ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಂಸ್ಕೃತಿಕ ನಗರಿಯಲ್ಲಿ ಹೊಸವರ್ಷದ ದಿನದಂದೇ 32 ಶಿಶುಗಳ ಜನನ

|
Google Oneindia Kannada News

ಮೈಸೂರು, ಜನವರಿ 2: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2019, ಜ.1ರಂದು 32 ಮಕ್ಕಳು ಜನಿಸಿದ್ದು, ಪೋಷಕರ ಸಂಭ್ರಮ ದ್ವಿಗುಣವಾಗಿದೆ.

ನಗರದ ಚೆಲುವಾಂಬ ಆಸ್ಪತ್ರೆಯಲ್ಲಿಯೇ ಮಧ್ಯರಾತ್ರಿ 12 ಗಂಟೆಯಿಂದ ಮಂಗಳವಾರ ಸಂಜೆ 5ರವರೆಗೆ 22 ಮಕ್ಕಳು ಜನಿಸಿದ್ದು, 12 ಗಂಡು ಮಕ್ಕಳು, 10 ಹೆಣ್ಣು ಮಕ್ಕಳು ಪ್ರಪಂಚಕ್ಕೆ ಕಾಲಿಟ್ಟಿವೆ.

ಹೊಸ ವರ್ಷದಂದು ಜನಿಸುವ 24 ಹೆಣ್ಣು ಶಿಶುಗಳಿಗೆ ಪಾಲಿಕೆಯಿಂದ 5 ಲಕ್ಷಹೊಸ ವರ್ಷದಂದು ಜನಿಸುವ 24 ಹೆಣ್ಣು ಶಿಶುಗಳಿಗೆ ಪಾಲಿಕೆಯಿಂದ 5 ಲಕ್ಷ

13 ಮಕ್ಕಳು ಸಾಮಾನ್ಯ ಹೆರಿಗೆ, 9 ಮಕ್ಕಳು ಸಿಸೇರಿಯನ್ ಮೂಲಕ ಜನಿಸಿದ್ದು, ಜ.1ರ ಮಧ್ಯರಾತ್ರಿ 12ರ ಒಳಗೆ 10ರಿಂದ 12 ಮಕ್ಕಳು ಜನಿಸಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ರಾಧಾಮಣಿ ಅವರು ತಿಳಿಸಿದ್ದಾರೆ.

32 babies are born on New Year 1st day

ಕುವೆಂಪುನಗರದ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ 9 ಮಕ್ಕಳು ಜನಿಸಿವೆ. ಬೆಂಗಳೂರು ರಸ್ತೆಯಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಒಂದು ಹೆಣ್ಣು ಮಗು ಜನಿಸಿದೆ. ಉಳಿದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಲಭಿಸಲಿಲ್ಲ.

2019ರ ಮೊದಲ ದಿನ ಭಾರತದಲ್ಲಿ ಜನಿಸಿವೆ 69,944 ಮಕ್ಕಳು!2019ರ ಮೊದಲ ದಿನ ಭಾರತದಲ್ಲಿ ಜನಿಸಿವೆ 69,944 ಮಕ್ಕಳು!

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತಿಂಗಳ ಅಂತ್ಯದಲ್ಲಿ ಮಾಹಿತಿ ದೊರೆಯಲಿದ್ದು, ನಗರ ಪಾಲಿಕೆ ಜನನ ನೋಂದಣಿ ಕೇಂದ್ರದಲ್ಲೂ 2 ದಿನಗಳ ನಂತರ ಮಾಹಿತಿ ದೊರೆಯುವುದರಿಂದ ಜಿಲ್ಲೆ ಮತ್ತು ನಗರದಲ್ಲಿ ಹೊಸ ವರ್ಷದಂದು ಹುಟ್ಟಿದ ಮಕ್ಕಳ ಪೂರ್ಣ ಮಾಹಿತಿ ನೀಡಲಾಗಿಲ್ಲ.

English summary
32 babies are born on New Year 1st day at Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X