ಮೈಸೂರು ವಿವಿ ವೆಬ್ ಸೈಟ್ ಕನ್ನಡಮಯ; ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಶ್ಲಾಘನೆ

ಮೈಸೂರು, ಜುಲೈ 11: ಮೈಸೂರು ವಿವಿ ವೆಬ್ ಸೈಟ್ ಕನ್ನಡದಲ್ಲಿ ವಿನ್ಯಾಸಗೊಂಡಿದ್ದು, ಕನ್ನಡ ಅಭಿಮಾನವನ್ನು ಮೆರೆದಿದೆ. ಮಾತೃ ಭಾಷೆಯ ಈ ಅಭಿಮಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ಶ್ಲಾಘಿಸಿದೆ, ಅಭಿನಂದನಾ ಪತ್ರ ನೀಡಿ ಪ್ರೋತ್ಸಾಹಿಸಿದೆ.

ಇಂಗ್ಲಿಷ್ ವ್ಯಾಮೋಹದಿಂದ ಸ್ಥಳೀಯ ಭಾಷೆಗಳು ಅವನತಿ ಕಾಣುತ್ತಿವೆ. ಹಿಂದಿ ಹೇರಿಕೆಯಿಂದಾಗಿ ನಮ್ಮ ಭಾಷೆಯನ್ನೇ ಉಳಿಸಿಕೊಳ್ಳಲು ಹೆಣಗಾಡಬೇಕಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯಲ್ಲಿ ವೆಬ್ ಸೈಟ್ ವಿನ್ಯಾಸಗೊಳಿಸುವುದು ಸುಲಭದ ಮಾತಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಮೈಸೂರು ವಿವಿ ಇತರೆಲ್ಲ ವಿವಿಗಳಿಗಿಂತ ಬಹು ಸುಂದರವಾಗಿ, ಅಚ್ಚುಕಟ್ಟಾಗಿ ವೆಬ್ ಸೈಟ್ ಅನ್ನು ವಿನ್ಯಾಸಗೊಳಿಸಿದೆ.

ಮೈಸೂರು ವಿವಿಯೊಂದಿಗೆ ಉಳಿದ 18 ವಿವಿಗಳು ಸಹ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆಗಳ ವಿವಿ ವೆಬ್ ಸೈಟನ್ನು ಕನ್ನಡದಲ್ಲಿ ವಿನ್ಯಾಸಗೊಳಿಸುವ ತಂತ್ರಾಂಶ ಇನ್ನೂ ಅಭಿವೃದ್ಧಿಗೊಂಡಿಲ್ಲ. ಆ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ವಿವಿ ವೆಬ್ ಸೈಟ್ ನಲ್ಲಿ ಕನ್ನಡದಲ್ಲಿ ಮಾಹಿತಿ ಲಭ್ಯವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

Appreciation by Kannada Development Authority for Mysore VV kannada website

ಮಾತೃ ಭಾಷೆಯನ್ನು ಬೆಳೆಸುವ ಜವಾಬ್ದಾರಿ ವಿವಿಗಳದ್ದು. ಅದರಲ್ಲೂ ನಮ್ಮ ಸಲಹೆಯನ್ನು ಸ್ವೀಕರಿಸಿ ವೆಬ್ ಸೈಟ್ ಪರಿವರ್ತಿಸಿದ ಎಲ್ಲಾ ವಿವಿಗಳಿಗೂ ನಮ್ಮ ಅಭಿನಂದನಾ ಪತ್ರ ನೀಡಿದ್ದೇವೆ ಎನ್ನುತ್ತಾರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ. ಸಿದ್ದರಾಮಯ್ಯರವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+