ಶತಮಾನಗಳ ಇತಿಹಾಸವಿರುವ ಮೈಸೂರಿನ ರೈಲ್ವೆ ವರ್ಕ್ ಶಾಪ್ ಮತ್ತಷ್ಟು ಮೇಲ್ದರ್ಜೆಗೆ
ಮೈಸೂರು, ಅಕ್ಟೋಬರ್. 24: ಮೈಸೂರು ನಗರದ ಅಶೋಕಪುರಂನಲ್ಲಿರುವ ರೈಲ್ವೆ ಕಾರ್ಯಾಗಾರ (ರೈಲ್ವೆ ವರ್ಕ್‍ಶಾಪ್) ವನ್ನು 35.44 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಹಾಗೂ ಆಧುನೀಕರಣಗೊಳಿಸುವ ಕಾರ್ಯ ನಡೆಯುತ್ತಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಇಂದು ಬುಧವಾರ ಪರಿಶೀಲನೆ ನಡೆಸಿದರು.
ಕೇಂದ್ರ ರೈಲ್ವೆ ಕಾರ್ಯಾಗಾರದ ವ್ಯವಸ್ಥಾಪಕ ಅಜಯ್ ಕುಮಾರ್, ಉಪ ವ್ಯವಸ್ಥಾಪಕ ಎಂ.ರವೀಂದ್ರನ್, ಉಪ ಮುಖ್ಯ ಇಂಜಿನಿಯರ್ ಬಿ.ರಮೇಶ್ ಚಂದ್ರ ಅವರೊಂದಿಗೆ ರೈಲ್ವೆ ಕಾರ್ಯಾಗಾರಕ್ಕೆ ಭೇಟಿ ನೀಡಿದ ಪ್ರತಾಪ್ ಸಿಂಹ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಕೇಂದ್ರ ರೈಲ್ವೆ ಕಾರ್ಯಾಗಾರದಲ್ಲಿ ನಡೆಯುತ್ತಿರುವ ಆಧುನೀಕರಣ ಕಾಮಗಾರಿ 2019ರ ಜೂನ್ ಗೆ ಪೂರ್ಣಗೊಳ್ಳಲಿದೆ.
ಆರ್ಥಿಕ ಬೆಳವಣಿಗೆಯಲ್ಲಿ ರೈಲ್ವೆಯ ಪ್ರಾಮುಖ್ಯತೆ ಹೆಚ್ಚಿರುವುದರ ಹಿನ್ನೆಲೆಯಲ್ಲಿ ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ ಮೈಸೂರು ರೈಲ್ವೆ ಕಾರ್ಯಾಗಾರದ ಆಧುನೀಕರಣಕ್ಕೆ ಪ್ರಬಲವಾಗಿ ಮನವಿ ಮಾಡಿತ್ತು. ಇದರ ಫಲವಾಗಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿತು.
ಕೇಂದ್ರ ರೈಲ್ವೆ ಕಾರ್ಯಾಗಾರ 500 ಕೆ.ವಿ.ಸಾಮರ್ಥ್ಯದ ಸೋಲಾರ್ ವಿದ್ಯುತ್ ಪ್ಯಾನೆಲ್ ಹೊಂದಿದ್ದು, ಪ್ರತಿವರ್ಷ 50,000 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಉಳಿದ 35,000 ಮೆ.ವ್ಯಾಟ್ ವಿದ್ಯುತ್ ಸೆಸ್ಕ್ ನಿಂದ ಪಡೆಯುತ್ತಿದೆ ಎಂದು ತಿಳಿಸಿದರು.

1,600 ಮಂದಿ ಕಾರ್ಯನಿರ್ವಹಣೆ
ಪ್ರಸ್ತುತ ರೈಲ್ವೆ ಕಾರ್ಯಾಗಾರದಲ್ಲಿ 1,600 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 300 ಮಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಯೋಜನೆ ಇದೆ.
ಭಾರತೀಯ ರೈಲ್ವೆಯ ಸಾಧನೆಯನ್ನು ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ರೈಲ್ವೆ ಕೋಚ್ ಗಳನ್ನು ದುರಸ್ತಿಗೊಳಿಸುವ ಹಾಗೂ ಅದನ್ನು ಆಧುನೀಕರಣಗೊಳಿಸುವ ಕಾರ್ಯವನ್ನು ನಡೆಸುವ ರೈಲ್ವೆ ಕಾರ್ಯಾಗಾರದ ಸಾಮರ್ಥ್ಯ ಹೆಚ್ಚಿಸಲು ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ 2016ರ ಮುಂಗಡಪತ್ರದಲ್ಲಿ 35.44 ಕೋಟಿ ರೂ.ಗಳನ್ನು ನೀಡಿತ್ತು ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

ರೈಲ್ವೆ ಕೋಚ್ ಪರಿಶೀಲನೆ
ನಿಯತಕಾಲಿಕವಾಗಿ ಕೂಲಂಕುಷವಾಗಿ ರೈಲ್ವೆ ಕೋಚ್ ಗಳನ್ನ ಬಳಕೆಗೆ ಯೋಗ್ಯವಾಗಿ ಹಾಗೂ ಸೇವೆಗೆ ಅನುಕೂಲವಾಗಿ ನಿರ್ವಹಣೆ ಮಾಡುವುದು ಇಲ್ಲಿನ ಮುಖ್ಯ ಕಾರ್ಯವಾಗಿದ್ದು, ಎಲ್ಲ ಭಾಗಗಳನ್ನೂ ಬೇರ್ಪಡಿಸಿ ಅವುಗಳನ್ನು ದುರಸ್ತಿ ಮಾಡಿ ಮತ್ತೆ ಜೋಡಿಸುವುದು, ಹಳಿಯ ಮೇಲೆ ಅವು ಸಂಚರಿಸಲು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಿ ನೀಡುವುದು ಸೇರಿದೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದರು.

70 ಕೋಚ್ ಗಳು ಸಿದ್ಧವಾಗುತ್ತಿವೆ
12 ಅಥವಾ 18 ತಿಂಗಳಿಗೊಮ್ಮೆ ಇಲ್ಲವೇ ಅವು ಕ್ರಮಿಸಿರುವ ಮಾರ್ಗದ ಆಧಾರದ ಮೇಲೆ ರೈಲ್ವೆ ಕೋಚ್ ಗಳ ನಿರ್ವಹಣೆ ಮಾಡಲಾಗುವುದು. ನೈಋತ್ಯ ರೈಲ್ವೆ ವಲಯದಲ್ಲಿ ಇದು ಎರಡನೇ ಕಾರ್ಯಾಗಾರವಾಗಿದ್ದು, ಮತ್ತೊಂದು ಹುಬ್ಬಳ್ಳಿಯಲ್ಲಿದೆ. ಪ್ರಸ್ತುತ ತಿಂಗಳಿಗೆ 70 ಕೋಚ್ ಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತಿದೆ.

1932ರಲ್ಲಿ ಮೇಲ್ದರ್ಜೆಗೆ
ಮೇಲ್ದರ್ಜೆಗೇರಿದ ನಂತರ ಇದರ ಸಾಮರ್ಥ್ಯ 80ಕ್ಕೇರಲಿದೆ. ರೈಲ್ವೆ ವರ್ಕ್‍ಶಾಪ್ ಅನ್ನು 1924ರಲ್ಲಿ ಸ್ಥಾಪಿಸಿದ್ದು, 1932ರಲ್ಲಿ ಇದನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications