ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿ ಬೆಟ್ಟದಲ್ಲಿ ಜು.17 ರಿಂದ ಆಷಾಢ ಪೂಜೆ

By Vanitha
|
Google Oneindia Kannada News

ಮೈಸೂರು, ಜೂ 27 : ಜಗದ್ವಿಖ್ಯಾತ ಮೈಸೂರಿನ ಚಾಮುಂಡಿ ಬೆಟ್ಟದ ದೇವಿಯ ಸನ್ನಿಧಾನದಲ್ಲಿ ಜುಲೈ 17ರಿಂದ ಆಷಾಢ ಪೂಜೆ ಆರಂಭಗೊಳ್ಳಲಿದೆ.

ಮುಂಜಾನೆ 4 ಗಂಟೆಗೆ ಪ್ರಾರಂಭವಾಗುವ ಈ ಪೂಜೆ ಜುಲೈ 17, 24, 31 ಮತ್ತು ಆಗಸ್ಟ್ 7 ರಂತೆ, 5 ಶುಕ್ರವಾರ ಚಾಮುಂಡಿ ದೇವಾಲಯದ ದಾಸೋಹ ಭವನದಲ್ಲಿ ನಡೆಯಲಿದೆ. ದೇವಿ ಚಾಮುಂಡೇಶ್ವರಿ (ವರ್ಧಂತಿ) ಜನ್ಮದಿನೋತ್ಸವ ಆಗಸ್ಟ್ 5 ರಂದು ನೆರವೇರಲಿದೆ ಎಂದು ಡೆಪ್ಯೂಟಿ ಕಮೀಷನರ್ ಸಿ ಶಿಕಾ ಶುಕ್ರವಾರ ಮಾಹಿತಿ ನೀಡಿದರು. [ಆಷಾಢ ಶುಕ್ರವಾರ : ಚಾಮುಂಡಿ ಬೆಟ್ಟಕ್ಕೆ ಸಂಚಾರ ನಿರ್ಬಂಧ]

Aashada Friday puja at Ch'hill from July 17

ವಿಶೇಷ ಧಾರ್ಮಿಕ ಆಚರಣೆಗಾಗಿ ಸಾಕಷ್ಟು ಪಾದಯಾತ್ರಿಗಳು, ಭಕ್ತಾಧಿಗಳು ಹಾಗೂ ಪ್ರವಾಸಿಗರು ನೆರೆಹೊರೆಯ ರಾಜ್ಯಗಳಿಂದ, ಜಿಲ್ಲೆಗಳಿಂದ ಆಗಮಿಸುವ ಸಂಭವವಿದೆ. ಇದರ ಕುರಿತಾಗಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಇವರ ಸಹಕಾರದೊಂದಿಗೆ ಭಕ್ತ ವೃಂದಕ್ಕೆ ಯಾವುದೇ ಕುಂದು ಕೊರತೆ ಆಗದಂತೆ ನೋಡಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ಬಾರಿ ಪ್ರಸಾದ ನೀಡುವಿಕೆಯ ಸಂದರ್ಭದಲ್ಲಿ ಸ್ವಲ್ಪ ಗೊಂದಲ ಏರ್ಪಟ್ಟ ಕಾರಣ, ಈ ಬಾರಿ ಪ್ರಸಾದ ನೀಡುವಿಕೆಗಾಗಿ ತಾತ್ಕಾಲಿಕ ಕೌಂಟರ್‌ಗಳನ್ನು ಉದ್ಯಾನವನದ ಮುಂದೆ ತೆರೆಯಲಾಗಿದೆ. ಸಹಸ್ರಾರು ಭಕ್ತರ ಆಗಮನದಿಂದ ಸ್ವಲ್ಪ ಮಟ್ಟಿನ ಸಂಚಾರ ದಟ್ಟಣೆ ಆವರಿಸುವ ಸಾಧ್ಯತೆ ಇದೆ.

ಈಗಾಗಲೇ ವಿದ್ಯುತ್ , ಧ್ವನಿವರ್ಧಕ, ಹಾಗೂ ವಾಹನಗಳ ಪಾರ್ಕಿಂಗ್ , ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಟಿಕೇಟ್ ಕೌಂಟರ್, ಆಂಬುಲೆನ್ಸ್ ಒಳಗೊಂಡಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಒಟ್ಟಿನಲ್ಲಿ ಜನರಿಗೆ ಯಾವುದೇ ತೊಂದರೆ ತಲೆದೋರದಂತೆ ಮುನ್ನೆಚ್ಚರಿಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

English summary
Chamundeshwari temple is located in mysore district, Karnataka. Aashada shukfravara pooja one of the famous pooja in this temple.This pooja held at Dasoha bhavan on july 17 to august 7. The goddess chamundeshwari birthday pooja on aug 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X