• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಚಿನ್ನದ ಪದಕ ಪಡೆದಿದ್ದ ವಿವಿಗೆ ಕುಲಸಚಿವೆಯಾಗಿ ನೇಮಕಗೊಂಡ ವಿಆರ್ ಶೈಲಜಾ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 22: ಬದುಕು ಯಾವಾಗಲೂ ಹಾಗೆ. ಅದು ಆಕಸ್ಮಿಕಗಳ ಮೊತ್ತ, ಒಂದು ಕಾಲದಲ್ಲಿ ಚಿನ್ನದ ವಿದ್ಯಾರ್ಥಿನಿಯಾಗಿ ಕಾಲೇಜಿನಿಂದ ತೇರ್ಗಡೆಯಾಗಿ ಇದೀಗ ಅದೇ ವಿವಿಗೆ ಕುಲಸಚಿವೆಯಾಗುವ ಭಾಗ್ಯ ತುಂಬಾ ಜನರಿಗೆ ಸಿಗುವುದಿಲ್ಲ.

ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶೈಲಜಾರನ್ನುಇತ್ತೀಚೆಗೆ ಕರ್ನಾಟಕ ಸರ್ಕಾರ ಮೈಸೂರು ವಿವಿಯ ಕುಲಸಚಿವರಾಗಿ ನೇಮಿಸಿತ್ತು. ಅದರಂತೆ ಸೋಮವಾರ ಬೆಳಗ್ಗೆ ಕ್ರಾಫರ್ಟ್‌ ಹಾಲ್‌ಗೆ ಆಗಮಿಸಿ ಹಂಗಾಮಿ ಕುಲಪತಿ ಫ್ರೊ. ರಾಜಶೇಖರ್‌ ಸಮ್ಮುಖದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳು ರಸ್ತೆ ಗುಂಡಿ ಮುಚ್ಚುತ್ತಿರುವ ವಿಡಿಯೋ ಹಂಚಿಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿವಿದ್ಯಾರ್ಥಿಗಳು ರಸ್ತೆ ಗುಂಡಿ ಮುಚ್ಚುತ್ತಿರುವ ವಿಡಿಯೋ ಹಂಚಿಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿ

2001ರಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ವಿ.ಆರ್.ಶೈಲಜಾ ಅವರು ವಿವಿಧ ವಿಭಾಗಗಳಲ್ಲಿ ಮೂರು ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದಿದ್ದರು. ಇದೀಗ ಕೆಎಎಸ್ ಅಧಿಕಾರಿ ತಾವು ಓದಿದ ವಿಶ್ವವಿದ್ಯಾಲಯಕ್ಕೆ ಕುಲಸಚಿವೆಯಾಗಿ ನೇಮಕಗೊಂಡಿದ್ದಾರೆ. ಪ್ರತಿಭಾವಂತೆಯಾಗಿರುವ ಶೈಲಜಾ ಪದವಿ ವ್ಯಾಸಂಗದ ವೇಳೆ 9 ಚಿನ್ನದ ಪದಕ ಹಾಗೂ 7 ನಗದು ಪುರಸ್ಕಾರಕ್ಕೆ ಶೈಲಜಾ ಭಾಜನರಾಗಿದ್ದರು.

2006ರಲ್ಲಿ ಪ್ರೊಬೇಷನರಿ ಕೆಎಎಸ್ ಅಧಿಕಾರಿಯಾಗಿ ವೃತ್ತಿ ಆರಂಭಿಸಿದ ಶೈಲಜಾ, ಮೈಸೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರಾಗಿ, ರಾಮನಗರದಲ್ಲಿ ಡಿಯುಡಿಸಿ ವಿಭಾಗದ ಯೋಜನಾ ನಿರ್ದೇಶಕಿಯಾಗಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಾಂಡವಪುರ ಉಪವಿಭಾಗದ ಹೆಚ್ಚುವರಿ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನಂತರ ಮಂಡ್ಯ ಜಿಲ್ಲೆಯ ಎಡಿಸಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

A Old Student of Mysore University, now Appointed as Registrar to same University

"ಸಾಮಾನ್ಯವಾಗಿ ನಾವು ಓದಿರುವ ಕಾಲೇಜಿಗೆ ಅತಿಥಿಯಾಗಿ ಆಗಮಿಸಿ ಭಾಷಣ ಮಾಡಿದರೆ ಖುಷಿ ಕೊಡುತ್ತದೆ. ಆದರೆ ನನಗೆ ಇದು ಡಬ್ಬಲ್ ಖುಷಿ ಸಿಕ್ಕಿದೆ. ನಾನೇ ಓದಿರುವ ವಿಶ್ವ ವಿದ್ಯಾಲಯಕ್ಕೆ ಕುಲಸಚಿವೆಯಾಗಿ ಬಂದಿರುವ ಸಂತಸ ತಂದಿದೆ. ತಾಯಿ ಚಾಮುಂಡೇಶ್ವರಿ ಆರ್ಶಿವಾದದೊಂದಿಗೆ ಉತ್ತಮ ಕೆಲಸ ಮಾಡುವ ಆಸೆ ಇದೆ " ಎಂದು ಶೈಲಜಾ ತಿಳಿಸಿದ್ದಾರೆ.

English summary
Shylaja a Student who won a gold medal in Postgraduate in 2001, is now appointed as Registrar for the same university,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X