• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಕಾರ್ಯಕಾರಿಣಿ: ಗುಡುಗಿದ ಯಡಿಯೂರಪ್ಪ, ಮಿಂಚದ ಈಶ್ವರಪ್ಪ!

By ಯಶಸ್ವಿನಿ ಎಂ.ಕೆ.
|

ಮೈಸೂರು, ಮೇ 6 : "ವೇದಿಕೆಯ ಮೇಲಿರುವ ಎರಡೂ ಬದಿಯ ನಾಯಕರೇ, ಬಿಜೆಪಿಯೆಂಬುದು ಒಗ್ಗಟ್ಟಿನ ಮೂಲಮಂತ್ರದ ಪಕ್ಷ. ನಾನು ಸಿಎಂ ಖುರ್ಚಿಗೆ ಅಂಟಿಕೊಂಡಿಲ್ಲ. ಎಲ್ಲರ ಅಭ್ಯುದಯವೇ ನನ್ನ ಧ್ಯೇಯ ತಿಳಿದುಕೊಳ್ಳಿ" ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೀಗೆಂದು ಗುಡುಗುತ್ತಿದ್ದಂತೆಯೇ, ಕೆಲ ಕಾಲ ಸಭೆಯಲ್ಲಿ ಮೌನ ಮನೆಮಾಡಿತ್ತು!

ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಎಂದೊಡನೆಯೇ ಹಲವರ ಮನಸ್ಸಿನಲ್ಲಿ ಮೂಡಿದ್ದ ಚಿತ್ರಣವೇ ಬೇರೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಭಿನ್ನಮತದ ಕಾರ್ಮೋಡ ಬಿರುಮಳೆಯಾಗಿ ಸುರಿಯೋದಕ್ಕೆ ಕಾರ್ಯಕಾರಿಣಿ ಒಂದು ವೇದಿಕೆ ಎಂದೇ ಭಾವಿಸಿದ್ದರು ಹಲವರು. ಈಗಾಗಲೇ ಉಭಯ ನಾಯಕರ ಮನಸ್ತಾಪ ಹೈಕಮಾಂಡ್ ಬಾಗಿಲನ್ನು ತಟ್ಟಿರುವುದರಿಂದ ಕಾರ್ಯಕಾರಿಣಿಗೆ ಈಶ್ವರಪ್ಪ ಹಾಜರಾಗುತ್ತಾರೆಂಬ ಸುದ್ದಿಯನ್ನು ಕೇಳಿಯೇ ಕಾರ್ಯಕಾರಿಣಿಯಲ್ಲಿ ಬಿಗು ವಾತಾವರಣ ಮೂಡಿತ್ತು.

ಆದರೆ ಅಲ್ಲಿ ನಡೆದಿದ್ದೇ ಬೇರೆ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಬಗ್ಗೆ ಯಡಿಯೂರಪ್ಪ ಗುಡುಗಿದರೆ, ಯಾವ ಮಾತನ್ನೂ ಆಡದೆ ತಮ್ಮ ಪಾಡಿಗೆ ತಾವಿದ್ದು ಈಶ್ವರಪ್ಪ ಮಿಂಚದೆ ಉಳಿದರು! ಇಬ್ಬರ ನಡುವೆ ಜಟಾಪಟಿಯನ್ನೇ ನಿರೀಕ್ಷಿಸಿದ್ದವರಿಗೆ ಈ ದಿನ ನಿರಾಶೆಯಾಗಿದ್ದರೂ ಅಚ್ಚರಿಯಿಲ್ಲ!

ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಭಾಷಣ ಆರಂಭಿಸುತ್ತಿದ್ದಂತೆ ಎರಡೂ ಬದಿಯ ನಾಯಕರೇ ಎಂದು ಸಂಭೋಧಿಸಿದ ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಹೆಸರು ಪ್ರಸ್ತಾಪಿಸಲಿಲ್ಲ.

ಸಭಾ ಮರ್ಯಾದೆಯಂತೆ ವೇದಿಕೆಯ ಮೇಲಿರುವ ನಾಯಕರೆಲ್ಲರಿಗೂ ಗೌರವ ಸೂಚಿಸಿದ ಬಿಎಸ್ವೈ ಅದ್ಯಾಕೋ ಈಶ್ವರಪ್ಪರ ಮೇಲೆ ಮುನಿಸಿಕೊಂತೆ ಕಾಣುತಿತ್ತು. ತಮ್ಮ ಭಾಷಣದ ವೇಳೆ ಅವರ ಹೆಸರನ್ನು ಕೈಬಿಟ್ಟಿದ್ದೆ ಇದಕ್ಕೆ ಸ್ಪಷ್ಟ ಉದಾಹರಣೆ.[ಪಕ್ಕದಲ್ಲೇ ಕುಳಿತಿದ್ದರೂ ಮುಖವನ್ನೇ ನೋಡದ ಬಿಎಸ್ವೈ]

ಉಭಯ ನಾಯಕರೂ ಮಾತನಾಡದೆ ಇದ್ದಿದ್ದು ಅವರ ನಡುವಿನ ವೈಮನಸ್ಯಕ್ಕೆ ಕನ್ನಡಿ ಹಿಡಿದಿತ್ತು. ಒಟ್ಟಿನಲ್ಲಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಬೀತುಪಡಿಸಲು ಕಾರ್ಯಕಾರಿಣಿ ಸಭೆ ನೆರವಾಗಿದ್ದು ಸುಳ್ಳಲ್ಲ! ಪರಸ್ಪರ ಪರೋಕ್ಷ ಟಾಂಗ್ ಗಳು, ಒಬ್ಬರ ಮುಖವನ್ನೊಬ್ಬರು ನೋಡದೆ ಇದ್ದಿದ್ದು ಕಾರ್ಯಕಾರಣಿ ಸಭೆಯ ಗಾಂಭೀರ್ಯವನ್ನು ಹೆಚ್ಚಿಸಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ನಾನು ಸಿಎಂ ಖುರ್ಚಿಗೆ ಅಂಟಿಕೊಂಡಿಲ್ಲ.[CD ವಾರ್ ಮುಗೀತು, ಇದೀಗ ಮೈಸೂರಲ್ಲಿ ವೈರಲ್ ಆಗಿದೆ ಆಡಿಯೋ ವಾರ್!]

ಹಿಂದುಳಿದ ಹಾಗೂ ಎಸ್.ಸಿ,ಎಸ್ ಟಿ ಮುಖಂಡರನ್ನು ಬಿಜೆಪಿಗೆ ಕರೆ ತರುವ ಪ್ರಯತ್ನ ನಡೆಯುತ್ತಿದೆ. ಜನರಿಗೆ ಸುಳ್ಳು ಭರವಸೆ ನೀಡಿ‌ ಮೋಸ ಮಾಡಬೇಡಿ. ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ನಿಂದ ಮೋಸವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 25 ಕ್ಷೇತ್ರಗಳಲ್ಲಿ ಜಯಗಳಿಸುವುದೆ ನಮ್ಮ ಗುರಿಯಾಗಿದೆ ಎಂದರು. ಮೇ 14 ಅಥವಾ 15 ರಿಂದ ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರವಾಸ ಆರಂಭಿಸಲಿದ್ದಾರೆ. ಒಂದೂವರೆ ತಿಂಗಳ ಕಾಲ ರಾಜ್ಯದ ಬರಗಾಲ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.[ರಾಯಣ್ಣ ಬ್ರಿಗೇಡ್ ನಲ್ಲಿ ರಾಜಕೀಯ ಮಾಡಲ್ಲ: ಈಶ್ವರಪ್ಪ ಸ್ಪಷ್ಟನೆ]

ಬಿಜೆಪಿಯಲ್ಲಿ ಏಕತೆ ಕೊರತೆ

ಬಿಜೆಪಿಯಲ್ಲಿ ಏಕತೆ ಕೊರತೆ

ಕಾಂಗ್ರೆಸ್ ವಿರುದ್ಧ ಹೋರಾಡಲು ಏಕತೆ ಬೇಕು. ಆ ಏಕತೆ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ರಾಜ್ಯ ಬಿಜೆಪಿ ಬಿಕ್ಕಟ್ಟಿನ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದರು. ಸಭೆಯಲ್ಲಿ ಎರಡು ವಿಚಾರಗಳ ಬಗ್ಗೆ ಮಾತನಾಡಬೇಕಿದೆ. ಏಕತೆ ಮತ್ತು ಸಮಗ್ರತೆ ಬಗ್ಗೆ ತೀರ್ಮಾನ ಮಾಡಬೇಕಿದೆ. ಎಲ್ಲರನ್ನೂ ಜೊತೆಗೆ ಸೇರಿಸಿಕೊಂಡು ಹೋರಾಡುವ ಏಕತೆ ಬೇಕಿದೆ ಎಂದರು. ಇಲ್ಲಿಂದ ನಾವು ಸಕಾರಾತ್ಮಕವಾಗಿ ಹೋಗಬೇಕು.ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುಲು ನಾವು ಇಲ್ಲಿ ಸೇರಿದ್ದೇವೆ. ದೇಶದ 17 ಕಡೆ ನಮ್ಮ ಸರ್ಕಾರವಿದ್ದು ನಮಗೆ ಎಲ್ಲ ಕಡೆ ಬೆಂಬಲವಿದೆ ಹೀಗಾಗಿ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಬಾಯ್ತಿಪ್ಪಿನಿಂದ ಕಾಂಗ್ರೆಸ್ಗೆ 150 ಸೀಟ್ ಎಂದ ಮುರುಳೀಧರ್ ರಾವ್

ಬಾಯ್ತಿಪ್ಪಿನಿಂದ ಕಾಂಗ್ರೆಸ್ಗೆ 150 ಸೀಟ್ ಎಂದ ಮುರುಳೀಧರ್ ರಾವ್

ಭಾಷಣ ಆರಂಭವಾಗುತ್ತಿದ್ದಂತೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸೀಟ್ ಗಳನ್ನು ಗೆಲ್ಲುತ್ತದೆ ಎನ್ನುವ ಬದಲು ಕಾಂಗ್ರೆಸ್ ಗೆಲ್ಲಲಿದೆ ಎಂದರು. ನಂತರ ಶೋಭಾ ಕರಂದ್ಲಾಜೆ ಸಣ್ದ ಚೀಟಿಯೊಂದನ್ನು ಕೊಟ್ಟ ಬಳಿಕ ತಮ್ಮ ತಪ್ಪನ್ನು ಸರಿಪಡಿಸಿಕೊಂಡರು. ಇನ್ನು ಸ್ವಚ್ಛ ಭಾರತ ಅಭಿಯಾನವನ್ನು ಬಿಜೆಪಿ ಆರಂಭ ಮಾಡಿತ್ತು. ಮೈಸೂರಿಗೆ ಮೊದಲ ಸ್ಥಾನ ಕೈ ತಪ್ಪಿದ್ದಕ್ಕೆ ಇಲ್ಲಿನ ಮೇಯರ್ ಕೇಂದ್ರಕ್ಕೆ ದೂರುತ್ತಿದ್ದಾರೆ. ಸ್ವಚ್ಛತೆ ವಿಷಯದಲ್ಲಿ ರಾಜಕೀಯ ಸಲ್ಲ ಎಂದರು.

ಎದ್ದು ಕಾಣುತ್ತಿದ್ದ ಉಭಯ ಮುಖಂಡರ ಸಿಟ್ಟು

ಎದ್ದು ಕಾಣುತ್ತಿದ್ದ ಉಭಯ ಮುಖಂಡರ ಸಿಟ್ಟು

ಇನ್ನು ಸಭೆಗೆ ಚಾಲನೆ ನೀಡಿದ ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ರಾವ್ ಅವರಿಗೆ ಶಾಲು ಹೊದಿಸಿ ಮೈಸೂರಿನ ಪೇಟ ತೊಡಿಸಿ ಸನ್ಮಾನ ಮಾಡಲಾಯಿತು. ಸಭೆಯಲ್ಲಿ ಕೆ.ಎಸ್ ಈಶ್ವರಪ್ಪ ಹಾಗೂ ಬಿಎಸ್ ಯಡಿಯೂರಪ್ಪ ಒಬ್ಬರನೊಬ್ಬರು ನೋಡದಂತೆ ವೇದಿಕೆಯ ಮೇಲೆ ಕುಳಿತಿದ್ದರು. ಅಲ್ಲದೆ ಕೆಎಸ್ ಈಶ್ವರಪ್ಪ ಬಿಎಸ್ ವೈಗೆ ಕೈಮುಗಿದು ನಮಸ್ಕರಿಸಿದರೂ ಬಿಎಸ್ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾದರು. ಈಶ್ವರಪ್ಪರವರ ಬಳಿ ಯಾರೂ ತೆರಳದ ಕಾರಣ ಅವರೊಬ್ಬರೇ ಕುಳಿತು ಊಟ ಮಾಡಿದರು. ಓರ್ವ ಸಾಮಾನ್ಯ ನಾಯಕನಂತೆ ಈಶ್ವರಪ್ಪ ಕಂಡುಬರುತ್ತಿದ್ದರು. ಇದನ್ನು ಗಮನಿಸಿದ ಸಂಸದ ಪ್ರತಾಪ್ ಸಿಂಹ ಅವರನ್ನು ಮಾತನಾಡಿಸುತ್ತಿದ್ದದ್ದು ಕಂಡುಬಂತು.

ಸಭೆಯಲ್ಲಿ ಮೇಳೈಸಿದ ತಾರಾಬಳಗ

ಸಭೆಯಲ್ಲಿ ಮೇಳೈಸಿದ ತಾರಾಬಳಗ

ಸಭೆಯಲ್ಲಿ ಚಿತ್ರರಂಗದ ಪ್ರಮುಖ ತಾರಾಗಣವೇ ನೆರದಿತ್ತು. ನಟರಾದ ಕುಮಾರ್ ಬಂಗಾರಪ್ಪ, ಜಗ್ಗೇಶ್, ನಟಿಯರಾದ ಮಾಳವಿಕ, ಶೃತಿ ಹಾಗೂ ತಾರಾ(ಅನುರಾಧ) ಭಾರತೀಯ ಜನತಾಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರೆಲ್ಲ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದು, ಪರಸ್ಪರ ಉಭಯ ಕುಶಲೋಪರಿಗಳನ್ನು ವಿಚಾರಿಸಿಕೊಂಡರು.

ಸಭೆಯಲ್ಲಿ ನಿದ್ದೆಗೆ ಜಾರಿದ ನಾಯಕರು!

ಸಭೆಯಲ್ಲಿ ನಿದ್ದೆಗೆ ಜಾರಿದ ನಾಯಕರು!

ಕೇಂದ್ರ ಸಚಿವ ಅನಂತಕುಮಾರ್ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಕಾರ್ಯಕರ್ತರೆಲ್ಲ ನಿದ್ರೆಗೆ ಜಾರಿರುವುದು ಕಂಡು ಬಂತು. ಕಾರ್ಯಕರ್ತರಿಗೆ ಕಾಗಿಲವಾಡಿ ಶಿವಣ್ಣ ಸೇರಿದಂತೆ ಪ್ರಮುಖ ನಾಯಕರು ರಾತ್ರಿ ಎಲ್ಲ ಎಚ್ಚರವಾಗಿದ್ದು, ಇಲ್ಲಿ ತಾವು ನಿದ್ದೆ ಮಾಡಲಿಕ್ಕೆ ಬಂದವರೇನೋ ಎನ್ನುವಂತೆ ಚೆನ್ನಾಗಿ ನಿದ್ರೆ ಮಾಡುತ್ತಿದ್ದರು!

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Two days working committee meeting which is taking place in Mysuru has built a stage to express dispute between B S Yeddyurappa and K S Eshwarappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X