ಮೈಸೂರಿನ ವಿದ್ಯುತ್‌ ಇಲಾಖೆಯ ಸಿಬ್ಬಂದಿಗೆ ಹೆಲ್ತ್ ಕಾರ್ಡ್ ವಿತರಣೆ

ಮೈಸೂರು, ಮೇ 02: ಗ್ರಾಹಕರಿಗೆ ಅಡಚಣೆಯಿಲ್ಲದೆ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಹಗಲಿರುಳು ಕಾರ್ಯನಿರ್ವಹಿಸುವ ಸಿಬ್ಬಂದಿ ಸುರಕ್ಷತೆ ಹಾಗೂ ಆರೋಗ್ಯ ರಕ್ಷಣೆಗಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ಹಾಗೂ ಸುರಕ್ಷತಾ ಸಾಮಗ್ರಿ ವಿತರಿಸಿದೆ ಆ ಮೂಲಕ ಸೆಸ್ಕ್ ಗಮನ ಸೆಳೆದಿದೆ.

ಸೆಸ್ಕ್ ನಲ್ಲಿ ಕಾರ್ಯನಿರ್ವಹಿಸುವ 6,351 ಸಿಬ್ಬಂದಿ ಹಾಗೂ ಅವರ ಕುಟುಂಬದ 19,468 ಸದಸ್ಯರು ಸೇರಿದಂತೆ 25,819 ಮಂದಿಗೆ ಅನುಕೂಲವಾಗುವಂತೆ ಪ್ರತಿ ಕುಟುಂಬಕ್ಕೆ 2 ಲಕ್ಷ ರೂಪಾಯಿಗಳ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ಸೌಲಭ್ಯ ನೀಡಲಾಗಿದ್ದು, ಹೆಚ್ಚುವರಿ ವೆಚ್ಚಗಳಿಗೆ 3 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

CESC Launches Cashless Health Card and Safety Gear for Employees

ಈ ಯೋಜನೆ ಜಾರಿಯಾದ ದಿನದಿಂದ ಈವರೆಗೂ 147 ಪ್ರಕರಣಗಳಲ್ಲಿ 43 ಸಿಬ್ಬಂದಿ ಹಾಗೂ 104 ಮಂದಿ ಅವಲಂಬಿತರು ಇದರ ಲಾಭ ಪಡೆದಿದ್ದು, 94 ಲಕ್ಷ ರೂಪಾಯಿಗಳನ್ನು ಈಗಾಗಲೇ ವಿತರಿಸಲಾಗಿದೆ. ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ಮೂಲಕ ರಾಜ್ಯದ 1413 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ಈ ಬಗ್ಗೆ ಸೆಸ್ಕ್ ಅಧ್ಯಕ್ಷರಾಗಿರುವ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, 'ನಿಗಮದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಸಹಕಾರದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಕ್ಕೆ ಎ ಶ್ರೇಣಿಯ ರೇಟಿಂಗ್ ದೊರೆತಿರುವುದು ಸಂತಸದ ವಿಷಯ. ನಿಗಮ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಿಬ್ಬಂದಿ ತಪ್ಪದೇ ಸುರಕ್ಷತಾ ಪರಿಕರಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಬೆಳೆ ನಷ್ಟ ಸೇರಿದಂತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ರೈತರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಹಾಗೂ ಸರಿಯಾದ ಸಮಯಕ್ಕೆ ಸ್ಪಂದಿಸಿ' ಎಂದು ಕರೆ ನೀಡಿದರು.

'ರೈತರು ಪವರ್ ಮನ್‌ಗಳ ಮೇಲೆ ಅವಲಂಬಿತರಾಗಿದ್ದು, 24 ಗಂಟೆಗಳಲ್ಲಿ ರೈತರ ವಿದ್ಯುತ್ ಪರಿವರ್ತಕಗಳನ್ನು ಬದಲಿಸಿಕೊಡುವಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದ ಅವರು, ರೈತರಿಗೆ 24 ಗಂಟೆಯೊಳಗೆ ವಿದ್ಯುತ್ ಪರಿವರ್ತಕಗಳನ್ನು ಬದಲಿಸುವಲ್ಲಿ ವಿಳಂಬ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ' ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಸೆಸ್ಕ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಆರೋಗ್ಯ ಹಾಗೂ ಸುರಕ್ಷತೆಗೆ ಆದ್ಯತೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸೆಸ್ಕ್‌ನ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಹೇಳಿದರು. ಅಲ್ಲದೇ 'ನಿಗಮದ ಎಲ್ಲ ಸಿಬ್ಬಂದಿಗೆ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ನೀಡಲು ಎಷ್ಟೇ ಅಡೆತಡೆಗಳು ಉಂಟಾದರೂ, ಸಿಬ್ಬಂದಿಯಿಂದ ಹಣ ಪಡೆಯದೆ, ಆರ್ಥಿಕ ಹೊರೆ ಮಿತಿಗೊಳಿಸಿ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ನೀಡಲಾಗಿದೆ. ಈ ಸೌಲಭ್ಯ ಕೇವಲ ಸಿಬ್ಬಂದಿಗೆ ಮಾತ್ರವಲ್ಲದೇ ಅವರ ಕುಟುಂಬದ ಎಲ್ಲ ಸದಸ್ಯರಿಗೆ ದೊರೆಯಲಿದೆ. ರಾಜ್ಯದ ಯಾವುದೇ ಎಸ್ಕಾಂಗಳಲ್ಲಿ ನೀಡದ ಸೌಲಭ್ಯವನ್ನು ಸೆಸ್ಕ್ ವತಿಯಿಂದ ಮೊದಲ ಬಾರಿಗೆ ನೀಡಲಾಗುತ್ತಿದೆ 'ಎಂದರು.

'ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಸುರಕ್ಷತಾ ಸಾಮಗ್ರಿಗಳನ್ನು ಎಲ್ಲ ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ನೀಡಿದ್ದು, ಅದರ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು. ಪವರ್ ಮೆನ್ ಮತ್ತು ಸೆಕ್ಷನ್ ಅಧಿಕಾರಿಗಳು ಸಂಸ್ಥೆಯ ತಳಹದಿಯಾಗಿದ್ದು, ಗ್ರಾಹಕರೊಂದಿಗೆ ನೇರ ಸಂಪರ್ಕದಲ್ಲಿರುತ್ತಾರೆ. ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುವ ಜೊತಗೆ, ನಿಗದಿತ ಸಮಯಕ್ಕೆ ಫೀಡರ್, ಟ್ರಾನ್ಸ್ ಫಾರ್ಮರ್ಗಳ ನಿರ್ವಹಣೆ ಮಾಡಲು ಸಮರೋಪಾದಿಯಲ್ಲಿ ಕೆಲಸವನ್ನು ಮಾಡಬೇಕಿದ್ದು, ವಿದ್ಯುತ್ ಅಪಘಾತ ಮತ್ತು ಅಡಚಣೆಯಾದಂತೆ ಹೆಚ್ಚಿನ ನಿಗಾವಹಿಸಿ ಕಾರ್ಯನಿರ್ವಹಿಸಿ' ಎಂದು ಕರೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+