ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಅಭಿಮಾನಿಗಳ ಹುಚ್ಚಾಟಕ್ಕೆ ಬೆಸ್ತುಬಿದ್ದ ಅರ್ಜುನ್ ಜನ್ಯ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 30 : ದಸರಾ ಜಂಬೂ ಸವಾರಿ ವೀಕ್ಷಣೆಗೆ ಆಗಮಿಸಿದ್ದ ಸ್ಯಾಂಡಲ್ ವುಡ್ ನ ಜನಪ್ರಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅಭಿಮಾನಿಗಳು ಮುಗಿಬಿದ್ದ ಕಾರಣ ಪೇಚಿಗೆ ಸಿಲುಕುವಂತಾಯಿತು.

ಅಂಬವಿಲಾಸ ಅರಮನೆಯ ಆವರಣದಲ್ಲಿ ವಿಐಪಿಗಳಿಗೆಂದೇ ಮೀಸಲಾದ ಆಸನದಲ್ಲಿ ಕುಳಿತು ದಸರಾ ಜಂಬೂ ಸವಾರಿಯನ್ನ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವೀಕ್ಷಿಸಿದರು.

Arjun Janya embarrassed by his fans and other Off beat stories of Mysuru Dasara 2017

ಜಂಬೂ ಸವಾರಿ ಬಳಿಕ ಸಿಎಂ ಜೊತೆಯಲ್ಲಿದ್ದ ಗಣ್ಯರು ಪುಷ್ಪಾರ್ಚನೆ ವೇದಿಕೆಯಿಂದ ಕೆಳಗಿಳಿದು ಅಲ್ಲಿಂದ ನಿರ್ಗಮಿಸಿದರು. ಇವರ ಹಿಂದೆಯೇ ಮೆರೂನ್ ಬಣ್ಣದ ಜರ್ಕಿನ್ ತೊಟ್ಟ ಸಂಗೀತ ನಿರ್ದೇಶಕ ಅರ್ಜುನ ಜನ್ಯ ತಮ್ಮ ಸ್ನೇಹಿತರ ಜತೆಗೆ ಆರಮನೆ ಆವರಣದಿಂದ ನಿರ್ಗಮಿಸಿಲು ಮುಂದಾದರು. ಈ ವೇಳೆ ಅರ್ಜುನ್ ಜನ್ಯ ಅವರನ್ನ ಗುರುತಿಸಿದ ಜನತೆ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು.

ಅಭಿಮಾನಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಅರ್ಜುನ್ ಜನ್ಯ ಸ್ಥಳದಿಂದ ಓಡಲಾರಂಭಿಸಿದರು. ಆದರೂ ಕೆಲ ಅಭಿಮಾನಿಗಳು ಅರ್ಜುನ್ ಜನ್ಯ ಅವರನ್ನ ಬೆಂಬಿಡದೆ ಬೆನ್ನಟ್ಟಿದರು. ಇದನ್ನ ಗಮನಿಸಿದ ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಅರ್ಜುನ್ ಜನ್ಯ ಅವರನ್ನ ಸುರಕ್ಷಿತವಾಗಿ ಅವರ ಕಾರಿನ ಬಳಿ ತೆರಳಲು ಸಹಕರಿಸಿದರು.

Arjun Janya embarrased by his fans and other Off beat stories of Mysuru Dasara 2017

'ಬುಕ್ ಮೈ ಷೋ' ಎಡವಟ್ಟು

ಇನ್ನು ಜಂಬೂ ಸವಾರಿ ಕಾರ್ಯಕ್ರಮದ ಟಿಕೆಟ್ ವಿತರಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನ ಖಾಸಗಿ ಸಂಸ್ಥೆ 'ಬುಕ್ ಮೈ ಷೋ' ಗೆ ವಹಿಸಲಾಗಿತ್ತು. ಆ ಮೂಲಕ ಪೊಲೀಸ್ ಇಲಾಖೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ 'ಬುಕ್ ಮೈ ಷೋ'ನ ಬಹುತೇಕ ಪ್ರತಿನಿಧಿಗಳು ಕನ್ನಡೇತರರೇ ಆಗಿದ್ದು, ಪಾಸ್ ಹೊಂದಿದ್ದು ಅರಮನೆ ಪ್ರವೇಶಿಸಲು ಆಗಮಿಸಿದವರ ಜತೆ ಸಂಹವನ ಕೊರತೆ ಉಂಟಾಗಿತ್ತು. ಇದು ಆನೇಕ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿತು.

ಹಾಗೆಯೇ ಜಂಬೂ ಸವಾರಿ ಮೆರವಣಿಗೆಯಲ್ಲೂ ಇದೇ ರೀತಿ ಅವ್ಯವಸ್ಥೆ ಕಂಡು ಬಂದಿತ್ತು. ಮೆರವಣಿಗೆಯಲ್ಲಿನ ಕಲಾತಂಡಗಳು ಹಾಗೂ ಸ್ತಬ್ದ ಚಿತ್ರಗಳು ಸಾಗುವ ಮಾರ್ಗದುದ್ದಕ್ಕೂ ಉಪಸಮಿತಿ ಸದಸ್ಯರು ಹಾಗೂ ಪೊಲೀಸರೇ ಸುತ್ತುವರೆದಿದ್ದರು. ಹಾಗಾಗಿ ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದ ಜನತೆ ಜಂಬೂ ಸವಾರಿ ನೋಡಲು ಹರಸಾಹಸ ಪಡಬೇಕಾಯಿತು.

ಕುಸಿದ ಸೈಕಲ್ ಸ್ಟ್ಯಾಂಡ್ ಛಾವಣಿ
ನಗರದ ಕೆ.ಆರ್. ಸರ್ಕಲ್ ಬಳಿ ಇರುವ ಸೈಕಲ್ ಸ್ಟ್ಯಾಂಡ್ ಛಾವಣಿ ಕುಸಿದು ಹಲವರು ಗಾಯಗೊಂಡ ಘಟನೆ ನಡೆದಿದೆ. ಜಂಬೂ ಸವಾರಿ ನೋಡಲು ವಿವಿಧೆಡೆಗಳಿಂದ ಅಸಂಖ್ಯಾತ ಜನರು ಆಗಮಿಸಿದ್ದು, ಹಲವರು ವಿವಿಧೆಡೆ ತಮಗೆ ಅನುಕೂಲವಾಗುವ ರೀತಿಯಲ್ಲಿ ನೋಡುತ್ತ ಕುಳಿತಿದ್ದರು.

ಅದೇ ರೀತಿ ಕೆ.ಆರ್. ಸರ್ಕಲ್ ನಲ್ಲಿರುವ ಸೈಕಲ್ ಸ್ಯಾಂಡ್ ಛಾವಣಿಯ ಮೇಲೆ ಹಲವರು ನೋಡುತ್ತ ಕುಳಿತಿದ್ದರು. ಈ ವೇಳೆ ಛಾವಣಿ ಮುರಿದು ಪ್ರೇಕ್ಷಕರು ಕೆಳಗೆ ಬಿದ್ದಿದ್ದು, ಹಲವರಿಗೆ ಗಾಯಗಳಾಗಿದೆ. ತೀವ್ರ ಜನಸಂದಣಿಯ ಹಿನ್ನೆಲೆಯಲ್ಲಿ ಗಾಯಗೊಂಡ ಪ್ರೇಕ್ಷಕರ ಬಳಿ ತೆರಳಲು ಪೊಲೀಸರು ಹರಸಾಹಸಪಡುವಂತಾಯಿತು.

ಹುಸಿಯಾಯಿತು ಜಿಲ್ಲಾಡಳಿತದ ನಿರೀಕ್ಷೆ
ಎಂದಿನಂತೆ ಈ ಬಾರಿಯೂ ದಸರಾ ಜಂಬೂ ಸವಾರಿ ಮೆರವಣಿಗೆ ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿ ಆಯೋಜಿಸುವುದಾಗಿ ಜಿಲ್ಲಾಡಳಿತ ಆಶ್ವಾಸನೆ ನೀಡಿತ್ತು. ಆದರೆ ಯಾವುದೇ ಅಶ್ವಾಸನೆ ಜಾರಿಗೆ ಬಾರದೆ ಜನತೆಯನ್ನ ನಿರಾಸೆಗೊಳಿಸಲಾಯಿತು. ನಾಡಹಬ್ಬ ದಸರಾ ಮಹೋತ್ಸವದ ಅತ್ಯಾಕರ್ಷಕ ಮೆರವಣಿಗೆಯಾದ ಜಂಬೂ ಸವಾರಿ ವೀಕ್ಷಿಸಲು ರಾಜ್ಯ,ದೇಶ, ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆದರೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನಡುವಿನ ಶೀತಲಸಮರದ ಪರಿಣಾಮ ಜನತೆ ಅರಮನೆ ಪ್ರವೇಶಿಸುವುದೇ ದೊಡ್ಡಕಿರಿಕಿರಿಯಾಗಿತ್ತು.

Arjun Janya embarrased by his fans and other Off beat stories of Mysuru Dasara 2017

ಕೆಳಗೆ ಬಿದ್ದ ಪ್ರಶಾಂತ್ ಆನೆ ಮಾವುತ
ಇದು ಜಂಬೂ ಸವಾರಿಯ ಘಟನೆಯಾದರೆ, ಇತ್ತ ಪಂಜಿನ ಕವಾಯತು ಮೈದಾನದ ಬಳಿಯು ಕೆಲವು ಘಟನೆಗಳು ನಡೆದವು. ಇನ್ನು ಜಂಬೂ ಸವಾರಿಯಲ್ಲಿ ಪ್ರಶಾಂತ್ ಆನೆಯನ್ನು ಮುನ್ನಡೆಸುತ್ತಿದ್ದ ಮಾವುತ ಮೈಸೂರಿನ ಬನ್ನಿ ಮಂಟಪಕ್ಕೆ ತಲುಪುವ ವೇಳೆ ಜನಸಂದಣಿಯಿಂದಾಗಿ ಕೆಳಗೆ ಬಿದ್ದ ಪರಿಣಾಮ ಕೈ ಮುರಿದಿದೆ. ಚೆನ್ನಪ್ಪ ಎಂಬ ಮಾವುತನನ್ನು ತಕ್ಷಣವೇ ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.

ಇವೆಲ್ಲದರೊಂದಿಗೆ, ಕವಾಯತು ನಡೆಯುವ ವೇಳೆ ಏಕಾಏಕಿ ಸಿಎಂ ಬಳಿ ನುಗ್ಗಿದ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿದ ಘಟನೆ ಕೂಡ ಹಚ್ಚಹಸಿರಾಗಿದೆ.

English summary
During Jamboo Savari of Mysuru Dasara, some off-beat incidents grabbed the attention of the media and will be remembered forever for their humour, embarrassing moments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X