ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸುರಂಗ ಹೋಲುವ ಪ್ರಾಚೀನ ಕಾಲದ ಬಾವಿ ಪತ್ತೆ

By Yashaswini
|
Google Oneindia Kannada News

ಮೈಸೂರು, ಮೇ 22 : ಪಿರಿಯಾಪಟ್ಟಣದ ಬೆಟ್ಟದಪುರ ಗ್ರಾಮದ ಬಳಿ ಕುಶಾಲನಗರ ರಸ್ತೆಯಲ್ಲಿ ಪ್ರಾಚೀನ ಕಾಲದ ಸುರಂಗ ಹೋಲುವ 20 ಅಡಿ ಆಳದ ಬಾವಿ ಪತ್ತೆಯಾಗಿದೆ. ಬಿಎಸ್ಎನ್ಎಲ್ ವತಿಯಿಂದ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಬಾವಿ ಪತ್ತೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಕುತೂಹಲದಿಂದ ವೀಕ್ಷಿಸಿದರು.

ಬಾವಿಯ ಸಮೀಪದಲ್ಲೇ ಬಸವೇಶ್ವರ ದೇವಸ್ಥಾನ ಹಾಗೂ ಕೆಲ ಶಾಸನಗಳು ಇವೆ. ನಿಧಿ ಇರಬಹುದೆಂದು ಕೆಲವರು ಸಂಶಯ ವ್ಯಕ್ತಪಡಿಸಿದರು. ಬೆಟ್ಟದಪುರ ಇತಿಹಾಸ ಪ್ರಸಿದ್ಧ ತಾಣವಾಗಿದ್ದು, ಚಂಗಾಳ್ವ ರಾಜರು ಸೇರಿದಂತೆ ಹಲವಾರು ಪಾಳೇಗಾರರು ಈ ಗ್ರಾಮವನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಆಳ್ವಿಕೆ ನಡೆಸಿದ್ದಾರೆ.

ಇತಿಹಾಸ ಪ್ರಿಯರ ಗಮನಕ್ಕೆ: ತೀರ್ಥಹಳ್ಳಿಯಲ್ಲಿದೆ 2 ಬೃಹತ್ ಶಿಲಾಗೋರಿಇತಿಹಾಸ ಪ್ರಿಯರ ಗಮನಕ್ಕೆ: ತೀರ್ಥಹಳ್ಳಿಯಲ್ಲಿದೆ 2 ಬೃಹತ್ ಶಿಲಾಗೋರಿ

ಹೀಗಾಗಿ, ಇದು ರಾಜರ ಕಾಲದ ಸುರಂಗ ಮಾರ್ಗವಿರಬಹುದು ಎಂದು ಕೆಲವರು ಸಂಶಯ ವ್ಯಕ್ತಪಡಿಸಿದರು.

20 feet deep well found in mysuru

ಜಿಲ್ಲಾ ಪುರಾತತ್ವ ಇಲಾಖೆಯ ಅಧಿಕಾರಿಗಳಾದ ಗವಿಸಿದ್ಧಯ್ಯ ಮತ್ತು ಎನ್.ಎಲ್ ಗೌಡ ನೇತೃತ್ವದ ತಂಡ ಸ್ಥಳಕ್ಕೆ ಬಂದು ಪರಿಶೀಲಿಸಿದ್ದು, ಇದು ಸುರಂಗವನ್ನು ಹೋಲುವ ಪ್ರಾಚೀನ ಕಾಲದ ಬಾವಿ ಎಂದು ವರದಿ ನೀಡಿ ಎಲ್ಲ ಕುತೂಹಲಗಳಿಗೆ ತೆರೆ ಎಳೆದರು.

20 feet deep well found in mysuru

ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ, ಮುಂದೆ ಯಾವುದೇ ಹಾನಿಯಾಗಬಾರದೆಂಬ ಉದ್ದೇಶದಿಂದ ಬಾವಿಯನ್ನು ಮುಚ್ಚಿಸಲಾಯಿತು.

English summary
Kushalanagar Road near bettadapura village in Piriyapattana Similar to ancient tunnel 20 feet deep well found. Surrounding villagers came and watched curiously.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X