ಮಾರಕ ಡೆಂಗ್ಯೂ ಮಾರಿಗೆ ಮೈಸೂರಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಸಾವು
ಡೆಂಗ್ಯೂಗೆ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ನಗರದ ಅಶೋಕಪುರಂನಲ್ಲಿ ಇಂದು ನಡೆದಿದೆ.
ಮೈಸೂರು, ಜೂನ್ 3: ಮಾರಕ ಡೆಂಗ್ಯೂ ಖಾಯಿಲೆ ಜಿಲ್ಲೆಯಲ್ಲಿ ತಾರಕಕ್ಕೇರುತ್ತಿದೆ. ಇದರ ಪರಿಣಾಮ ಡೆಂಗ್ಯೂಗೆ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ನಗರದ ಅಶೋಕಪುರಂನಲ್ಲಿ ಇಂದು(ಜೂನ್ 3) ನಡೆದಿದೆ.
ಅಶೋಕಪುರಂ ನಿವಾಸಿ ರವಿ ಹಾಗೂ ಪ್ರೇಮಾ ದಂಪತಿಯ ಪುತ್ರಿಯಾದ ಕುಸುಮಾ (ಪ್ರೀತಿ)(17) ಗೆ ಹಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಕಾಮಾಕ್ಷಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಇದು ಡೆಂಗ್ಯು ಜ್ವರ ಎಂದು ತಿಳಿಸಿದ್ದರು. ಆದರೆ ಗುಣಮುಖವಾಗದ ಹಿನ್ನೆಲೆಯಲ್ಲಿ ಅಲ್ಲಿಂದ ಜೆಎಸ್ಎಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.[ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿ]

ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಶನಿವಾರ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ. ಅಶೋಕಪುರಂ ನಲ್ಲಿ ಹಲವರಿಗೆ ಡೆಂಗ್ಯು ಜ್ವರ ಕಾಣಿಸಿಕೊಂಡಿದ್ದು, ಇದೀಗ ಸ್ಥಳೀಯರಲ್ಲಿ ಆತಂಕ ಮೂಡಿದೆ. ಈ ಪ್ರದೇಶದಲ್ಲಿ ಸೊಳ್ಳೆ ಜಾಸ್ತಿಯಾದ ಕಾರಣ ರೋಗಗಳು ಹೆಚ್ಚುತ್ತಿವೆ. ಹಲವು ಬಾರಿ ಹೇಳಿದರೂ ಮಹಾನಗರಪಾಲಿಕೆ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ












Click it and Unblock the Notifications