• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಅರ್ಧ ವರ್ಷದಲ್ಲಿ ಮೈಸೂರಿನಲ್ಲಾದ ಅಪಘಾತ ಪ್ರಕರಣಗಳು

By ಮೈಸೂರು ಪ್ರತಿನಿಧಿ
|

ಮೈಸೂರು, ಜುಲೈ 18: ಮೈಸೂರು ನಗರದಲ್ಲಿ 2020ರ ಜನವರಿಯಿಂದ ಜೂನ್ ವರೆಗಿನ ಈ ಆರು ತಿಂಗಳಲ್ಲಿ 309 ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಒಟ್ಟು 49 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ 13 ಮಂದಿ ಹೆಲ್ಮೆಟ್ ಧರಿಸದ ಕಾರಣ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಜನವರಿಯಲ್ಲಿ 4, ಫೆಬ್ರುವರಿಯಲ್ಲಿ 6, ಮಾರ್ಚ್ ನಲ್ಲಿ 2 ಹಾಗೂ ಜೂನ್ ನಲ್ಲಿ ಓರ್ವರು ಹೆಲ್ಮೆಟ್ ಧರಿಸದೇ ಸಾವನ್ನಪ್ಪಿದ್ದಾರೆ. ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮತ್ತು ಸವಾರಿ ಮಾಡಿದ್ದರೆ ಈ 13 ಮಂದಿಯ ಪ್ರಾಣ ಉಳಿಯುತ್ತಿತ್ತು ಎಂದು ಮೈಸೂರು ನಗರ ಸಂಚಾರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ವಿಡಿಯೋ; ಚಾಲಕನಿಲ್ಲದೇ ಓಡಿದ ಕಾರು, ಅನಾಹುತ ತಪ್ಪಿಸಿದ ಬೈಕ್ ಸವಾರ

ಅಪಘಾತ ಸಂಭವಿಸಿದಾಗ ತಲೆಗೆ ತೀವ್ರ ಗಾಯವಾದ ಕಾರಣ ಕೆಲವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಉಳಿದವರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜನವರಿ ತಿಂಗಳಲ್ಲಿ ಸಂಭವಿಸಿದ 84 ಅಪಘಾತಗಳಲ್ಲಿ 12 ಮಂದಿ ಸಾವನ್ನಪ್ಪಿದ್ದು, ಅದರಂತೆ ಫೆಬ್ರವರಿಯಲ್ಲಿ 68 ಅಪಘಾತದಲ್ಲಿ 16, ಮಾರ್ಚ್ ನಲ್ಲಿ 65ರಲ್ಲಿ 8, ಏಪ್ರಿಲ್ ನಲ್ಲಿ 14ರಲ್ಲಿ ಓರ್ವರು, ಮೇನಲ್ಲಿ 32 ಅಪಘಾತದಲ್ಲಿ 6 ಮಂದಿ, ಜೂನ್ ನಲ್ಲಿ ನಡೆದ 46ರಲ್ಲಿ 6 ಮಂದಿ ಸೇರಿದಂತೆ 6 ತಿಂಗಳಲ್ಲಿ ಒಟ್ಟು 49 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

English summary
During six months from January 2020 to June 2020, there were 309 road accidents and 49 death cases reported in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X