ಅಂಧ ಮಹಿಳೆ ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಅತ್ಯಾಚಾರ ಮಾಡಿಯೇ ಬಿಟ್ಟ
ತಿ.ನರಸೀಪುರ, ಏ.9: ಅಂಧ ಮಹಿಳೆ ತನಗೇನು ಮಾಡದಂತೆ ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಯುವಕನೊಬ್ಬ ಅತ್ಯಾಚಾರ ಮಾಡಿಯೇ ಬಿಟ್ಟಿದ್ದಾನೆ. ಯವಕನೊಬ್ಬ ವಿವಾಹಿತ ಅಂಧ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಿ ನರಸೀಪುರದಲ್ಲಿ ನಡೆದಿದೆ.
ಗದಗದ ನಂದಿಗುಳ ಗ್ರಾಮದ ದಂಪತಿ ಅಂಧರಾಗಿದ್ದಾರೆ ಕಳೆದ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಮಲೈಮಹದೇಶ್ವರ ಬೆಟ್ಟಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ವಾಪಸ್ಸಾಗುವಾಗ ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಕಾಯುತ್ತಿದ್ದರು. ಆಗ ಇಬ್ಬರು ಶೌಚಾಲಯಕ್ಕೆ ಹೋಗಿದ್ದಾರೆ.

ಆಕೆ ವಾಪಸ್ ಬಂದ ಬಳಿಕ ಅಲ್ಲಿಯೇ ಕಾಯುತ್ತಿದ್ದ ವ್ಯಕ್ತಿಯೊಬ್ಬ ಆಕೆಗೆ ನೀರು ಕೊಟ್ಟು, ನಿಮ್ಮ ಪತಿ ಪತಿ ನಿಮಗಾಗಿ ಹುಡುಕಾಡುತ್ತಿದ್ದಾರೆ ಎಂದು ಹೇಳಿ ದೂರ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಪತ್ನಿ ಕಾಣದಿದ್ದಾಗ ಪತಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಇತ್ತ ಮಹಿಳೆ ಹೇಗೋ ಸಾರ್ವಜನಿಕರ ಸಹಾಯ ಪಡೆದು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ.











Click it and Unblock the Notifications