ಮೈಸೂರಿನ 18 ವೈಶಿಷ್ಟ್ಯಕ್ಕೆ ಸಿಗಲಿದೆ ಅಂತರಾಷ್ಟ್ರೀಯ ಮಟ್ಟದ ಹೆಗ್ಗುರುತು

ಮೈಸೂರು, ಆಗಸ್ಟ್ 30: ಅರಮನೆ ನಗರಿ ಮೈಸೂರಿನಲ್ಲಿ ವಿಶೇಷತೆಗಳು ಒಂದೆರಡಲ್ಲ. ಸಾಂಸ್ಕೃತಿಕ ನಗರಿ ಎಂದು ಮೈಸೂರು ಕರೆಸಿಕೊಳ್ಳಲು ಇಂಥ ವಿಶೇಷತೆಗಳೇ ಕಾರಣ ಎಂದರೂ ತಪ್ಪಿಲ್ಲ. ಇಂತಹ 18 ವೈಶಿಷ್ಯಕ್ಕೆ ಭೌಗೋಳಿಕ ವಿಶೇಷತೆಗಳ ಹೆಗ್ಗುರುತನ್ನು ನೀಡಲು ಚಿಂತನೆ ಕೂಡ ನಡೆಸಲಾಗಿದೆ.

ಕರ್ನಾಟಕದ 42 ವಿಶೇಷತೆಗಳಿಗೆ ಜಿಐ (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಸಿಗಲಿದ್ದು, ಅದರಲ್ಲಿ ವಿಶೇಷವಾಗಿ ಮೈಸೂರಿನ 18 ವಿಶೇಷ ಉತ್ಪನ್ನಗಳಿಗೆ ಈ ಟ್ಯಾಗ್ ಸಿಗಲಿದೆ. ಮೈಸೂರು ರೇಷ್ಮೆ ಸೀರೆ, ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಶ್ರೀಗಂಧದ ಎಣ್ಣೆ, ಮೈಸೂರಿನ ಚಿತ್ರಕಲೆ, ಮೈಸೂರು ಅಗರಬತ್ತಿ, ಮೈಸೂರು ರೋಸ್ ವುಡ್ ಚಿತ್ರ ಸೇರಿದಂತೆ ಒಟ್ಟು 18 ವಿಶೇಷತೆಗಳು ಈ ಪಟ್ಟಿಯಲ್ಲಿ ಗುರುತಿಸಿಕೊಂಡಿವೆ.

18 Special things of Mysuru will get International tags

ಮೈಸೂರಿನ ಹೆಗ್ಗುರುತಾದ ನಂಜನಗೂಡು ಬಾಳೆಹಣ್ಣು, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ ಉತ್ಪಾದನೆ ಈಗ ಅಳಿವಿನಂಚಿನಲ್ಲಿದೆ. ಹೀಗಾಗಿ ಇವುಗಳ ಬೆಳೆಗಾರರಿಗೆ ಆರ್ಥಿಕ ಸಹಕಾರ ನೀಡಲು ಸಹ ಸರ್ಕಾರ ಯೋಜನೆ ರೂಪಿಸುತ್ತಿದೆ. ಹೀಗೆ ಜಿಯಾಗ್ರಫಿಕಲ್ ಇಂಡಿಕೇಶನ್ ಗೆ ಈ ವಸ್ತುಗಳನ್ನು ಸೇರಿಸುವುದರಿಂದ ಮೈಸೂರಿನ ಹಿರಿಮೆ ಮತ್ತಷ್ಟು ಹೆಚ್ಚಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+