• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವ ಹುಲಿ ದಿನದಂದು ಹುಲಿ ದತ್ತು ಪಡೆದುಕೊಂಡ ನಟ ದರ್ಶನ್

|

ಮೈಸೂರು, ಜುಲೈ 30: ಜು.29ರಂದು ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಪ್ರಾಣಿಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಲಿಯೊಂದನ್ನು ದತ್ತು ಪಡೆದುಕೊಂಡಿದ್ದಾರೆ.

ಈಗಾಗಲೇ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ಪಡೆದಿರುವ ನಟ ದರ್ಶನ್, ಮತ್ತೊಮ್ಮೆ ಪ್ರಾಣಿ ದತ್ತು ಯೋಜನೆಯನ್ನು ನವೀಕರಣ ಮಾಡಿಕೊಂಡಿದ್ದಾರೆ. ವಿಶ್ವ ಹುಲಿ‌ ದಿನದಂದೇ ಪ್ರಾಣಿ ದತ್ತು ನವೀಕರಣ ಮಾಡಿ ಪ್ರಾಣಿಗಳ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

2.95 ಲಕ್ಷ ರೂಪಾಯಿಯ ಚೆಕ್ ನೀಡಿರುವ ದರ್ಶನ್, ಒಂದು ಗಂಡು ಹುಲಿ ಸೇರಿ ಒಟ್ಟು ನಾಲ್ಕು ಪ್ರಾಣಿಗಳ ದತ್ತು ನವೀಕರಣ ಮಾಡಿಕೊಂಡಿಕೊಂಡಿದ್ದಾರೆ. ಹುಲಿ, ಎರಡು ಅನಕೊಂಡ ಹಾಗೂ ಆನೆಯನ್ನು ಈ ಹಿಂದೆ ದತ್ತು ಪಡೆದಿದ್ದರು.

English summary
Actor Darshan adopted tiger on behalf of world tiger day and also renewed the animal adoption scheme. Darshan already adopted four animals at the Jayachamarajendra Zoo in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X