Vasishta Simha: ಮೈಸೂರು ಸೇವಾಶ್ರಮದಲ್ಲಿ ನಟ ವಸಿಷ್ಠ ಸಿಂಹ ಹುಟ್ಟುಹಬ್ಬ ಆಚರಣೆ

ಮೈಸೂರು, ಅಕ್ಟೋಬರ್‌ 21: ಕನ್ನಡ ಚಿತ್ರರಂಗದ ನಟ ವಸಿಷ್ಠ ಸಿಂಹ ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬವನ್ನು ಯಾವುದೇ ಅಬ್ಬರವಿಲ್ಲದೇ ವಿಶೇಷವಾಗಿ ಹಾಗೂ ವಿಭಿನ್ನವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಅವರ ಹುಟ್ಟು ಹಬ್ಬದ ಪ್ರಯುಕ್ತ ವಸಿಷ್ಠ ಸಿಂಹ ಸ್ನೇಹ ಬಳಗದ ಸದಸ್ಯರು ಈ ಬಾರಿಯೂ ವಿಭಿನ್ನವಾಗಿ ಆಚರಿಸಿದ್ದಾರೆ.

ಮೈಸೂರಿನ ವಿಜಯನಗರದಲ್ಲಿರುವ ಸವಿ ನೆನಪು ಫೌಂಡೇಶನ್ ಸೇವಾಶ್ರಮದಲ್ಲಿ ನಟ ವಸಿಷ್ಠ ಸಿಂಹ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮ ನಡೆದಿದೆ. ಸವಿ ನೆನಪು ಫೌಂಡೇಶನ್ ಸೇವಾಶ್ರಮಕ್ಕೆ ತೆರಳಿದ ವಸಿಷ್ಠ ಸಿಂಹ ಸ್ನೇಹ ಬಳಗದ ಸದಸ್ಯರು, ಅಲ್ಲಿನ ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ. ಬಳಿಕ ಕೇಕ್ ಕಟ್ ಮಾಡಿ ನಂತರ ಮಕ್ಕಳಿಗೆ ಉಪಹಾರ ನೀಡಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

Actor Vasishta Simha Birthday Celebration At Mysore Sevashrama

ಈ ವೇಳೆ ಮಾತನಾಡಿದ ವಸಿಷ್ಠ ಸಿಂಹ ಸ್ನೇಹ ಬಳಗದ ಅಧ್ಯಕ್ಷ ಬೈರತಿ ಲಿಂಗರಾಜು, ಮೈಸೂರು ಕಲಾವಿದರ ತವರೂರು. ಕಂಚಿನ ಕಂಠದ ಗಾಯಕ, ನಟ ವಶಿಷ್ಟ ಸಿಂಹ ಅವರು ಮೈಸೂರಿನವರು ಎನ್ನುವುದು ನಮಗೆ ಹೆಮ್ಮೆಯ ವಿಚಾರ ಎಂದರು.

ವಸಿಷ್ಟ ಸಿಂಹ ಅವರು ಕೊರೊನಾ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕಲಾವಿದರ ಕುಟುಂಬಕ್ಕೆ, ಆಟೋ ಚಾಲಕರು, ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸೇವಾ ಶ್ರಮ ಮಕ್ಕಳ ಜೊತೆ ಸ್ನೇಹಿತರಲ್ಲ ಆಚರಿಸುತ್ತಿದ್ದೇವೆ ಎಂದು ಹೇಳಿದರು.

Actor Vasishta Simha Birthday Celebration At Mysore Sevashrama

ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಆರ್.ವಿನೋದ್ ಮಾತನಾಡಿ, ವಶಿಷ್ಟ ಸಿಂಹ ಅವರ ಹುಟ್ಟು ಹಬ್ಬವನ್ನು ಯಾವುದೇ ತರಹದ ಆಡಂಬರವಿಲ್ಲದೇ ಇಂತಹ ಮಕ್ಕಳ ಜೊತೆ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಚಿತ್ರ ನಟರ ಅಭಿಮಾನಿಗಳು ದುಂದು ವೆಚ್ಚ ಮಾಡಿ ಜನ್ಮ ದಿನಾಚರಣೆ ಆಚರಿಸುವ ಬದಲು, ಸಮಾಜಕ್ಕೆ ಯಾವುದಾದರೂ ಸೇವಾ ಮನೋಭಾವ ಇಟ್ಟುಕೊಂಡು ಸೇವೆಯನ್ನೇ ಗುರಿ ಮಾಡಿಕೊಂಡು ಕೆಲಸ ಮಾಡಿದರೆ ನಿಜಕ್ಕೂ ಅದು ಆ ನಟರಿಗೂ ಮತ್ತು ಅವರ ಅಭಿಮಾನಿಗಳಿಗೂ ಕೀರ್ತಿ ತಂದುಕೊಡುತ್ತದೆ ಎಂದು ಹೇಳಿದರು.

ನಟ ವಸಿಷ್ಟ ಸಿಂಹ ಅವರ ಹುಟ್ಟುಹಬ್ಬ ಆಚರಣೆ ವೇಳೆ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲ ಸೇವಾ ಸಮಿತಿ ಮೈಸೂರು ಜಿಲ್ಲಾಧ್ಯಕ್ಷ ಆರ್.ವಿನೋದ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಆರ್.ಯಶೋಧ, ಚೆಲುವರಾಜ್ ನಾಯಕ್, ಮಹಾನ್ ಶ್ರೇಯಸ್, ಮೋಹನ್ ಕುಮಾರ್, ಮೋಹನ್, ರಕ್ಷು ಆಚಾರ್, ವಿಶಾಲ್, ಸಾಯಿ ಕೃಷ್ಣ, ಕೌಶಿಕ್, ಹಾಗೂ ಇನ್ನಿತರ ಸ್ನೇಹಿತರು ಹಾಗೂ ಅಭಿಮಾನಿಗಳು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+