ಕುತೂಹಲ ಕೆರಳಿಸಿದ ಅಮಿತ್ ಶಾ-ಮೈಸೂರು ರಾಜವಂಶಸ್ಥರ ಭೇಟಿ
Recommended Video

ಅಮಿತ್ ಶಾ ಹಾಗು ಮೈಸೂರಿನ ಯುವರಾಜ ಯದುವೀರ್ ಭೇಟಿ ಕೆರಳಿಸಿದ ಕುತೂಹಲ | Oneindia Kannada
ಮೈಸೂರು, ಮಾರ್ಚ್ 30: ಎರಡು ದಿನಗಳ ಮೈಸೂರು ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಮೈಸೂರು ಅರಮನೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್, ಮೈಸೂರು ಮಹಾರಾಜ ಯದುವೀರ್ ಒಡೆಯರ್ ಜೊತೆ ಮಾತುಕತೆ ನಡೆಸಿದರು.
ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್ ಸೇರಿದಂತೆ 10 ಕ್ಕೂ ಮಂದಿ ಬಿಜೆಪಿ ನಾಯಕರೊಂದಿಗೆ ಅರಮನೆಗೆ ಭೇಟಿ ನೀಡಿದ ಅಮಿತ್ ಶಾ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಕಳೆದ ಕೆಲ ದಿನಗಳಿಂದ ಮಹಾರಾಜ ಯಧುವೀರ್ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಯದುವೀರ್, 'ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಈ ಕುರಿತು ನನ್ನೊಂದಿಗೆ ಯಾರೂ ಚರ್ಚೆ ನಡೆಸಿಲ್ಲ' ಎಂಬ ಹೇಳಿಕೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು.

ಚಿತ್ರಗಳು : ಹತ್ತೂರ ಸುತ್ತುತ್ತಿರುವ ಅಮಿತ್ ಶಾ ಸುತ್ತೂರು ಮಠದಲ್ಲಿ
ಆದರೆ ಇಂದು ಅಮಿತ್ ಶಾ ಖುದ್ದಾಗಿ ಯದುವೀರ್ ಅವರನ್ನು ಭೇಟಿ ಮಾಡಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ.













Click it and Unblock the Notifications