ಮೈಸೂರಿನಲ್ಲಿ ಈ ಬಾರಿ ಮೇಳೈಸಲಿದೆ ಬಹುರೂಪಿ – 2019 ರಂಗೋತ್ಸವ

ಮೈಸೂರು, ಜನವರಿ 5 : 2019 ರ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜ.12ರಿಂದ 18ರವರೆಗೆ 'ಲಿಂಗ ಸಮಾನತೆ' ಶೀರ್ಷಿಕೆ ಅಡಿಯಲ್ಲಿ ರಂಗಾಯಣದಲ್ಲಿ ನಡೆಯಲಿದೆ.

ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಮೈಸೂರು ಅಪರ ಜಿಲ್ಲಾಧಿಕಾರಿ ಟಿ.ಯೋಗೀಶ್ , ಬಹುರೂಪಿ ನಾಟಕೋತ್ಸವದಲ್ಲಿ ಬೇರೆ ರಾಜ್ಯಗಳ 9 ಭಾಷೆಯ ನಾಟಕಗಳನ್ನು ಹಾಗೂ ನಾಟಕೋತ್ಸವ ನಡೆಯುವ 2 ದಿನಕ್ಕೊಮ್ಮೆ ಶ್ರೀ ರಾಮಯಣ ದರ್ಶನಂ ನಾಟಕ ಕೂಡ ಪ್ರದರ್ಶಿಸಲಾಗುವುದು.

ನಾಟಕ ಕಾರ್ಯಕ್ರಮಗಳು ರಂಗಾಯಣ ಹಾಗೂ ಕಲಾಮಂದಿರದಲ್ಲಿ ನಡೆಯಲಿದೆ. ಬಹುರೂಪಿ ನಾಟಕೋತ್ಸವ ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಸರ್ಕಾರಿ ರಜೆ ಇದ್ದು,ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಆಗಮಿಸುವ ನಿರೀಕ್ಷೆ ಇದೆ ಎಂದರು.

Bahurupi theatre festival from January 12 in Mysuru

ಬಹರೂಪಿ ರಾಷ್ಟ್ರೀಯ ನಾಟಕೋತ್ಸವದ ಕುರಿತು ರಂಗಾಯಣದ ನಿರ್ದೇಶಕಿ ಬಾಗೀರಥಿ ಬಾಯಿ ಕದಂ ಮಾಹಿತಿ ನೀಡಿ ಪ್ರತಿ ವರ್ಷದಂತೆ ಬಹುರೂಪಿ ಉತ್ಸವದಲ್ಲಿ ನಾಟಕ, ವಿಚಾರ ಸಂಕಿರಣ, ಜಾನಪದ ಕಲೆಗಳ ಪ್ರದರ್ಶನ, ಪುಸ್ತಕ ಮೇಳ, ಕರಕುಶಲ ಮೇಳ, ಚಲನಚಿತ್ರೋತ್ಸವ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿಯ ಬಹುರೂಪಿ ನಾಟಕೋತ್ಸವ ಲಿಂಗ ಸಮಾನತೆ ಶೀರ್ಷಿಕೆಯಡಿ ಸಂಘಟಿಸಲಾಗುತ್ತದೆ ಎಂದರು.

ನಾಟಕೋತ್ಸವದಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ವಿವಿಧ ಭಾಷೆಗಳ 12 ನಾಟಕಗಳು ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 6 ಕನ್ನಡ ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ ಮೂರು ಚಲನಚಿತ್ರಗಳಂತೆ ಸುಮಾರು 24 ಚಲನಚಿತ್ರಗಳ ಪ್ರದರ್ಶನವಿದೆ.

ನಾಟಕೋತ್ಸವದ ಸಂದರ್ಭ ಕಲಾಮಂದಿರ ಆವರಣದಲ್ಲಿ 70 ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಕರಕುಶಲ ಹಾಗೂ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನ, ದೇಸಿ ಆಹಾರ ಪದ್ಧತಿಯ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು. ಬಹುರೂಪಿ ನಾಟಕೋತ್ಸವದ ಟಿಕೇಟ್ ದರ ಈ ಬಾರಿ 80 ರೂ.ಗಳಾಗಿರುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+