ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿನ್ನ ಹೂಡಿಕೆದಾರರಿಗೆ ಗುಡ್ ನ್ಯೂಸ್; ಸವರನ್ ಗೋಲ್ಡ್ ಬಾಂಡ್ ಯೋಜನೆ ಆರಂಭ

|
Google Oneindia Kannada News

ಮೈಸೂರು, ನವೆಂಬರ್ 10: ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಯಾವತ್ತಿಗೂ ಲಾಭ ಗ್ಯಾರಂಟಿ ಎಂಬ ನಂಬಿಕೆ ಹಲವರದ್ದು. ಈ ಕಾರಣಕ್ಕೇ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಈಚೆಗೆ ಏರಿಕೆಯಾಗಿದೆ. ಇದಕ್ಕೆ ಉತ್ತಮ ಅವಕಾಶ ಎಂಬಂತೆ ಭಾರತೀಯ ಅಂಚೆ ಇಲಾಖೆ ವತಿಯಿಂದ 2020-2021ನೇ ಸಾಲಿನ ಸವರನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭವಾಗಿದೆ.

ನ.9ರಿಂದ ಈ ಯೋಜನೆ ಆರಂಭಗೊಂಡಿದ್ದು, ಗ್ರಾಹಕರು ತಮ್ಮ ಸಮೀಪದ ಅಂಚೆ ಕಚೇರಿ ಮೂಲಕ ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಲು ನವೆಂಬರ್ 13ರವರೆಗೆ ಅವಕಾಶವನ್ನು ನೀಡಲಾಗಿದೆ. ಈ ಕುರಿತ ಇನ್ನಷ್ಟು ಮಾಹಿತಿ ಮುಂದಿದೆ...

 ಏನಿದು ಸವರನ್ ಗೋಲ್ಡ್ ಬಾಂಡ್ ಯೋಜನೆ?

ಏನಿದು ಸವರನ್ ಗೋಲ್ಡ್ ಬಾಂಡ್ ಯೋಜನೆ?

ಚಿನ್ನದ ಖರೀದಿಗೆ ಬದಲಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಚಿನ್ನದ ಆಮದು ಕಡಿಮೆ ಮಾಡುವುದು ಹಾಗೂ ಜನರು ಬಳಸದೆ ಕಪಾಟು ಸೇರಿರುವ ಚಿನ್ನವನ್ನು ಬ್ಯಾಂಕ್​ನಲ್ಲಿಡುವಂತೆ ಮಾಡಿ ಬಡ್ಡಿ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಈ ಚಿನ್ನದ ಬಾಂಡ್ ನಲ್ಲಿ ಗ್ರಾಹಕರು ವಾರ್ಷಿಕವಾಗಿ 500 ಗ್ರಾಂ ತನಕ ಚಿನ್ನವನ್ನು ಹೂಡಿಕೆ ಮಾಡಬಹುದಾಗಿದೆ. ಹೂಡಿಕೆ ಮೇಲೆ ಬ್ಯಾಂಕಿನಿಂದ ಸಾಲ ಪಡೆಯಬಹುದಾಗಿದೆ.

ಸವರನ್ ಗೋಲ್ಡ್‌ ಬಾಂಡ್ ಯೋಜನೆ ಇಂದಿನಿಂದ ಓಪನ್: ಬೆಲೆ ಜೊತೆಗೆ ಸಂಪೂರ್ಣ ಮಾಹಿತಿಸವರನ್ ಗೋಲ್ಡ್‌ ಬಾಂಡ್ ಯೋಜನೆ ಇಂದಿನಿಂದ ಓಪನ್: ಬೆಲೆ ಜೊತೆಗೆ ಸಂಪೂರ್ಣ ಮಾಹಿತಿ

 ಎಷ್ಟು ಹೂಡಿಕೆ ಮಾಡಬಹುದು?

ಎಷ್ಟು ಹೂಡಿಕೆ ಮಾಡಬಹುದು?

ಈ ಯೋಜನೆಯಡಿಯಲ್ಲಿ ಕನಿಷ್ಠ ಒಂದು ಗ್ರಾಂ ಚಿನ್ನವನ್ನು ಹೂಡಿಕೆ ಮಾಡಬಹುದಾಗಿದೆ. ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ 4 ಕೆ.ಜಿ, ಟ್ರಸ್ಟ್ ಮತ್ತು ಘಟಕಗಳಿಗೆ 20 ಕೆಜೆ (ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಠ ಹೂಡಿಕೆ ಮಾಡಬಹುದಾಗಿದೆ. ಈ ಬಾಂಡ್ ಯೋಜನೆಯಲ್ಲಿ ಸರ್ಕಾರವು ಚಿನ್ನದ ಬೆಲೆಯನ್ನು ಪ್ರತಿ ಗ್ರಾಂಗೆ 5,117 ರೂ. ಅಂದರೆ 10 ಗ್ರಾಂಗೆ 51,170 ರೂ. ಎಂದು ನಿಗದಿಪಡಿಸಿದೆ. ಆದರೆ ಅದನ್ನು ಆನ್‌ಲೈನ್‌ನಲ್ಲಿ ಖರೀದಿಸಿದರೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್‌ಗಳನ್ನು ಖರೀದಿಸುವಾಗ 10 ಗ್ರಾಂ ಬೆಲೆ 50,670 ರೂ ಆಗುತ್ತದೆ.

 ಬಾಂಡ್ ಅವಧಿ ಎಷ್ಟು, ಎಲ್ಲಿಂದ ಖರೀದಿಸಬಹುದು?

ಬಾಂಡ್ ಅವಧಿ ಎಷ್ಟು, ಎಲ್ಲಿಂದ ಖರೀದಿಸಬಹುದು?

ಬಾಂಡ್ ಅವಧಿಯು 8 ವರ್ಷವಾಗಿದ್ದು, ಬಾಂಡ್ ಅವಧಿ ಪೂರ್ಣವಾದಲ್ಲಿ ಮಾರುಕಟ್ಟೆಯಲ್ಲಿರುವ ಚಿನ್ನದ ದರದ ಮೊತ್ತವನ್ನು ನೀಡಲಾಗುವುದು. ವಾರ್ಷಿಕ ಶೇ.2.5 ರಷ್ಟು ನಿಶ್ಚಿತ ಬಡ್ಡಿಯೂ (ಅರ್ಧ ವಾರ್ಷಿಕ -ವರ್ಷಕ್ಕೆ ಎರಡು ಬಾರಿ) ಲಭ್ಯವಿರುತ್ತದೆ. ಅಲ್ಲದೆ 5,6, ಮತ್ತು 7ನೇ ವರ್ಷಗಳಲ್ಲಿಯೂ ನಿರ್ಗಮಿಸಲು ಅವಕಾಶವಿರುತ್ತದೆ.

ನಿಗದಿತ ವಾಣಿಜ್ಯ ಬ್ಯಾಂಕುಗಳಿಂದ (ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು) ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಷೇರು ವಿನಿಮಯ ಕೇಂದ್ರಗಳಿಂದ ಬಾಂಡ್‌ಗಳನ್ನು ಖರೀದಿಸಬಹುದು.

 ನ.13ರವರೆಗೂ ಹೂಡಿಕೆಗೆ ಅವಕಾಶ

ನ.13ರವರೆಗೂ ಹೂಡಿಕೆಗೆ ಅವಕಾಶ

ನ.9 ರಿಂದ ಈ ಯೋಜನೆ ಆರಂಭಗೊಂಡಿದ್ದು, ಗ್ರಾಹಕರು ತಮ್ಮ ಸಮೀಪದ ಅಂಚೆ ಕಚೇರಿ ಮೂಲಕ ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಲು ನವೆಂಬರ್ 13ರವರೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ಅಂಚೆ ಕಚೇರಿಯನ್ನು ಅಥವಾ ದೂರವಾಣಿ-0821-2417308, 2017307, 9845107947 ಅನ್ನು ಸಂಪರ್ಕಿಸಬಹುದು ಎಂದು ಮೈಸೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
The Sovereign Gold Bond scheme of 2020-2021 has been started from november 9. Here is detail about Sovereign Gold Bond Scheme...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X