ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಜಿಲ್ಲೆಯಲ್ಲಿ 130 ಕೊರೊನಾ ವೈರಸ್ ಸೋಂಕು ಪ್ರಕರಣ ಪತ್ತೆ: ಹಲವು ಪ್ರದೇಶ ಸೀಲ್ ಡೌನ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 17: ಮೈಸೂರಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಗುರುವಾರ ಒಂದೇ ದಿನ 130 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,320 ಕ್ಕೆ ಏರಿದೆ. ಗುರುವಾರ ಕೊರೊನಾ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. 70 ವರ್ಷದ ವೃದ್ಧ, 60 ವರ್ಷದ ವೃದ್ಧೆ ಮತ್ತು 45 ವರ್ಷದ ಪುರುಷ ಮೃತಪಟ್ಟಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 50 ಕ್ಕೇರಿದೆ.

ಮೈಸೂರಿನಲ್ಲಿ ಟೀ ಅಂಗಡಿ ಮುಚ್ಚುವ ಆದೇಶಕ್ಕೆ ವ್ಯಾಪಾರಿಗಳು ಗರಂಮೈಸೂರಿನಲ್ಲಿ ಟೀ ಅಂಗಡಿ ಮುಚ್ಚುವ ಆದೇಶಕ್ಕೆ ವ್ಯಾಪಾರಿಗಳು ಗರಂ

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 19 ಮಂದಿಯಲ್ಲಿ, ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ ಬಳಲುತ್ತಿದ್ದ 42 ಮಂದಿ, ಇತರ ರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಬಂದ 8 ಮಂದಿಯಲ್ಲಿ ಹಾಗೂ ಪ್ರಾಥಮಿಕ ಸಂಪರ್ಕಿತ 57 ಮಂದಿಯಲ್ಲಿ ಸೋಂಕಿರುವುದು ಗೊತ್ತಾಗಿದೆ. ಇದೆಲ್ಲದರ ನಡುವೆ ಗುರುವಾರ 28 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

12 ಮಂದಿ ಐಸಿಯುನಲ್ಲಿದ್ದಾರೆ

12 ಮಂದಿ ಐಸಿಯುನಲ್ಲಿದ್ದಾರೆ

ಕೋವಿಡ್ ಜಿಲ್ಲಾ ಆಸ್ಪತ್ರೆಯಲ್ಲಿ 230, ಕೋವಿಡ್ ಇತರೆ ಆಸ್ಪತ್ರೆಗಳಲ್ಲಿ 77, ಕೋವಿಡ್ ಕೇರ್ ಕೇಂದ್ರಗಳಲ್ಲಿ 105 ಹಾಗೂ 246 ಮಂದಿಯನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗಿದೆ. 81 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಐಸಿಯುನಲ್ಲಿದ್ದಾರೆ. 2,100 ಮಂದಿಯನ್ನು 14 ದಿನಗಳ ಹೋಂ ಕ್ವಾರಂಟೈನ್ ಮಾಡಲಾಗಿದೆ. ಒಟ್ಟು 29,713 ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಲಾಕ್‌ಡೌನ್‌ಗೆ ಮೈಸೂರು ಜಿಲ್ಲಾಧಿಕಾರಿ ಆದೇಶ

ಲಾಕ್‌ಡೌನ್‌ಗೆ ಮೈಸೂರು ಜಿಲ್ಲಾಧಿಕಾರಿ ಆದೇಶ

ಇಂದಿನಿಂದ ಜುಲೈ 24, 2020 ರವರೆಗೆ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿ, ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿ, ಮಂಡಿಮೊಹಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಪ್ರದೇಶಗಳು ಲಾಕ್‌ಡೌನ್ ಆಗಲಿವೆ. ಇಲ್ಲಿ ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಹಣ್ಣು, ದಿನಸಿ ಇತ್ಯಾದಿ ಹಾಗೂ ವೈದ್ಯಕೀಯ ಸೇವೆಗಳಿವೆ ಮಾತ್ರ ಅವಕಾಶ ನೀಡಲಾಗಿದೆ.

ಆಷಾಢ ಕೊನೆ ಶುಕ್ರವಾರ ಚಾಮುಂಡೇಶ್ವರಿಗೆ ಸಂಸದೆ ಶೋಭಾ ಪೂಜೆಆಷಾಢ ಕೊನೆ ಶುಕ್ರವಾರ ಚಾಮುಂಡೇಶ್ವರಿಗೆ ಸಂಸದೆ ಶೋಭಾ ಪೂಜೆ

ಮೃತಪಟ್ಟವರ ಮನೆಯ 400 ಮೀಟರ್ ಸುತ್ತಳತೆ ವ್ಯಾಪ್ತಿಯಲ್ಲಿ ಲಾಕ್‌ಡೌನ್

ಮೃತಪಟ್ಟವರ ಮನೆಯ 400 ಮೀಟರ್ ಸುತ್ತಳತೆ ವ್ಯಾಪ್ತಿಯಲ್ಲಿ ಲಾಕ್‌ಡೌನ್

ಹೋಟೆಲ್‌ಗಳಲ್ಲಿ ಸೇವೆ ಇರುವುದಿಲ್ಲ. ಕೇವಲ ಪಾರ್ಸಲ್ ಗೆ ಮಾತ್ರ ಅವಕಾಶವಿರುತ್ತದೆ. ಈ ವ್ಯಾಪ್ತಿಯ ಎಲ್ಲಾ‌ ಧಾರ್ಮಿಕ ಪ್ರಾರ್ಥನೆ, ಹಬ್ಬಗಳ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಸಾರ್ವಜನಿಕರು ಈ ಲಾಕ್‌ಡೌನ್‌ ಪ್ರದೇಶದಲ್ಲಿ ಕೆಲಸ ನಿಮಿತ್ತ ಹೋಗಬಹುದಾಗಿದೆ. ಜನರ ಅತ್ಯಗತ್ಯ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಇಲ್ಲಿನ ನಿವಾಸಿಗಳು ಕೆಲಸಕ್ಕೆ ತೆರಳಲು ಅವಕಾಶವಿದೆ. ಆದರೆ ಅನವಶ್ಯಕ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ವೈರಸ್ ನಿಂದ ಮೃತಪಟ್ಟವರ ಮನೆಯ 400 ಮೀಟರ್ ಸುತ್ತಳತೆ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಲಾಕ್‌ಡೌನ್ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಅಂಗಡಿಗೆ ಸಮಯ ನಿಗದಿ ಮಾಡಲಾಗಿದೆ.

ಎಲ್ಲಾ ರೀತಿಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ

ಎಲ್ಲಾ ರೀತಿಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ

ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಇಲ್ಲಿಂದ ಬೇರೆ ಕಡೆ ಕೆಲಸಕ್ಕೆ ಹೋಗುವ ಸರ್ಕಾರಿ ನೌಕರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅವರು ಸಹ ಗುರುತಿನ ಚೀಟಿ ತೋರಿಸುವುದು ಕಡ್ಡಾಯ‌. ಅವರನ್ನು ಹೊರತುಪಡಿಸಿ ಎಲ್ಲಾ ರೀತಿಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಂಪೂರ್ಣ ಲಾಕ್‌ಡೌನ್ ಪ್ರದೇಶದಲ್ಲಿ ಪ್ರತಿ ಮನೆಯ ಎಲ್ಲಾ ಸದಸ್ಯರ ಕೊರೊನಾ ಪರೀಕ್ಷೆ ನಡೆಸುವ ವ್ಯವಸ್ಥೆ ಸಹ ಮಾಡಲಾಗಿದೆ

ಮುನೇಶ್ವರ ನಗರ, ಕೆಎಚ್ ಬಿ ಕಾಲೋನಿ, ಉದಯಗಿರಿ, ರಾಜೀವ್ ನಗರ, ಬೀಡಿ ಕಾಲೋನಿ, ಸಾತಗಳ್ಳಿ ಈ ಬಡಾವಣೆಗಳ ಮೃತಪಟ್ಟವರ ಮನೆಯಿಂದ 400 ಮೀಟರ್ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

English summary
The number of coronavirus infections in Mysore has been increasing day by day, with 130 Infection cases reported on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X