ಮೈಸೂರಲ್ಲಿ ಮತ್ತೆ ಸದ್ದು ಮಾಡಿದ ಲಾಂಗ್, ನಡು ರಸ್ತೆಯಲ್ಲೇ ಯುವಕರ ಪುಂಡಾಟ
ಮೈಸೂರು, ನವೆಂಬರ್.13: ಮೈಸೂರಿನಲ್ಲಿ ಮತ್ತೆ ಲಾಂಗ್ ಸದ್ದು ಮಾಡಿದೆ. ಉದಯಗಿರಿ ಸತ್ಯನಗರ ಆರ್.ಕೆ. ಪ್ಯಾಲೆಸ್ ಮುಂಭಾಗದಲ್ಲಿ ನಡು ರಸ್ತೆಯಲ್ಲೇ ಯುವಕರು ಲಾಂಗ್ ಹಿಡಿದು ಅಪರಿಚಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಹುಡುಗಿ ಜೊತೆ ಹೋಗುವ ವೇಳೆ ಗುರಾಯಿಸಿದ ಎನ್ನುವ ಕಾರಣಕ್ಕೆ ನಡು ರಸ್ತೆಯಲ್ಲೇ ಲಾಂಗ್, ಕ್ರಿಕೆಟ್ ವಿಕೆಟ್ ನಿಂದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ವಿಡಿಯೋದಲ್ಲಿ ಈ ದೃಶ್ಯಗಳು ದಾಖಲಾಗಿದ್ದು, ಇದನ್ನು ನೋಡಿದ ಮೈಸೂರಿನ ಜನತೆ ಬೆಚ್ಚಿಬಿದ್ದಿದ್ದಾರೆ.
ಕೀರ್ತಿ, ಆಕಾಶ್ ,ಮೋಕ್ಷಾ ಎಂಬ ಯುವಕರ ಟೀಂ ವಿರುದ್ಧ ಹಲ್ಲೆ ಆರೋಪ ಬಂದಿದ್ದು, ಅಪರಿಚಿತ ಯುವಕನಿಗೆ ಗಂಭೀರ ಗಾಯವಾಗಿದೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಂಗ್ ಹಿಡಿದು ಪುಂಡಾಟ ನಡೆಸಿದ ಯುವಕರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.












Click it and Unblock the Notifications