ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಎಸ್ ಅಧಿಕಾರಿ ರಶ್ಮಿ ಮಹೇಶ್‌ ಮೇಲೆ ಹಲ್ಲೆ

|
Google Oneindia Kannada News

Rashmi V Mahesh
ಮೈಸೂರು, ಅ. 15 : ಪ್ರಾದೇಶಿಕ ಆಯುಕ್ತೆ ಹಾಗೂ ಮೈಸೂರಿನ ಆಡಳಿತ ಮತ್ತು ತರಬೇತಿ ಸಂಸ್ಥೆ ಮಹಾನಿರ್ದೇಶಕಿ ರಶ್ಮಿ ಮಹೇಶ್‌ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬುಧವಾರ ಮೃತಪಟ್ಟಿದ್ದ ತರಬೇತಿ ಸಂಸ್ಥೆ ಮೇಲ್ವಿಚಾರಕ ವೆಂಕಟೇಶ್ ಅಂತಿಮ ದರ್ಶನಕ್ಕೆ ಬಂದಾಗ ಈ ಘಟನೆ ನಡೆದಿದೆ.

ಆಡಳಿತ ಮತ್ತು ತರಬೇತಿ ಸಂಸ್ಥೆ ಮೇಲ್ವಿಚಾರ ವೆಂಕಟೇಶ್ (54) ಶವ ಬುಧವಾರ ಬೆಳಗ್ಗೆ ಲಲಿತಮಹಲ್ ರಸ್ಥೆಯಲ್ಲಿರುವ ಕಚೇರಿ ಆವರಣದ ನೀರಿನ ಸಂಪ್‍ನಲ್ಲಿ ಪತ್ತೆಯಾಗಿತ್ತು. ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ವೆಂಕಟೇಶ್ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದರು. [ರಶ್ಮಿ ಮಹೇಶ್ ಬಗ್ಗೆ ಓದಿ]

ಇಂದು ಸಂಜೆ ವೆಂಕಟೇಶ್ ಮೃತ ದೇಹದ ಅಂತಿಮ ದರ್ಶನಕ್ಕೆ ತರಬೇತಿ ಸಂಸ್ಥೆ ಮಹಾನಿರ್ದೇಶಕಿ ರಶ್ಮಿ ಮಹೇಶ್ ಆಗಮಿಸಿದ್ದರು. ಅವರು ಕಾರಿನಿಂದ ಇಳಿಯುತ್ತಿದ್ದಂತೆ ಮೃತ ವೆಂಕಟೇಶ್ ಸಂಬಂಧಿಕರು ಅವರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಪುನಃ ಅವರನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಕುರಿತು ನಜಾರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಡಕ್ ಅಧಿಕಾರಿ : ಖಡಕ್ ಐಎಎಸ್ ಅಧಿಕಾರಿಯೆಂದು ಹೆಸರು ಮಾಡಿರುವ ರಶ್ಮಿ ಮಹೇಶ್ ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಸರ್ಕಾರಿ ಕೋಟಾಕ್ಕೆ ಮೆಡಿಕಲ್ ಸೀಟ್‍ಗಳನ್ನು ನೀಡದ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದಿದ್ದರು.

ರಶ್ಮಿ ಮಹೇಶ್ ತಿರುಗಿ ಬಿದ್ದ ಕೂಡಲೇ ಸರ್ಕಾರ ಅವರಿಗೆ ಸುದೀರ್ಘ ರಜೆ ಮಂಜೂರು ಮಾಡಿತ್ತು. ಬಳಿಕ ಅವರನ್ನು ಮೈಸೂರಿನ ಆಡಳಿತ ಮತ್ತು ತರಬೇತಿ ಕೇಂದ್ರದ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿತ್ತು.

English summary
Group of people attacked on Rashmi V Mahesh Director General of Administrative Training Institute (ATI) Mysore on Wednesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X