ಮೈಸೂರು ಮಹಾನಗರ ಪಾಲಿಕೆ 18ನೇ ವಾರ್ಡ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜಯ

ಮೈಸೂರು, ಫೆಬ್ರವರಿ 11: ಮೈಸೂರು ಮಹಾನಗರಪಾಲಿಕೆ 18ನೇ ವಾರ್ಡ್ ಗೆ ಭಾನುವಾರ ನಡೆದ ಉಪ ಚುನಾವಣೆ ಮತ ಎಣಿಕೆ ಕಾರ್ಯ ಇಂದು ನಡೆದಿದ್ದು, ಬಿಜೆಪಿ ಅಭ್ಯರ್ಥಿ ಬಿ.ವಿ.ರವೀಂದ್ರ ಜಯಭೇರಿ ಬಾರಿಸಿದ್ದಾರೆ.

ಪಾಲಿಕೆ ಉಪಚುನಾವಣೆಯ ಮತ ಎಣಿಕೆಯು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್ಕಾರಿ ಸಂಸ್ಕೃತ ಪಾಠಶಾಲೆಯಲ್ಲಿ ಇಂದು ನಡೆಯಿತು. ಬೆಳಿಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಂ ತೆರೆದು ಇವಿಎಂಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ಆರಂಭವಾಯಿತು. ಮತ ಎಣಿಕೆ ಆರಂಭವಾಗಿ ಒಂದೇ ಗಂಟೆಗೆ ಫಲಿತಾಂಶ ಹೊರಬಿದ್ದಿದ್ದು, ಚುನಾವಣಾಧಿಕಾರಿ ಎಚ್.ಎನ್.ಶಿವೇಗೌಡ ಬಿ.ವಿ.ರವೀಂದ್ರ ಅವರನ್ನು ಚುನಾಯಿತ ಅಭ್ಯರ್ಥಿ ಎಂದು ಘೋಷಿಸಿದರು.

ಸಂಸ್ಕೃತ ಪಾಠಶಾಲೆಯಲ್ಲಿ ಒಂದೇ ಎಣಿಕಾ ಟೇಬಲ್ ಅಳವಡಿಸಿದ್ದು, 20 ಮಂದಿ ಎಣಿಕೆ ನಡೆಸಿದರು. ಮತ ಎಣಿಕಾ ಪ್ರಕ್ರಿಯೆಗೆ 150 ಪೊಲೀಸ್ ಸಿಬ್ಬಂದಿ ಬಳಸಿಕೊಳ್ಳಲಾಗಿತ್ತು. ಮುಕ್ತ ಹಾಗೂ ಪಾರದರ್ಶಕವಾಗಿ ಮತಗಳ ಎಣಿಕೆ ಪ್ರಕ್ರಿಯೆ ನಡೆಸುವ ಸಲುವಾಗಿ ಅಭ್ಯರ್ಥಿಗಳ ಏಜೆಂಟರುಗಳೂ ಉಪಸ್ಥಿತರಿರಲು ಗುರುತಿನ ಚೀಟಿಗಳನ್ನು ವಿತರಿಸಲಾಗಿತ್ತು. ಪಾಲಿಕೆ 18ನೇ ವಾರ್ಡಿನ ಉಪಚುನಾವಣೆಯಲ್ಲಿ 11,877 ಮತದಾರರ ಪೈಕಿ 2,671 ಮಹಿಳೆಯರು ಸೇರಿ ಒಟ್ಟು ಕೇವಲ 5,265 ಮಂದಿ ಮಾತ್ರ (ಶೇ. 44.33) ತಮ್ಮ ಹಕ್ಕು ಚಲಾಯಿಸಿದ್ದರು.

BJP Won 18th Ward By Election In Mysuru Munixipality

ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಬಿ.ವಿ.ರವೀಂದ್ರ ಅವರಿಗೆ 2555 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಆರ್.ರವೀಂದ್ರಕುಮಾರ್ ಅವರಿಗೆ 2452 ಮತಗಳು, ಜಾತ್ಯಾತೀತ ಜನತಾದಳದ ಅಭ್ಯರ್ಥಿಗೆ 182 ಮತಗಳು ಲಭಿಸಿದ್ದು, 76 ನೋಟಾ ಮತಗಳು ಚಲಾವಣೆಯಾಗಿವೆ. ಶಾಸಕ ಎಲ್.ನಾಗೇಂದ್ರ ವಿಜೇತ ಅಭ್ಯರ್ಥಿಯನ್ನು ಅಭಿನಂದಿಸಿದರು. ಪಾಲಿಕೆಯ ಬಿಜೆಪಿ ಸದಸ್ಯರು ಸಂಭ್ರಮಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+