ಮೈಸೂರಿನಲ್ಲಿ ಬಿಸಿಲ ಝಳ ಲೆಕ್ಕಿಸದೆ ಪತಿಯರ ಪರ ಪತ್ನಿಯರ ಪ್ರಚಾರ ಜೋರು

ಮೈಸೂರು, ಏಪ್ರಿಲ್ 12: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇದ್ದರೂ ಈ ಕ್ಷೇತ್ರದ ಒಮ್ಮೆ ಮಾತ್ರ ಮಹಿಳೆ ಗೆದ್ದು, ಇತಿಹಾಸ ಸೃಷ್ಟಿಸಿದ್ದರು. ಇಲ್ಲಿ ಈಗ ಮಹಿಳೆಯ ಪ್ರಸ್ತಾಪ ಏಕೆಂದರೆ ಮಹಿಳೆಯೆಂದರೆ ಮತ ಹಾಕುತ್ತೇವೆಂದು ಎಲ್ಲರೂ ನಗುತ್ತಲೇ ತಿಳಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಮಹಿಳೆಯರನ್ನು ಅದರಲ್ಲೂ ಅಭ್ಯರ್ಥಿಗಳ ಪತ್ನಿಯರನ್ನು ಮುಂದಿಟ್ಟುಕೊಂಡು ಮತ ಚಲಾಯಿಸುವುದು ಮೊದಲಿಂದಲೂ ರೂಢಿ. ಹಾಗಾಗಿ ವಿಧಾನಸಭಾ ಚುನಾವಣೆಗಳಲ್ಲಿ ಪತ್ನಿಯರು ಪತಿಯರ ಗೆಲುವಿಗಾಗಿ ಶ್ರಮಿಸಿದ್ದರು.ಇದರೊಟ್ಟಿಗೆ ಲೋಕಸಭಾ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಪತ್ನಿಯರು ಗಂಡಂದಿರ ಗೆಲುವಿಗಾಗಿ ಪ್ರಚಾರಕ್ಕೆ ಇಳಿದಿದ್ದರು.

ಇದೀಗ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಚ್ ವಿಜಯ್ ಶಂಕರ್ ಪತ್ನಿ ಬಬಿತ ಎಚ್ ವಿ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮಡದಿ ಅರ್ಪಿತಾ ಸಿಂಹ ಅವರು ಬೆಳಗಾಗುತ್ತಲೇ ಚುನಾವಣಾ ಪ್ರಚಾರಕ್ಕೆ ಇಳಿಯುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಭ್ಯರ್ಥಿಗಳ ಹೆಂಡತಿಯರೇ ಪ್ರಚಾರಕ್ಕೆ ಬರುತ್ತಿರುವ ಕಾರಣ ಗ್ರಾಮೀಣ ಮಹಿಳೆಯರು ಕುತೂಹಲದಿಂದ ಮನೆಗಳಿಂದ ಹೊರಗೆ ಬಂದು ನೋಡುತ್ತಿದ್ದಾರೆ. ಬಿಸಿಲಲ್ಲಿ ಬೆವರುತ್ತ ತಲೆಯ ಮೇಲೆ ಸೆರಗು, ಟೊಪ್ಪಿಗೆ ಹಾಗೂ ಬಟ್ಟೆ ಹಾಕಿಕೊಂಡು ಮತ ಕೇಳುತ್ತಿರುವುದನ್ನು ಆಸಕ್ತಿಯಿಂದ ಆಲಿಸುತ್ತಿದ್ದಾರೆ.ಇವರನ್ನು ನೋಡಲು ಮಹಿಳೆಯರು ಗುಂಪುಗೂಡಿ ಸೇರುತ್ತಿರುವುದು ಕಂಡು ಬರುತ್ತಿದೆ. ಮುಂದೆ ಓದಿ...

 ಕಂಡುಬಂದ ಭಿನ್ನವಾದ ಪ್ರತಿಕ್ರಿಯೆ

ಕಂಡುಬಂದ ಭಿನ್ನವಾದ ಪ್ರತಿಕ್ರಿಯೆ

ಕಾರ್ಯಕರ್ತರು ಗುಂಪು ಕಟ್ಟಿಕೊಂಡು ಪ್ರಚಾರಕ್ಕೆ ಹೋದಾಗ ನೀಡುವ ಪ್ರತಿಕ್ರಿಯೆಗಿಂತಲೂ ಭಿನ್ನವಾದ ಪ್ರತಿಕ್ರಿಯೆಯನ್ನು ಮಹಿಳಾ ಮತದಾರರು ಅಭ್ಯರ್ಥಿಗಳ ಹೆಂಡತಿಯರು ಮನೆ ಬಾಗಿಲಿಗೆ ಬಂದಾಗ ನೀಡುತ್ತಿದ್ದಾರೆ.

 ಅರ್ಪಿತಾ ಸಿಂಹ ಅನಿಸಿಕೆ

ಅರ್ಪಿತಾ ಸಿಂಹ ಅನಿಸಿಕೆ

"ಪತಿ ಪ್ರತಾಪ್ ಸಿಂಹ ಪರವಾಗಿ 2014ರ ಲೋಕಸಭಾ ಚುನಾವಣೆಯಲ್ಲೂ ಪ್ರಚಾರ ಮಾಡಿದ್ದೆ. ಈಗಾಗಲೇ ಮೈಸೂರಿನ ಹಳ್ಳಿ- ಹಳ್ಳಿಗೂ ತೆರಳಿ ಪ್ರಚಾರ ಮಾಡುತ್ತಿದ್ದೇನೆ. ನನಗೆ ಪತಿಯ ಗೆಲುವಿಗಿಂತ ಮೋದಿಯವರ ಗೆಲುವಿಗೆ ಪ್ರಥಮ ಆದ್ಯತೆ. ಹಾಗಾಗಿ ಪ್ರಮುಖ ಹಳ್ಳಿಗಳಿಗೆ ತೆರಳಿ ಪತಿಯ ಪರವಾಗಿ ಮತ ಯಾಚಿಸಿದ್ದೇನೆ" ಎಂದು ಅರ್ಪಿತಾ ಸಿಂಹ ಹೇಳುತ್ತಾರೆ.

 ಬಿಸಿಲಲ್ಲಿ ಬಂದವರಿಗೆ ಮಜ್ಜಿಗೆ

ಬಿಸಿಲಲ್ಲಿ ಬಂದವರಿಗೆ ಮಜ್ಜಿಗೆ

ಅಭ್ಯರ್ಥಿಯ ಪತ್ನಿಯೇ ಮಹಿಳೆಯರೊಂದಿಗೆ ಪ್ರಚಾರಕ್ಕೆ ಬಂದಿರುವುದನ್ನು ನೋಡಿ ಮಹಿಳೆಯರು ಬಿಸಿಲಲ್ಲಿ ಮಜ್ಜಿಗೆ, ಹಾಲು ಹಾಗೂ ತಂಪಾದ ನೀರು ಕೊಟ್ಟು ಶುಭ ಹಾರೈಸುತ್ತಿದ್ದಾರೆ. ಕೆಲವು ಗ್ರಾಮದಲ್ಲಿ ಶಾಲು ಹೊದಿಸಿ ಸನ್ಮಾನಿಸುತ್ತಿದ್ದಾರೆ ಎನ್ನುತ್ತಾರೆ ಬಿಜೆಪಿ ಮುಖಂಡರು.

 ವಿಜಯ್ ಶಂಕರ್ ಪತ್ನಿ ಬಬಿತ ಅನಿಸಿಕೆ

ವಿಜಯ್ ಶಂಕರ್ ಪತ್ನಿ ಬಬಿತ ಅನಿಸಿಕೆ

"ಕ್ಷೇತ್ರದ ಮಹಿಳೆಯರು ಆರತಿ ಎತ್ತಿ ಸ್ವಾಗತ ನೀಡುತ್ತಿದ್ದಾರೆ. ಮನೆಯ ಮಗಳಂತೆ, ಸೊಸೆಯಂತೆ ಗೌರವದಿಂದ ಬರಮಾಡಿಕೊಂಡು ಪ್ರೀತಿ ತೋರುತ್ತಿದ್ದಾರೆ. ಇದರಿಂದ ನಮಗೆ ಬಿಸಿಲಿನ ಝಳ ಅರಿವಿಗೆ ಬರುತ್ತಿಲ್ಲ" ಎನ್ನುತ್ತಾರೆ ಸಿ.ಎಚ್ ವಿಜಯ್ ಶಂಕರ್ ಪತ್ನಿ ಬಬಿತಾ. ಮಹಿಳೆಯರು ಅಡುಗೆ ಮಾಡುವುದನ್ನು ಬಿಟ್ಟು ನಮ್ಮನ್ನು ಭೇಟಿಯಾಗಲು ಬರುತ್ತಾರೆ. ಅಷ್ಟೇ ಅಲ್ಲ ತಂಪು ಪಾನೀಯ ಕೊಡುತ್ತಿದ್ದಾರೆ. ಬಿಸಿಲಲ್ಲಿ ಎಚ್ಚರಿಕೆ ವಹಿಸುವಂತೆ ಸಲಹೆಗಳನ್ನೂ ನೀಡುತ್ತಿದ್ದಾರೆ ಎಂದು ಅನುಭವ ಹಂಚಿಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+