ಮೈಸೂರಿಗೆ ಬಂದ ಮುದ್ದು ರಾಜಕುಮಾರ: ಒಂದಷ್ಟು ಚಿತ್ರಗಳು

Posted By:
Subscribe to Oneindia Kannada
   ಗಂಡು ಮಗುವಿಗೆ ಜನ್ಮವಿತ್ತ ಮೈಸೂರಿನ ಮಹಾರಾಣಿ ತ್ರಿಶಿಕಾ ಕುಮಾರಿ | Oneindia Kannada

   ರಾಜಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿದೆ ಎಂಬುದೇನು ಕಡಿಮೆ ಸಂತೋಷದ ವಿಷಯವೇ? ಮೈಸೂರು ಮಹಾರಾಜ ಯದುವೀರ ಪತ್ನಿ, ರಾಣಿ ತ್ರಿಷಿಕಾ ಗರ್ಭವತಿ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಇಡಿ ರಾಜ್ಯವೂ ಸಿಹಿ ತಿಂದಷ್ಟು ಸಂತಸಪಟ್ಟಿತ್ತು. ಡಿ.6 ರಾತ್ರಿ ತ್ರಿಷಿಕಾ ಗಂಡುಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ, 'ಸದ್ಯ, ಅಲಮೇಲಮ್ಮನ ಶಾಪವಿಮೋಚನೆಯಾಯ್ತೇನೋ' ಎಂದು ನಿಟ್ಟುಸಿರಿಟ್ಟವರು ಹಲವರು. ಆದರೆ ದತ್ತುಪುತ್ರರಿಗೆ ಈ ಶಾಪ ತಟ್ಟೋಲ್ಲ ಎಂಬ ವಿಷಯ ಹಲವರಿಗೆ ಗೊತ್ತಿರಲಿಕ್ಕಿಲ್ಲ!

   ಅದೇನೇ ಇರಲಿ, ಮೈಸೂರು ರಾಜರ ಮನೆತನದಿಂದ ಸಿಹಿ ಸುದ್ದಿಯೊಂದು ಬಂದಿದೆ. ತ್ರಿಷಿಕಾ, ಮುದ್ದಾದ ಗಂಡುಮಗುವಿಗೆ ಜನ್ಮವಿತ್ತಿದ್ದಾರೆ. ಬಾಣಂತಿ-ಶಿಶು ಆರೋಗ್ಯವಾಗಿದ್ದಾರೆ.

   ಗಂಡು ಮಗುವಿಗೆ ಜನ್ಮವಿತ್ತ ಮೈಸೂರು ಯುವರಾಣಿ ತ್ರಿಷಿಕಾ ಕುಮಾರಿ

   ಬೆಂಗಳೂರಿನ ಇಂದಿರಾನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತ್ರಿಷಿಕಾ ಕುಮಾರಿ, ಗಂಡುಮಗುವನ್ನು ಹೆತ್ತಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆಯೇ ಮೈಸೂರಿನ ಅಂಬಾವಿಲಾಸ ಅರಮನೆಯ ತುಂಬ ಸಂಭ್ರಮದ ಜಾತ್ರೆ ಶುರುವಾಗಿತ್ತು.

   ಮೈಸೂರು ರಾಜವಂಶಸ್ಥರಿಗೆ ಅಲಮೇಲಮ್ಮ ಶಾಪ ಇನ್ನೂ ವಿಮೋಚನೆಯಾಗಿಲ್ವಾ?

   ಮೈಸೂರಿನ ಮುದ್ದು ರಾಜಕುಮಾರನ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ತಮ್ಮ ಮಗುವನ್ನು ಎತ್ತಿ ಮುದ್ದಿಸುತ್ತಿರುವ ದೃಶ್ಯವೂ ಹರಿದಾಡುತ್ತಿದೆ.

   ಯದುವೀರ್ ಪಡಿಯಚ್ಚು!

   ಯದುವೀರ್ ಪಡಿಯಚ್ಚು!

   ಆಗಷ್ಟೇ ಹುಟ್ಟಿದ ಮೈಸೂರು ರಾಜಕುಮಾರನ ಕೆಂಪು ಕೆಂಪು ಮುಖದ ಚಿತ್ರ ನೋಡಿ. ತ್ರಿಷಿಕಾ ಥರಾನೇ ಇದ್ದಾನೆ ಅಂತಲೋ, ಯದುವೀರ್ ದೇ ಪಡಿಯಚ್ಚು ಅಂತಲೋ ಕಮೆಂಟ್ ಕೊಡುವುದಕ್ಕೆ ಮರೆಯಬೇಡಿ!

   ಖುಷಿಯಲ್ಲಿ ತೇಲಿದ ರಾಜಮಾತೆ ಪ್ರಮೋದಾದೇವಿ

   ಖುಷಿಯಲ್ಲಿ ತೇಲಿದ ರಾಜಮಾತೆ ಪ್ರಮೋದಾದೇವಿ

   ತ್ರಿಷಿಕಾ ಅವರಿಗೆ ಹೆರಿಗೆ ನೋವು ಶುರುವಾಗಿ ಅವರು ಬೆಂಗಳೂರಿನ ಇಂದಿರಾ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಮೈಸೂರಿನಿಂದ ಬೆಂಗಳೂರಿಗೆ ಹೊರಟ ರಾಜಮಾತೆ ಪ್ರಮೋದಾ ದೇವಿ, ಮೊಮ್ಮಗ ಮತ್ತು ರಾಜಕುಮಾರನ ಆಗಮನದ ಖುಷಿ ಹಂಚಿಕೊಂಡರು.

   ಮುದ್ದುಕಂದನ ನೋಡಿ ತೃಪ್ತರಾದ ಯದುವೀರ್

   ಮುದ್ದುಕಂದನ ನೋಡಿ ತೃಪ್ತರಾದ ಯದುವೀರ್

   ತಮ್ಮ ಮುದ್ದುಕಂದನನ್ನು ನೋಡಲು ಸಂತೋಷದಿಂದ ವಾರ್ಡಿನತ್ತ ತೆರಳುತ್ತಿರುವ ಮಹಾರಾಜ ಯದುವೀರ. ತಾಯಿ-ಮಗು ಆರೋಗ್ಯದಿಂದಿದ್ದಾರೆ ಎಂಬ ವೈದ್ಯರ ಮಾತು ಕೇಳಿ ನಿಟ್ಟುಸಿರುಬಿಟ್ಟರು ಯದುವೀರ್.

   ದೃಷ್ಟಿ ತೆಗೆಯೋಕೆ ಮರೀಬೇಡಿ!

   ದೃಷ್ಟಿ ತೆಗೆಯೋಕೆ ಮರೀಬೇಡಿ!

   ನೋಡಿದರೆ ಎಲ್ಲಿ ದೃಷ್ಟಿಯಾಗಿಬಿಡುತ್ತೇನೋ ಅನ್ನಿಸುವ ಪುಟ್ಟ ಕಂದ ಮೈಸೂರಿನ ರಾಜಮನೆತನದ ಕೇಂದ್ರಬಿಂದು ಈಗ. ಚಿತ್ರವನ್ನು ನೋಡಿ ಮಗುವಿಗೆ ದೃಷ್ಟಿ ತೆಗೆಯೋಕೆ ಮರೀಬೇಡಿ!

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Few pictures of Mysuru's new born prince is circulating in social media today. Trishika Kumari, wife of Mysuru king Yaduveer Urs gives birth to a baby boy on Dece 06th, in a private hospital in Bengaluru.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ