• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರಾ ಉದ್ಘಾಟನೆಗೆ ಭೈರಪ್ಪ ಆಯ್ಕೆ ಹಿನ್ನೆಲೆ ಸಿಹಿ ಹಂಚಿ ಸಂಭ್ರಮ

|

ಮೈಸೂರು, ಆಗಸ್ಟ್ 14: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಎಸ್.ಎಲ್.ಭೈರಪ್ಪನವರನ್ನು ಸರ್ಕಾರ ಆಯ್ಕೆ ಮಾಡಿದನ್ನು ಸ್ವಾಗತಿಸಿ ಪ್ರಜ್ಞಾವಂತ ನಾಗರೀಕ ವೇದಿಕೆಯ ವತಿಯಿಂದ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.

ಈ ಬಾರಿ ಸಾಹಿತಿ ಎಸ್ ಎಲ್ ಭೈರಪ್ಪ ಅವರಿಂದ ದಸರಾ ಉದ್ಘಾಟನೆ

ಇದೇ ವೇಳೆ ಮಾತನಾಡಿದ ಸಂಘದ ಜಯಸಿಂಹ ಶ್ರೀಧರ್, "ಡಾ.ಎಸ್.ಎಲ್ ಭೈರಪ್ಪನವರು ಕನ್ನಡದ ಶ್ರೇಷ್ಠ ಸಾಹಿತಿಗಳು. ಅವರ ಕಾದಂಬರಿಗಳು ಪ್ರಪಂಚದ ಹೆಚ್ಚು ಭಾಷೆಗಳಿಗೆ ಅನುವಾದವಾಗಿ ಕನ್ನಡದ ನೆಲ, ಜಲ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸಿವೆ. ಅತ್ಯಂತ ನಿಷ್ಠುರವಾದಿಯಾಗಿ ಯಾರ ನೆರಳಿನಲ್ಲೂ ಅರಳದೆ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಅಂತಹ ಎಸ್.ಎಲ್ ಭೈರಪ್ಪನವರಿಗೆ ಈ ಬಾರಿ ದಸರಾ ಉದ್ಘಾಟನೆ ದೊರಕಿರುವುದು ಮೈಸೂರಿಗರಿಗೆ ಹೆಮ್ಮೆಯ ವಿಷಯ. ಅದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತು ಸಂಸದ ಪ್ರತಾಪಸಿಂಹ ಅವರಿಗೆ ಧನ್ಯವಾದಗಳು" ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರೀಕ ವೇದಿಕೆಯ ಕಡಕೊಳ ಜಗದೀಶ್, ವಿಕ್ರಮ್ ಅಯ್ಯಂಗಾರ್, ಶ್ರೀನಿವಾಸ ರಾಕೇಶ್, ಚಕ್ರಪಾಣಿ, ಕರ್ನಾಟಕ ಸೇನಾ ಪಡೆಯ ತೇಜೇಶ್ ಲೋಕೇಶ್ ಗೌಡ,ಕುಮಾರ್ ಗೌಡ, ಆರ್.ಎಸ್ ನಾಯ್ಡು ಟ್ರಸ್ಟ್ ನ ಶ್ರೀನಿವಾಸ್ ರಮೇಶ್ ಮುಂತಾದವರು ಹಾಜರಿದ್ದರು.

English summary
Celebration in Mysuru for S L Bhyrappa selected Dassara inauguration. Pragnavantha vedike volunteers distributed sweets to Mysurieans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X