Get Updates
Get notified of breaking news, exclusive insights, and must-see stories!

ನಂಜನಗೂಡಿನಲ್ಲಿ ದರ್ಶನ್‌ ಧ್ರುವನಾರಾಯಣ್ ಪರ ಮೋಹಕ ತಾರೆ ರಮ್ಯ ಪ್ರಚಾರ

ನಂಜನಗೂಡು, ಮೇ 4: ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್ ಪರ ಕನ್ನಡ ಖ್ಯಾತ ನಟಿ, ಮೋಹಕ ತಾರೆ ರಮ್ಯಾ ಅವರು ಕಾಟೂರು ಗ್ರಾಮದಲ್ಲಿ ಗುರುವಾರ ಪ್ರಚಾರ ನಡೆಸಿದರು.

ಬುಧವಾರವಷ್ಟೇ ದರ್ಶನ್‌ ಧ್ರುವನಾರಾಯಣ್ ಪರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಪ್ರಚಾರ ನಡೆಸಿದ್ದರು. ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್ ಧ್ರುವನಾರಾಯಣ್ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅವರು ಅಕಾಲಿಕ ಮರಣ ಹೊಂದಿದ್ದರು. ಇದಾದ ಒಂದೇ ತಿಂಗಳಲ್ಲಿ ಅವರ ಪತ್ನಿ ದರ್ಶನ್‌ ಅವರ ತಾಯಿ ವೀಣಾ ಧ್ರುವನಾರಾಯಣ್‌ ಅವರು ಕೂಡ ಮೃತರಾಗಿದ್ದರು.

Actress Ramya campaigned for Darshan Dhruvanarayan in nanjangud assembly constituency

ನಂನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಚಾಮರಾಜನಗರ ಸಂಸದ ವಿ ಶ್ರೀನಿವಾಸ್‌ ಪ್ರಸಾದ್‌ ಅವರ ಅಳಿಯ ಹರ್ಷವರ್ದನ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಸಮೀಕ್ಷೆಗಳ ಪ್ರಕಾರ ದರ್ಶನ್ ಧ್ರುವನಾರಾಯಣ್‌ ಗೆಲುವು ಖಚಿತ ಎನ್ನಲಾಗುತ್ತಿದೆ. ಪ್ರಚಾರದ ವೇಳೆ ಮಾತನಾಡಿದ ನಟಿ ರಮ್ಯಾ ಅವರು ದರ್ಶನ್ ತಂದೆಯಂತೆಯೇ ಸೌಮ್ಯ ಸ್ವಭಾವದವರು. ಎಲ್ಲರಿಗೂ ಹೊಂದಿಕೊಳ್ಳುತ್ತಾರೆ. ಹೀಗಾಗಿ ಅವರನ್ನು ನೀವೆಲ್ಲರೂ 50,000 ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಬುಧವಾರ ನೇರಳೆ ಗ್ರಾಮದಲ್ಲಿ ನಡೆದ ಪ್ರಚಾರದ ವೇಳೆ ದರ್ಶನ್‌ ಅವರು ನನ್ನ ತಂದೆ ಹಾಗೂ ತಾಯಿ ಇಬ್ಬರೂ ಈಗ ವಿಧಿವಶರಾಗಿದ್ದಾರೆ. ಕ್ಷೇತ್ರದ ಜನತೆಯನ್ನೇ ನಾನು ತಂದೆ-ತಾಯಿ ಎಂದು ಭಾವಿಸಿದ್ದೇನೆ. ಹಾಗಾಗಿ ಕ್ಷೇತ್ರದ ಮತದಾರರು ತಂದೆ-ತಾಯಿ ಸ್ಥಾನದಲ್ಲಿ ನಿಂತು ನನ್ನನ್ನು ಆಶೀರ್ವಾದಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಮನವಿ ಮಾಡಿದ್ದರು.

Actress Ramya campaigned for Darshan Dhruvanarayan in nanjangud assembly constituency

ನನ್ನ ತಂದೆ ದಿವಂಗತ ಆರ್. ಧ್ರುವನಾರಾಯಣ್ ಅವರು ಅಕಾಲಿಕ ಮರಣಕ್ಕೀಡಾಗಿದ್ದರಿಂದ ಕ್ಷೇತ್ರದ ಜನರ ಒತ್ತಾಸೆ ಮೇರೆಗೆ ನನ್ನನ್ನು ಕಾಂಗ್ರೆಸ್ ಪಕ್ಷವು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ನನ್ನ ತಂದೆ ಆರ್.ಧ್ರುವನಾರಾಯಣ್ ಅವರು ಕ್ಷೇತ್ರದ ಜನತೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ರೀತಿಯಲ್ಲೆ ನಾನು ಕೂಡ ನಿಮ್ಮ ಮನೆ ಮಗನಾಗಿ ಸೇವೆ ಮಾಡುವುದಾಗಿ ಭರವಸೆ ನೀಡಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಎಚ್‌.ಸಿ.ಮಹದೇವಪ್ಪ, ಶಾಸಕರಾದ ಎಂ.ಬಿ.ಪಾಟೀಲ, ಪುಟ್ಟರಂಗಶೆಟ್ಟಿ ಅವರ ನಿರಂತರ ಮಾರ್ಗದರ್ಶನದಲ್ಲಿ ನಿಮ್ಮ ಬಳಿ ಬಂದಿದ್ದೇನೆ. ಮೇ 10ರಂದು ತಪ್ಪದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತ ನೀಡಿ ತಮ್ಮ ಸೇವೆ ಮಾಡಲು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+