ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲೂ ಎಟಿಎಂಗಳಿಗೆ ಬೀಗ ಬೀಳಲಿದೆ

|
Google Oneindia Kannada News

atm
ಮೈಸೂರು, ನ. 26 : ಬೆಂಗಳೂರಿನಲ್ಲಿ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಮೇಲೆ ಎಟಿಎಂನಲ್ಲಿ ಹಲ್ಲೆ ನಡೆದ ನಂತರ ವಿವಿಧ ನಗರಗಳಲ್ಲಿ ಎಟಿಎಂ ಭದ್ರತೆಯ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಮೈಸೂರು ನಗರದಲ್ಲೂ ಎಟಿಎಂ ಭದ್ರತೆ ಕುರಿತು ಸಮೀಕ್ಷೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ, ಎಟಿಎಂ ಬಂದ್ ಮಾಡಿಸಿ ಎಂದು ನಗರ ಪೊಲೀಸ್ ಆಯುಕ್ತ ಸಲೀಂ ಆದೇಶ ನೀಡಿದ್ದಾರೆ.

ಸೋಮವಾರ ಈ ಕುರಿತು ಮಾಹಿತಿ ನೀಡಿದ ಸಲೀಂ, ನಗರದಲ್ಲಿ 272 ಎಟಿಎಂ ಕೇಂದ್ರಗಳಿವೆ. ಅವುಗಳಲ್ಲಿ 29 ಕೇಂದ್ರಗಳಲ್ಲಿ ಸಿಸಿಟಿವಿ ಇಲ್ಲ. 121 ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ ಎಂದು ಮಾಹಿತಿ ನೀಡಿದರು. ಎಲ್ಲಾ ಎಟಿಎಂಗಳಲ್ಲಿ ಸಿಸಿಟಿವಿ ಆಳವಡಿಕೆ ಮತ್ತು ಭದ್ರತಾ ಸಿಬ್ಬಂದಿ ನೇಮಿಸುವಂತೆ ಬ್ಯಾಂಕುಗಳಿಗೆ ಆದೇಶ ನೀಡಲಾಗಿದೆ ಎಂದರು. (ಎಟಿಎಂ: ಸಿದ್ದು ಸರಕಾರವನ್ನು ಜಾಲಾಡಿದ ರಾಜ್ಯಪಾಲರು)

ಬ್ಯಾಂಕುಗಳನ್ನು ಪೊಲೀಸರ ಸೂಚನೆಯನ್ನು ಪಾಲಿಸಲು ವಿಫಲವಾದರೆ, ಎಟಿಎಂಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಸಲೀಂ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಕಾಲೇಜುಗಳ ಸಮೀಪವಿರುವ ಎಟಿಎಂಗಳಲ್ಲೇ ಭದ್ರತಾ ಸಿಬ್ಬಂದಿ ನೇಮಕಮಾಡಿಲ್ಲ ಎಂದು ಅವರು ತಿಳಿಸಿರು. (ಬೆಂಗಳೂರು ನಿಯಮ ಪಾಲಿಸದ 1037 ಎಟಿಎಂಗೆ ಬೀಗ)

ಮೈಸೂರಿನಲ್ಲಿ ಎಟಿಎಂನಲ್ಲಿ ಜನರಿಗೆ ಬೆದರಿಕೆ ಹಾಕಿದ ಪ್ರಕರಣಗಳು ನಡೆದಿವೆ. ಎಟಿಎಂನಲ್ಲಿ ಅಳವಡಿಸುವ ಸಿಸಿಟಿವಿಗಳು ಎಟಿಎಂ ವೊಳಗೆ ಮತ್ತು ಹೊರಗಿನ ದೃಶ್ಯಗಳನ್ನು ಸೆರೆಹಿಡಿಯುವಂತಿರಬೇಕು. ಬೆಂಗಳೂರಿನಲ್ಲಿ ನ.19ರಂದು ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದ ಪ್ರಕರಣದ ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಣೆ ನೀಡಿದರು.

ಬೆಂಗಳೂರಿನಲ್ಲಿ ಪೊಲೀಸರು ನೀಡಿದ ಸೂಚನೆಯನ್ನು ಪಾಲಿಸದ 1073 ಎಟಿಎಂಗಳನ್ನು ಭಾನುವಾರ ಮುಚ್ಚಾಗಿದೆ. ಸದ್ಯ ಎಟಿಎಂ ಮುಚ್ಚಿದ್ದರಿಂದ ಜನರು ಪರದಾಡುವಂತಾಗಿದ್ದು, ಯಾವ ಎಟಿಎಂ ತೆರೆದಿದೆ ಎಂದು ಹುಡುಕಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. (ಎಟಿಎಂ ಪ್ರಕರಣ : ಪಾತಕಿ ಆಂಧ್ರದಲ್ಲೂ ಕೊಲೆ ಮಾಡಿದ್ದ)

English summary
As the bankers failed to ensure round-the-clock security at ATM kiosks by Sunday evening, Mysore city police clamped prohibitory orders under Section 144 of CRPC. City Police Commissioner M.A.Saleem issued the orders and decided to conduct a survey of ATMs where round-the-clock security is not provided from Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X