• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಟಿ ದಾಳಿ; ಇಂದು ಮೈಸೂರಿನ ಐಟಿ ಕಚೇರಿಗೆ ರಶ್ಮಿಕಾ ಹಾಗೂ ಕುಟುಂಬ

By ಮೈಸೂರು ಪ್ರತಿನಿಧಿ
|

ಮೈಸೂರು, ಜನವರಿ 21: ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು ಎರಡು ದಿನಗಳ ಕಾಲ ನಡೆದ ಪರಿಶೀಲನೆಯಲ್ಲಿ ಕೆಲ ಮಹತ್ತರ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ರಶ್ಮಿಕಾ ಹಾಗೂ ಕುಟುಂಬದವರು ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಬೆಳಗ್ಗೆ 11:30ಕ್ಕೆ ಮೈಸೂರಿನ ಐಟಿ ಕಚೇರಿಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹೀಗಾಗಿ ರಶ್ಮಿಕಾ ತಂದೆ ಮದನ್​ ಮಂದಣ್ಣ ಹಾಗೂ ತಾಯಿ ಸುಮನ್ ಮಂದಣ್ಣ ಈಗಾಗಲೇ ಮೈಸೂರಿಗೆ ತೆರಳಿದ್ದಾರೆ.

ಕೊನೆಯಾಯ್ತು ಐಟಿ ರೈಡ್; ರಶ್ಮಿಕಾ ಮನೆಯಿಂದ 4 ಬಾಕ್ಸ್ ದಾಖಲೆ ಸಂಗ್ರಹ

ನಟಿ ರಶ್ಮಿಕಾ ಕೂಡ ಮೈಸೂರಿನ ನಜರಬಾದ್ ನಲ್ಲಿರುವ ಪ್ರಧಾನ ಆದಾಯ ತೆರಿಗೆ ಆಯುಕ್ತರ ಕಚೇರಿಗೆ ಆಗಮಿಸಿದ್ದು, ವಿಚಾರಣೆಯಲ್ಲಿ ತೊಡಗಿದ್ದಾರೆ. ಪ್ರಾದೇಶಿಕ ತೆರಿಗೆ ಆಯುಕ್ತರಾದ ಸಂಜಯ್ ಗಾಂಧಿ ನೇತೃತ್ವದಲ್ಲಿ ರಶ್ಮಿಕಾ ವಿಚಾರಣೆ ಸಾಗಿದೆ. ರಶ್ಮಿಕಾ ಜೊತೆಯಲ್ಲಿ ಒಂಬತ್ತು ಮಂದಿ ಬಂದಿದ್ದು, ಅವರ ಬಳಿ ಎರಡು ಬ್ಯಾಗ್ ಗಳು ಹಾಗೂ ಒಂದು ಫೈಲ್ ಕಿಟ್ ಇದೆ.

English summary
Recently, IT officials raid on the residence of actress Rashmika Mandanna and seized some documents during a two-day inspection. They also got notice to attend the hearing. So Rashmika and her family came to mysuru IT office,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X