ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ಕುಲಪತಿ ರಾಜಕೀಯಕ್ಕೆ ಬರ್ತಾರ.? ಹಿಂಟ್ಸ್ ನೀಡಿದ್ರಾ ಸಿಎಂ!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಡಿಸೆಂಬರ್ 28 : ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯನ್ನು ಪೂರೈಸಿ ಅವಧಿ ಪೂರ್ಣದ ಅಂಚಿನಲ್ಲಿರುವ ಪ್ರೊ.ಕೆ.ಎಸ್.ರಂಗಪ್ಪ ನಿವೃತ್ತಿ ಬಳಿಕ ರಾಜಕೀಯ ಪ್ರವೇಶಿಸುತ್ತಾರಾ..? ಇಂಥದ್ದೊಂದು ಕುತೂಹಲಕ್ಕೆ ಕಾರಣವಾದದ್ದು ಮೊನ್ನೆ ನಡೆದ ಶತಮಾನೋತ್ಸವ ಸಮಾರಂಭ ವೇದಿಕೆ.

ಮೈಸೂರು ವಿವಿ ಕಾರ್ಯಸೌಧದಲ್ಲಿ ಆಯೋಜಿಸಿದ್ದ ಶತಮಾನೋತ್ಸವ ನಾಣ್ಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಲಪತಿ ಪ್ರೊ.ರಂಗಪ್ಪ ಅವರ ರಾಜಕೀಯ ಪ್ರವೇಶ ಸಂಬಂಧಿಸಿದಂತೆ ನೀಡಿದ ಹೇಳಿಕೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಮೈಸೂರು ವಿವಿ ಶತಮಾನೋತ್ಸವ ಸಂದರ್ಭದಲ್ಲಿ ಈ ವಿಶ್ವವಿದ್ಯಾನಿಲಯದ ಕುಲಪತಿಯಾಗುವ ಅವಕಾಶ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಲಭಿಸಿದ್ದು ಅವರ ಅದೃಷ್ಠ. ಏಕೆಂದರೆ ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗುವ ಸುಯೋಗ ಎಲ್ಲರಿಗೂ ಲಭಿಸದು. ಈ ನಿಟ್ಟಿನಲ್ಲಿ ರಂಗಪ್ಪ ಅದೃಷ್ಠವಂತರೆ ಸರಿ. ಜತೆಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.[ಕನ್ನಡ ಭಾಷೆಯನ್ನು ಕೇಂದ್ರ ಸರಕಾರ ನಿರ್ಲಕ್ಷಿಸುತ್ತಿದೆ: ಸಿದ್ದರಾಮಯ್ಯ]

After retiring the Mysuru vv vice-chancellor has been Entry into politics?After retiring the Mysuru vv vice-chancellor has been Entry into politics?

ಜ.10 ಕ್ಕೆ ಪ್ರೊ.ಕೆ.ಎಸ್.ರಂಗಪ್ಪ ಅವರ ಕುಲಪತಿ ಅವಧಿ ಪೂರ್ಣಗೊಳ್ಳುತ್ತದೆ. ಆದ್ದರಿಂದ ಬಹುಶಃ ಇದೇ ನನ್ನ ಕಡೆಯ ಕಾರ್ಯಕ್ರಮ. ಹಾಗಾಗಿ ದಯವಿಟ್ಟು ಸಮಾರಂಭಕ್ಕೆ ಬರಬೇಕು ಎಂದು ರಂಗಪ್ಪ ಕೇಳಿದ್ದರಿಂದ ನಾನು ಈ ಸಮಾರಂಭಕ್ಕೆ ಬಂದದ್ದು. ರಂಗಪ್ಪ ಅವರ ನಿವೃತ್ತಿ ನಂತರದ ಭವಿಷ್ಯ ಉಜ್ವಲವಾಗಲಿ ಎಂದು ಸಿದ್ದರಾಮಯ್ಯ ಹಾರೈಸಿದರು. ಮಾತು ಮುಂದುವರಿಸಿ, ರಂಗಪ್ಪ ರಾಜಕೀಯಕ್ಕೆ ಬರಲಿ ಎಂದು ನಾನು ಹೇಳುವುದಿಲ್ಲ. ಅದು ಅವರ ತೀರ್ಮಾನಕ್ಕೆ ಬಿಟ್ಟದ್ದು. ಶಿಕ್ಷಣತಜ್ಞರಾಗಿ ಅವರ ಮುಂದಿನ ನಡೆ ಅವರೇ ತೀರ್ಮಾನಿಸಲಿ. ಒಟ್ಟಾರೆ ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಸಿಎಂ ಶುಭ ಹಾರೈಸಿದರು.[ನೇಮಕಾತಿ ಅಕ್ರಮ, ಮೈಸೂರು ವಿ.ವಿ. ರಿಜಿಸ್ಟ್ರಾರ್ ಅಮಾನತು]

After retiring the Mysuru vv vice-chancellor has been Entry into politics?

ಕುತೂಹಲ ಯಾಕೆ..?
ಸ್ವಂತ ಬುದ್ಧಿವಂತಿಕೆ ಹಾಗೂ ಚಾಕಚಕ್ಯತೆಯಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಪ್ರೊ.ಕೆ.ಎಸ್.ರಂಗಪ್ಪ ಮೈಸೂರು ವಿವಿ ಕುಲಪತಿಯಾದ ಬಳಿಕ ಮಾಜಿ ಪ್ರಧಾನಿ, ಜೆ.ಡಿ.ಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸಂಬಂಧಿಕರಾದದ್ದು ಈಗ ಇತಿಹಾಸ. ಈ ಸಲುವಾಗಿಯೇ ರಂಗಪ್ಪ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಗಾಳಿ ಸುದ್ಧಿ ವ್ಯಾಪಕವಾಗಿ ಹಬ್ಬಿತ್ತು. ಈಗ ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಬಾಯಿಂದಲೇ ರಂಗಪ್ಪ ಅವರ ರಾಜಕೀಯ ನಡೆಯ ಬಗ್ಗೆ ಮಾರ್ಮಿಕ ಮಾತು ಕುತೂಹಲ ಹೆಚ್ಚಿಸಿದೆ.

ಆದರೆ ಪ್ರೊ.ಕೆ.ಎಸ್.ರಂಗಪ್ಪ ಮಾತ್ರ ರಾಜಕೀಯ ಪ್ರವೇಶದ ಬಗ್ಗೆ ತುಟಿ ಎರಡು ಮಾಡದೆ ಮೌನಕ್ಕೆ ಶರಣಾಗಿದ್ದಾರೆ.

English summary
After retiring from the Mysore University's vice-chancellor Pro. K S Rangappa Is in fall in politics?. Given hints about the Chief Minister at Mysore program
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X