ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಬೈಲ್ ಚಾರ್ಜರ್ ನಿಂದ ಹೋಯಿತು ಇಪ್ಪತ್ತು ವರ್ಷದ ಯುವಕನ ಪ್ರಾಣ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಫೆಬ್ರವರಿ 14 : ನಾವೆಲ್ಲರೂ ದಿನ ನಿತ್ಯವೂ ಮೊಬೈಲ್ ಚಾರ್ಜರ್ ಬಳಸುತ್ತೇವೆ. ಯಾವ ಪವರ್ ಇರುತ್ತದೆ ಬಿಡು ಎಂದು ಹಾರಿಕೆಯಿಂದಲೇ ಉತ್ತರಿಸುತ್ತೇವೆ. ಆದರೆ ಮೈಸೂರಿನಲ್ಲಿ ಇದೇ ಮೊಬೈಲ್ ಚಾರ್ಜರ್ ಯುವಕನ ಪ್ರಾಣವನ್ನೇ ಕಿತ್ತುಕೊಂಡಿದೆ. ಹೌದು, ಮೊಬೈಲ್ ಚಾರ್ಜಿಂಗ್ ಹಾಕಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ಮಂಗಳವಾರ ನಡೆದಿದೆ.

ಮಂಡ್ಯ: ಪೆಂಟಾವಲೆಂಟ್ ಚುಚ್ಚುಮದ್ದಿಗೆ ಮತ್ತೊಂದು ಮಗು ಬಲಿಮಂಡ್ಯ: ಪೆಂಟಾವಲೆಂಟ್ ಚುಚ್ಚುಮದ್ದಿಗೆ ಮತ್ತೊಂದು ಮಗು ಬಲಿ

ಮೈಸೂರು-ಬನ್ನೂರು ರಸ್ತೆಯಲ್ಲಿರುವ ದೇವೇಗೌಡ ವೃತ್ತದ ಬಳಿಯ ಸಿಮೆಂಟ್ ಅಂಗಡಿಯೊಂದರಲ್ಲಿ ಸರಕು ಸಾಗಣೆ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಪ್ಪತ್ತು ವರ್ಷಸ ಸಾಗರ್ ಮೃತಪಟ್ಟ ಯುವಕ. ಸಾಗರ್ ಶ್ರೀರಂಗಪಟ್ಟಣದ ತಾಲೂಕಿನ ಬಸವಪುರ ಗ್ರಾಮದ ನಿವಾಸಿಯಾಗಿದ್ದು, ಅಂಗಡಿಯಲ್ಲಿ ಮೊಬೈಲ್ ಚಾರ್ಜ್ ಗೆ ಹಾಕುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ.

20 year old youth died while mobile charging

ತಕ್ಷಣ ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರೂ ಆತ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನಾದರೂ ನಾವು ಎಚ್ಚೆತ್ತು, ಮೊಬೈಲ್ ಚಾರ್ಜ್ ಹಾಕುವ ವೇಳೆ ಜಾಗೃತಗೊಳ್ಳಬೇಕಾದ ಅನಿವಾರ್ಯ ಇದೆ.

English summary
Sagar, a 20 year old youth died while mobile charging in Mysuru on Tuesday. Sagar was working as auto driver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X