಆಯೋಗಕ್ಕೆ ಸೆಸ್ಕ್ ನ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ ಕಾರಣ ಸಹಿತ ಮಾಹಿತಿ ನೀಡಿದ್ದಾರೆ.

Chamundeshwari Electricity Supply Corporation give Reasons For Electricity Price Hike

ಮುಂದಿನ ಆರ್ಥಿಕ ವರ್ಷ 2025-26ರಲ್ಲಿ 609.56 ಕೋಟಿ ರೂ. ಕೊರತೆಗೆ 0.68 ಪೈಸೆ, 2026-27ನೇ ಸಾಲಿನ 970.30 ಕೋಟಿ ರೂ.ಕೊರತೆ ನೀಗಿಸಲು 1.03 ಪೈಸೆ ಮತ್ತು 2027-28ನೇ ಸಾಲಿನಲ್ಲಿ 1214.15 ಕೋಟಿ ರೂ. ಕೊರತೆ ಭರಿಸಲು ಪ್ರತಿ ಯೂನಿಟ್ ಗೆ 1.23 ರೂ.ನಷ್ಟು ದರ ಹೆಚ್ಚಿಸುವಂತೆ ಪ್ರಸ್ತಾಪ ಸಲ್ಲಿಸಿ, ಇದಕ್ಕೆ ತಕ್ಷಣವೇ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು 2026ರಲ್ಲಿ 8982.28, 2027ರಲ್ಲಿ 9398.14 ಹಾಗೂ 2028ರಲ್ಲಿ 9836.16 ಮಿಲಿಯನ್ ಯೂನಿಟ್ನಷ್ಟು ವಿದ್ಯುತ್ ವಿದ್ಯುತ್ ಮಾರಾಟವಾಗುವ ನಿರೀಕ್ಷೆಯಿದ್ದು, ಪ್ರಸ್ತುತ ವಿದ್ಯುತ್ ದರದಲ್ಲಿ 2026ಕ್ಕೆ 7551.01 ಕೋಟಿ ರೂ., 2027ಕ್ಕೆ 7919.82 ಕೋಟಿ ರೂ. ಹಾಗೂ 2028ಕ್ಕೆ 8309.99 ಕೋಟಿ ರೂ. ಆದಾಯವಾಗುವ ನಿರೀಕ್ಷೆ ಹೊಂದಲಾಗಿದೆ. ಇದರಲ್ಲಿ ಕ್ರಮವಾಗಿ ವಿದ್ಯುತ್ ಖರೀದಿ ವೆಚ್ಚ 2026ರಲ್ಲಿ 6329.14, 2027ರಲ್ಲಿ 6671.16 ಹಾಗೂ 2028ರಲ್ಲಿ 7137.57 ಕೋಟಿ ರೂ.ಗಳಾಗಿವೆ.

ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ

ಕಾರ್ಯ ಮತ್ತು ನಿರ್ವಹಣಾ ವೆಚ್ಚಗಳು 2026ರಲ್ಲಿ 1234.1, 2027ರಲ್ಲಿ 1332.74 ಹಾಗೂ 2028ರಲ್ಲಿ 1404.7 ಕೋಟಿ. ರೂ. ಆಗಲಿದೆ. ಅಲ್ಲದೇ ಸವಕಳಿ, ಬಡ್ಡಿ ಮತ್ತು ಹಣಕಾಸು ವೆಚ್ಚಗಳು, ಇತರೆ ಡೆಬಿಟ್ಗಳು, ಇತರೆ ಆದಾಯ, ಎಆರ್ಆರ್, 2026ಕ್ಕೆ ಮುಂದುವರಿಸಲಾದ 2024ರ ದರ ಹೆಚ್ಚಳ ಸೇರಿದಂತೆ 2026ಕ್ಕೆ 8160.57 ಕೋಟಿ ರೂ., 2027ಕ್ಕೆ 8890.12 ಕೋಟಿ ರೂ ಹಾಗೂ 2028ಕ್ಕೆ 9524.12 ಕೋಟಿ ರೂ. ಆಗಲಿದೆ ಎಂದು ವಿವರಿಸಿದ್ದಾರೆ.

Chamundeshwari Electricity Supply Corporation give Reasons For Electricity Price Hike

ಮುಂದಿನ ಮೂರು ವರ್ಷಗಳ ವಿದ್ಯುತ್ ಸರಬರಾಜಿನ ಸರಾಸರಿ ಬೆಲೆ, ಪ್ರತಿ ಯೂನಿಟ್ಗೆ (3/1)ನಂತೆ 2026ಕ್ಕೆ 9.08 ರೂ., 2027ಕ್ಕೆ 9.45 ರೂ, 2028ಕ್ಕೆ 9.68 ರೂ.ಆಗಲಿದೆ. ಸರಾಸರಿ ಬೇಡಿಕೆ, ಪ್ರತಿ ಯೂನಿಟ್ಗೆ (2/1)ರೂ. ನಂತೆ 2026ಕ್ಕೆ 8.40ರೂ, 2027ಕ್ಕೆ 8.42 ರೂ. ಹಾಗೂ 2028ಕ್ಕೆ 8.44 ರೂ. ಆಗಲಿರುವ ಕಾರಣ 2026ಕ್ಕೆ 609.56 ಕೋಟಿ ರೂ., 2027ಕ್ಕೆ 970.3 ಕೋಟಿ ರೂ. ಹಾಗೂ 2028ಕ್ಕೆ 1214.1 ಕೋಟಿ ರೂ. ಕೊರತೆಯಾಗಲಿದೆ. ಈ ಕಂದಾಯ ಕೊರತೆಯನ್ನು ಪ್ರಸ್ತಾವಿತ ವಿದ್ಯುತ್ ದರ ಪರಿಷ್ಕರಣೆಯ ಮೂಲಕ ಭರಿಸಲು ವಿದ್ಯುತ್ ದರ ಪರಿಷ್ಕರಣೆ ಅಗತ್ಯವಿದೆ ಎಂದು ಅವರು ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.

ಈ ಸಂಬಂಧ ನಡೆದ ಸಭೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯ ಎಚ್.ಕೆ.ಜಗದೀಶ್, ಜಾವೇದ್ ಅಖ್ತರ್, ಸೆಸ್ಕ್ ತಾಂತ್ರಿಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಸೇರಿದಂತೆ ನಿಗಮದ ಅಧಿಕಾರಿಗಳು ಭಾಗವಹಿಸಿ ಹತ್ತು ಹಲವು ಸಲಹೆಗಳನ್ನು ನೀಡಿದ್ದಾರೆ. ಮುಂದೆ ಏರಿಕೆಯಾಗಲಿರುವ ವಿದ್ಯುತ್ ದರ ಹೇಗಿರಲಿದೆ? ಕರ್ನಾಟಕ ವಿದ್ಯುತ್ ವಿದ್ಯುಚ್ಛಕ್ತಿ ನಿಯ೦ತ್ರಣ ಆಯೋಗ ಏನು ಕ್ರಮಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+