ದರ ಸಮರಕ್ಕೆ ಸ್ಪೈಸ್‌ಜೆಟ್ : 1,499 ರು.ಗೆ ಟಿಕೆಟ್

ನವದೆಹಲಿ, ಜ. 28: ದೇಶೀಯ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೂ ದರ ಸಮರದಲ್ಲಿ ಹಿಂದೆ ಬಿದ್ದಿಲ್ಲ. ಟಿಕೆಟ್ ಶುಲ್ಕ ಕಡಿತಗೊಳಿಸಿ ಸೂಪರ್ ಸೇಲ್ ಆಫರ್ ಹೊರತಂದಿದೆ.

ನಿದಗಿತ ಅವಧಿಯೊಳಗೆ ಟಿಕೆಟ್ ಖರೀದಿಸಿದವರಿಗೆ 1,499 ರು. ಶುಲ್ಕ ನಿಗದಿಪಡಿಸಿದೆ. ಒಟ್ಟು 5 ಲಕ್ಷ ಟಿಕೆಟ್‌ಗಳನ್ನು ಮಾರಾಟಕ್ಕಿಡಲಾಗಿದೆ.

ಈ ಅವಕಾಶದ ಲಾಭ ಪಡೆಯಲು ಬುಧವಾರದಿಂದ ಮೂರು ದಿನಗಳ ಒಳಗೆ ಟಿಕೆಟ್ ಖರೀದಿಸಬೇಕು. ಇದೇ ವರ್ಷ ಫೆಬ್ರವರಿ 15ರಿಂದ ಜೂನ್ 30ರ ವರೆಗೆ ಈ ಟಿಕೆಟ್‌ನಲ್ಲಿ ಪ್ರಯಾಣ ಬೆಳೆಸಬಹುದು ಎಂದು ಸ್ಪೈಸ್‌ಜೆಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. [ಸ್ಪೈಸ್ ಜೆಟ್ ಹಾರಾಟ ದಿಢೀರ್ ರದ್ದು]

spicejet

ಏರ್‌ಏಷಿಯಾ ಟಿಕೆಟ್ ದರದಲ್ಲಿ ರಿಯಾಯಿತಿ ಪ್ರಕಟಿಸಿದ ಎರಡು ದಿನಗಳ ನಂತರ ಈ ಘೋಷಣೆ ಹೊರಬಿದ್ದಿದೆ. ಜನವರಿ-ಮಾರ್ಚ್ ಮತ್ತು ಜುಲೈ-ಸೆಪ್ಟೆಂಬರ್‌ನಲ್ಲಿ ಸಾಮಾನ್ಯವಾಗಿ ಪ್ರಯಾಣಿಕರ ದಟ್ಟಣೆ ಅತ್ಯಂತ ಕಡಿಮೆ ಇರುವ ಕಾರಣ ಈ ಅವಕಾಶ ನೀಡಲಾಗಿದೆ. [ಸ್ಪೈಸ್ ಜೆಟ್ ನ 1800ಕ್ಕೂ ಹೆಚ್ಚು ದೇಶೀಯ ಹಾರಾಟ ರದ್ದು]

"ವಿಮಾನದ ಸೀಟ್‌ಗಳು ಭರ್ತಿಯಾಗಿಯೇ ಇರಬೇಕು ಎಂದು ನಾವು ಈ ಅವಕಾಶ ಜಾರಿಗೆ ತಂದಿದ್ದೇವೆ" ಎಂದು ಸ್ಪೈಸ್‌ಜೆಟ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಕಾನೇಶ್ವರನ್ ತಿಳಿಸಿದ್ದಾರೆ.

"ಆರ್ಥಿಕತೆಯ ಕಾರಣದಿಂದ ರೈಲು ಹಾಗೂ ಬಸ್ ಪ್ರಯಾಣಕ್ಕೆ ಮೊರೆ ಹೋಗುವ ಪ್ರಯಾಣಿಕರು ಕೂಡ ಈ ಅವಕಾಶದ ಸದುಪಯೋಗ ಪಡೆಯಬೇಕು" ಎಂದು ಅವರು ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+