ಮೈಸೂರಿನಲ್ಲಿ ನಿರ್ಮಾಣವಾಗಲಿದೆ ಕೋಲ್ಕತ್ತಾ ಮಾದರಿಯ ಸೈನ್ಸ್ ಸಿಟಿ

ಮೈಸೂರು, ಜೂನ್ 25: ವಿಜ್ಞಾನದ ಮೂಲವನ್ನು ಅರಿಯುವ ಹಾಗೂ ವೈಜ್ಞಾನಿಕ ಚಿಂತನೆಗಳಿಂದ ವಿಸ್ಮಯ ಲೋಕವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸೈನ್ಸ್‌ ಸಿಟಿ ಇನ್ನೇನು ಕೆಲವೇ ವರ್ಷದಲ್ಲಿ ಆರಂಭಗೊಳ್ಳಲಿದೆ.

ಮೈಸೂರಿನಿಂದ 28 ಕಿ.ಮೀ. ದೂರದ ಸುತ್ತೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸೈನ್ಸ್ ಸಿಟಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಮಂಗಳೂರು ಹಾಗೂ ಧಾರವಾಡದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆದಿದ್ದು, ಉಳಿದಂತೆ 19 ಜಿಲ್ಲೆಗಳಲ್ಲಿ ಕೇಂದ್ರಗಳನ್ನು ಆರಂಭಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೋಲ್ಕತ್ತಾದಲ್ಲಿ ಈಗಾಗಲೇ ತಲೆ ಎತ್ತಿರುವ ಸೈನ್ಸ್ ಸಿಟಿ' ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಆ ಮಾದರಿಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಸುತ್ತೂರು ಮಠ ಉಚಿತವಾಗಿ ಭೂಮಿ ನೀಡಲು ಮುಂದಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಆರಂಭವಾಗಲಿರುವ ಈ ಸೈನ್ಸ್ ಸಿಟಿಯು ಒಟ್ಟಾರೆ 200 ಕೋಟಿ ರೂಪಾಯಿಗಳ ಯೋಜನೆಯಾಗಿದೆ. ಇದು ಪೂರ್ಣಗೊಳ್ಳಲು 5 ವರ್ಷ ಕಾಲಾವಧಿಯ ಅಂದಾಜು ಮಾಡಲಾಗಿದೆ. ವಿಜ್ಞಾನದ ಮಾದರಿಗಳು, ವಸ್ತುಪ್ರದರ್ಶನ, ತಾರಾಲಯ, ಖಗೋಳಕ್ಕೆ ಸಂಬಂಧಪಟ್ಟ ಮಾಹಿತಿ, ಭೂವಿಜ್ಞಾನ ಸೇರಿದಂತೆ ವಿವಿಧ ವಿಭಾಗಗಳಿರುತ್ತವೆ. ಮಾಹಿತಿ ಮಾತ್ರವಲ್ಲದೆ ಅಲ್ಲಿ ಉಪನ್ಯಾಸ, ಮಾರ್ಗದರ್ಶನ, ಕಮ್ಮಟ ಸೇರಿದಂತೆ ನಿರಂತರ ಕಾರ್ಯಕ್ರಮಗಳು ಜರುಗುತ್ತವೆ.

calcutta type science City to be built in Mysuru

ಇದಕ್ಕೆಂದು ಪ್ರತ್ಯೇಕ ಸಂಸ್ಥೆ ಸ್ಥಾಪಿಸಿ, ಸೈನ್ಸ್‌ ಸಿಟಿ ನಿರ್ಮಾಣವಾಗಿ ಹಸ್ತಾಂತರಿಸಿದ ನಂತರ ಆ ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಇದು ಮಾಹಿತಿ ಕೇಂದ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಬದಲಾಗಲಿದೆ. ಕನಿಷ್ಠ ಟಿಕೆಟ್ ದರ ನೀಡಿ ಯಾರು ಬೇಕಾದರೂ ಸೈನ್ಸ್‌ಸಿಟಿ ಪ್ರವೇಶಿಸಬಹುದು. ವಿಜ್ಞಾನದ ಅಚ್ಚರಿಗಳು, ಅನುಭಗಳು, ಸಂಶೋಧನೆಗಳು, ಚಿತ್ರ ಪ್ರದರ್ಶನ, ಆಡಿಯೋ ವೀಡಿಯೋ ಪ್ರೆಸೆಂಟೇಷನ್ ಗಳು, ಸಾಕ್ಷ್ಯ ಚಿತ್ರಗಳು, ಮ್ಯೂಸಿಯಂ ಸೇರಿದಂತೆ ವಿವಿಧ ಮಾಧ್ಯಮಗಳ ಮುಖಾಂತರ ಪರಿಚಯಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು.

ಮಕ್ಕಳಿಗೆ ವಿಜ್ಞಾನದ ಬಗ್ಗೆ ಅಭಿರುಚಿ ಬೆಳೆಸಲು ಹಾಗೂ ಜನಸಾಮಾನ್ಯರಿಗೆ ವೈಜ್ಞಾನಿಕ ಚಿಂತನೆ ಮೂಡಿಸಲು ಸೈನ್ಸ್ ಸಿಟಿ ಸಹಕಾರಿಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+