ಸ್ವಚ್ಛ ಭಾರತ ಅಭಿಯಾನ, ದೇಶಕ್ಕೆ ಮೈಸೂರು ನಂ 1
ಮೈಸೂರು ಆಗಸ್ಟ್ 8 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛ ಭಾರತ ಅಭಿಯಾನದ ಪಟ್ಟಿಯಲ್ಲಿ ಸಾಂಸ್ಕೃತಿ ನಗರಿ ಮೈಸೂರು ಮೊದಲ ಸ್ಥಾನದಲ್ಲಿದೆ. ದೇಶದ 476 ನಗರಗಳ ಪೈಕಿ ಕರ್ನಾಟಕ 4 ನಗರಗಳು ಟಾಪ್ 10 ಪಟ್ಟಿಯಲ್ಲಿವೆ.
31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಈ ಪಟ್ಟಿಯನ್ನು ತಯಾರು ಮಾಡಲಾಗಿದೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ನಗರಗಳಲ್ಲಿ ಕೆಲವು ಮಾನದಂಡಗಳನ್ನು ಇಟ್ಟುಕೊಂಡು ಸಮೀಕ್ಷೆ ನಡೆಸಿ ವರದಿಯನ್ನು ತಯಾರಿಸಲಾಗಿದೆ. [ಪಬ್ಲಿಕ್ ಟಾಯ್ಲೆಟ್ ನಿರ್ಮಾಣದಲ್ಲಿ ಕರ್ನಾಟಕ ನಂ.5]
2014-15ನೇ ಸಾಲಿನಲ್ಲಿ ಶೌಚಾಲಯ ನಿರ್ಮಾಣ, ಕಸ ವಿಲೇವಾರಿ, ಕುಡಿಯುವ ನೀರಿನ ಲಭ್ಯತೆ, ಅಂತರ್ಜಲದ ಲಭ್ಯತೆ, ಕೊಳಚೆ ನೀರು ಸಂಸ್ಕರಣೆ ಮುಂತಾದ ಅಂಶಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದೆ. ದಕ್ಷಿಣ ಭಾರತದ 39 ನಗರಗಳು ಟಾಪ್ 100ರಲ್ಲಿ ಸ್ಥಾನಪಡೆಯುವಲ್ಲಿ ಯಶಸ್ವಿಯಾಗಿವೆ.
ಕರ್ನಾಟಕದ ಮಟ್ಟಿಗೆ ಹೇಳುವುದಾದದರೆ ಮೈಸೂರು ಮೊದಲ ಸ್ಥಾನದಲ್ಲಿದ್ದರೆ, ಹಾಸನ, ಮಂಡ್ಯ,ಬೆಂಗಳೂರು ಟಾಪ್ 10 ಪಟ್ಟಿಯಲ್ಲಿವೆ. ಉತ್ತರ ಪ್ರದೇಶದ 61, ಪಶ್ಚಿಮ ಬಂಗಾಳದ 60, ಆಂಧ್ರಪ್ರದೇಶದ 30, ಗುಜರಾತ್‌ನ 30, ಕರ್ನಾಟಕ 26 ನಗರಗಳು ಸೇರಿದಂತೆ ಒಟ್ಟು 476 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಚಿತ್ರಗಳಲ್ಲಿ ನೋಡಿ ಸಮೀಕ್ಷೆ ವರದಿ....

ಮೈಸೂರು ದೇಶಕ್ಕೆ ಪ್ರಥಮ
ಸ್ವಚ್ಛ ಭಾರತ ಅಭಿಯಾನದಲ್ಲಿ ದೇಶದ 476 ನಗರಗಳ ಪೈಕಿ ಮೈಸೂರು ಮೊದಲ ಸ್ಥಾನ ಪಡೆದಿದೆ. ಕರ್ನಾಟಕ 4 ನಗರಗಳು ಟಾಪ್ 10 ಪಟ್ಟಿಯಲ್ಲಿವೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಕರ್ನಾಟಕದ 4 ನಗರಗಳು ಟಾಪ್ 10ನಲ್ಲಿವೆ
ಮೈಸೂರು ನಗರ ನಂಬರ್ 1 ಸ್ಥಾನದಲ್ಲಿದ್ದರೆ 5ನೇ ಸ್ಥಾನದಲ್ಲಿ ಹಾಸನ, 6ನೇ ಸ್ಥಾನಲ್ಲಿ ಮಂಡ್ಯ ಮತ್ತು 7ನೇ ಸ್ಥಾನದಲ್ಲಿ ಉದ್ಯಾನನಗರಿ ಬೆಂಗಳೂರು ಸ್ಥಾನಪಡೆದಿವೆ.

ಟಾಪ್ 10 ನಗರಗಳು
1.ಮೈಸೂರು, 2.ತಿರುಚಿನಾಪಳ್ಳಿ (ತಮಿಳುನಾಡು),3.ಮುಂಬೈ, 4.ಕೊಚ್ಚಿ (ಕೇರಳ), 5.ಹಾಸನ, 6.ಮಂಡ್ಯ, 7.ಬೆಂಗಳೂರು, 8.ತಿರುವನಂತಪುರಂ, 9. ಹಲಿಸಹರ್ (ಪಶ್ಚಿಮ ಬಂಗಾಳ), 10.ಗ್ಯಾಂಗಟಕ್ (ಸಿಕ್ಕಿಂ).

ನಗರದ ಆಯ್ಕೆಗೆ ಮಾನದಂಡಗಳೇನು?
2014-15ನೇ ಸಾಲಿನಲ್ಲಿ ಶೌಚಾಲಯ ನಿರ್ಮಾಣ, ಕಸ ವಿಲೇವಾರಿ, ಕುಡಿಯುವ ನೀರಿನ ಲಭ್ಯತೆ, ಅಂತರ್ಜಲದ ಲಭ್ಯತೆ ಮುಂತಾದ ಅಂಶಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದೆ. ದಕ್ಷಿಣ ಭಾರತದ 39 ನಗರಗಳು ಟಾಪ್ 100ರಲ್ಲಿ ಸ್ಥಾನಪಡೆಯುವಲ್ಲಿ ಯಶಸ್ವಿಯಾಗಿವೆ.

ಎಷ್ಟು ನಗರಗಳಲ್ಲಿ ಸಮೀಕ್ಷೆ ಮಾಡಲಾಯಿತು?
ಉತ್ತರ ಪ್ರದೇಶದ 61, ಪಶ್ಚಿಮ ಬಂಗಾಳದ 60, ಮಹಾರಾಷ್ಟ್ರದ 43, ಗುಜರಾತ್‌ನ 30, ಮಧ್ಯಪ್ರದೇಶದ 32, ಆಂಧ್ರಪ್ರದೇಶದ 30, ತಮಿಳುನಾಡಿನ 29, ರಾಜಸ್ಥಾನದ 28, ಬಿಹಾರದ 27, ಕರ್ನಾಟಕದ 26, ಹರ್ಯಾಣದ 20, ಪಂಜಾಬಿನ 16, ತೆಲಂಗಾಣದ 11, ಒಡಿಸ್ಸಾದ 10, ಜಾರ್ಖಂಡ್‌ನ 10, ಛತ್ತೀಸ್‌ಗಢ್‌ನ 9 ಸೇರಿ 476 ನಗರಗಳಲ್ಲಿ ಸಮೀಕ್ಷೆ ಮಾಡಲಾಗಿದೆ.

ದಕ್ಷಿಣ ಭಾರತದ 39 ನಗರಗಳು
ದಕ್ಷಿಣ ಭಾರತದ ರಾಜ್ಯಗಳ ಪೈಕಿ 39 ನಗರಗಳು ಟಾಪ್ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ದೇಶದ ರಾಜಧಾನಿಗಳ ಪಟ್ಟಿಯಲ್ಲಿ ಬೆಂಗಳೂರು 7ನೇ ಸ್ಥಾನದಲ್ಲಿದ್ದರೆ ಪಾಟ್ನಾ 429ನೇ ಸ್ಥಾನದಲ್ಲಿದೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications