ಜೆಡಿಎಸ್ ಬಂಡಾಯ ಶಾಸಕರು ಇಂದು ಕಾಂಗ್ರೆಸ್‌ಗೆ

ಮೈಸೂರು, ಮಾರ್ಚ್ 25 : 'ಜೆಡಿಎಸ್‌ನ ಬಂಡಾಯ ಶಾಸಕರು, ಹಿರಿಯ ನಾಯಕ ಎಂ.ಸಿ.ನಾಣಯ್ಯ ಇಂದು ಕಾಂಗ್ರೆಸ್ ಸೇರಲಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಹೇಳಿದರು.

ಮೈಸೂರಿನಲ್ಲಿ ಭಾನುವಾರ ಬೆಳಗ್ಗೆ ಮಾತನಾಡಿದ ಸಿದ್ದರಾಮಯ್ಯ, 'ಅಮಿತ್ ಶಾ ಹಾಗೂ ನರೇಂದ್ರ ಮೋದಿ ಒಂದು ಬಾರಿ ಅಲ್ಲ, ನೂರು ಬಾರಿ ಬಂದರೂ ಏನು ಮಾಡಲು ಸಾಧ್ಯವಿಲ್ಲ' ಎಂದು ಹೇಳಿದರು.

In Pics: ರಾಣಿ 'ಮಹಾರಾಣಿ'ಯರ ಜತೆ ಸೆಲ್ಫಿ ತೆಗೆಸಿಕೊಂಡ ಕಾಂಗ್ರೆಸ್ ಮಹಾರಾಜ

'ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರವಾಸಕ್ಕೆ ನಿನ್ನೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇಂದು ಮೈಸೂರಿನಲ್ಲೂ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ. ಸಂಜೆ ನಗರದಲ್ಲಿ ಸಮಾವೇಶ ನಡೆಯಲಿದೆ' ಎಂದರು.

7 rebel JD(S) MLAs will join Congress today

ಕಾಂಗ್ರೆಸ್ ಸೇರ್ಪಡೆ : 'ಜೆಡಿಎಸ್ ಪಕ್ಷದ 7 ಬಂಡಾಯ ಶಾಸಕರು, ಮಾಜಿ ಸಚಿವ ಎಂ.ಸಿ.‌ನಾಣಯ್ಯ ಇಂದು ಕಾಂಗ್ರೆಸ್ ಸೇರಲಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಪಕ್ಷದ ಬಲ ಹೆಚ್ಚಲಿದೆ. ಚಾಮರಾಜನಗರದಲ್ಲಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ನಿನ್ನೆ ಪಕ್ಷ ಸೇರಿದ್ದಾರೆ' ಎಂದು ಸಿದ್ದರಾಮಯ್ಯ ತಿಳಿಸಿದರು.

ನಾವೇ ಅಧಿಕಾರಕ್ಕೆ : 'ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ನಾವೇ. ಕರಾವಳಿಯನ್ನು ಕೋಮುವಾದದ ಕೇಂದ್ರ ಮಾಡಲು ಹೊರಟಿದ್ದರು ಬಿಜೆಪಿ ಮಂದಿ. ಅಲ್ಲಿಯೂ ನಮ್ಮ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗಿದೆ' ಎಂದರು.

'ಬಿಜೆಪಿಯವರು ಕಳಂಕಿತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ದಾರೆ. ಇದು ಜನಕ್ಕೆ ಅರ್ಥ ಆಗಲ್ವ?. ಅಥಣಿಯಿಂದ ಹಿಡಿದು ಚಾಮರಾಜನಗರದ ತನಕ ನಮಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದು ಜನ ನಮ್ಮ ಪರವಾಗಿದ್ದಾರೆ ಅನ್ನೋದಕ್ಕೆ ಸಾಕ್ಷಿ' ಎಂದು ಸಿದ್ದರಾಮಯ್ಯ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+